ETV Bharat / health

ತಿಂಗಳಲ್ಲೇ ಕರಗಿಸಿ ಡೊಳ್ಳು ಹೊಟ್ಟೆ; ಈ ಆಹಾರದಿಂದ ದೂರವಿದ್ರೆ ನೀವು ಸ್ಲಿಮ್​ ಅಂಡ್​​ ಫಿಟ್​ - HOW TO REDUCE BELLY FAT

author img

By ETV Bharat Karnataka Team

Published : Jul 3, 2024, 5:25 PM IST

ಸ್ಥೂಲಕಾಯ ಹೊಂದಿರುವವರಿಗೆ ಬಹುದೊಡ್ಡ ಸಮಸ್ಯೆಯಾಗಿರುವ ಅಂಶ ಹೊಟ್ಟೆಯ ಕೊಬ್ಬು. ಇದು ಅನೇಕರಲ್ಲಿ ಕಿರಿಕಿರಿ, ಮುಜುಗರ ಉಂಟು ಮಾಡುತ್ತದೆ.

want to reduce Belly fat stay away from this foods
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

ನವದೆಹಲಿ: ಸ್ಥೂಲಕಾಯ ಎಂಬುದು ಇಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಸ್ತುತ, ಅತಿ ಹೆಚ್ಚಿನ ಜನರು ಈ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ಥೂಲಕಾಯದ ಸಮಸ್ಯೆಗೆ ಅನೇಕ ಕಾರಣಗಳಿವೆ. ಇದರಲ್ಲಿ ಪ್ರಮುಖವಾಗಿರುವುದು ಅನಾರೋಗ್ಯಕರ ಆಹಾರ ತಿನ್ನುವ ಅಭ್ಯಾಸ ಮತ್ತು ಜೀವನಶೈಲಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಮಾರ್ಗ ಆರೋಗ್ಯಕರ ಮತ್ತು ಉತ್ತಮ ಆಹಾರ ಸೇವನೆ. ಮತ್ತೊಂದು ಆಯ್ಕೆ ಎಂದರೆ ಹೊಟ್ಟೆ ಕರಗಿಸಲು ಕಠಿಣ ದೈಹಿಕ ಚಟುವಟಿಕೆ ಮೂಲಕ ಬೆವರು ಸುರಿಸುವುದಾಗಿದೆ. ಇದರ ಹೊರತಾಗಿ ಕೆಲವು ಆಹಾರಗಳ ಮೂಲಕವೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸ್ಥೂಲಕಾಯ ಹೊಂದಿರುವವರಿಗೆ ಬಹುದೊಡ್ಡ ಸಮಸ್ಯೆಯಾಗಿರುವ ಅಂಶ ಹೊಟ್ಟೆಯ ಕೊಬ್ಬು. ಇದು ಅನೇಕರಲ್ಲಿ ಕಿರಿಕಿರಿ, ಮುಜುಗರ ಉಂಟು ಮಾಡುತ್ತದೆ. ಇಂತಹ ಹೊಟ್ಟೆ ಕೊಬ್ಬನ್ನು ಕರಗಿಸಲು ಕೆಲವು ಮಾರ್ಗಗಳಿವೆ. ಇವುಗಳನ್ನು ಅನುಸರಿಸುವ ಮೂಲಕ ತಿಂಗಳೊಳಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಅಂತಹ ಕೆಲವು ಸಲಹೆ ಇಲ್ಲಿದೆ.

ಸಕ್ಕರೆ ಸೇವನೆ ನಿಲ್ಲಿಸಿ: ಸಕ್ಕರೆಯು ನಿಮ್ಮ ದೇಹದ ಕೊಬ್ಬನ್ನು ಶೀಘ್ರವಾಗಿ ಹೆಚ್ಚಿಸುತ್ತದೆ. ದೇಹದ ತೂಕ ಹೆಚ್ಚಾದಾಗ ಮಾತ್ರವೇ ಈ ಡೊಳ್ಳು ಹೊಟ್ಟೆ ಸಮಸ್ಯೆ ಕಾಡುತ್ತದೆ. ಈ ತೂಕ ಹೆಚ್ಚಾಗುವಲ್ಲಿ ಸಕ್ಕರೆ ಹೊಂದಿರುವ ಆಹಾರ ಸೇವನೆ ಕೂಡ ಪ್ರಮುಖ ಕಾರಣವಾಗಿದೆ. ವ್ಯಕ್ತಿಯೊಬ್ಬ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇವಿಸಿ, ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗದಿದ್ದರೆ, ಈ ಸಕ್ಕರೆಯ ಕೊಬ್ಬು ದೇಹದಲ್ಲಿ ಸಂಗ್ರಹವಾಗುತ್ತದೆ. ಇದು ಡೊಳ್ಳು ಹೊಟ್ಟೆ ಬೆಳವಣಿಗೆಗೆ ಕಾರಣವಾಗುತ್ತದೆ.

ಕಾರ್ಬೋಹೈಡ್ರೇಟ್​ ಸೇವನೆ ಬೇಡ: ಅತಿಹೆಚ್ಚಿನ ಕಾರ್ಬ್ಸ್​ ಮತ್ತು ಟ್ರಾನ್ಸ್​ ಕೊಬ್ಬು ಸೇವನೆ ಕೂಡ ದೇಹದಲ್ಲಿ ಕೊಬ್ಬು ಸಂಗ್ರಹಕ್ಕೆ ಕಾರಣಬಾಗಬಹುದು. ಈ ಹಿನ್ನೆಲೆ ಪ್ಯಾಕ್ಡ್​​ ಆಹಾರ ಸೇವಿಸದಿರುವುದು ಉತ್ತಮ.

ಅಪ್ಪಿ ತಪ್ಪಿಯೂ ಕೋಲ್ಡ್​ ಡ್ರಿಂಕ್​ ಕುಡಿಯಬೇಡಿ: ಕೋಲ್ಡ್​​ ಡ್ರಿಂಕ್​ನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಇದು ಕೂಡ ಅನೇಕ ಬಾರಿ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿ ಹಿನ್ನೆಲೆ ಕೋಲ್ಡ್​ ಡ್ರಿಂಕ್ಸ್​ ಸೇವನೆ ತಪ್ಪಿಸುವುದು ಉತ್ತಮ.

ಪ್ಯಾಕೆಟ್​ ಹಣ್ಣಿನ ರಸದಿಂದ ದೂರವಿರಿ: ಇಂದು ಮಾರುಕಟ್ಟೆಯಲ್ಲಿ ತರಹೇವಾರಿ ಪ್ಯಾಕೆಜ್ಡ್​ ಹಣ್ಣಿನ ಜ್ಯೂಸ್​ಗಳು ಲಭ್ಯವಾಗುತ್ತಿವೆ. ಆದ್ರೆ ಇವುಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಇವುಗಳ ಸೇವನೆಯಿಂದ ಯಾವುದೇ ಆರೋಗ್ಯ ಪ್ರಯೋಜನವಿಲ್ಲ. ಬದಲಾಗಿ ತಾಜಾ ಹಣ್ಣುಗಳನ್ನು ಸೇವಿಸಿ.

ವಿಶೇಷ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಆರೋಗ್ಯ ಸಂಬಂಧಿತ ಟಿಪ್ಸ್ ಮತ್ತು ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕೂದಲು ಕಪ್ಪಾಗಬೇಕೇ? ತ್ವಚೆಯೂ ಹೊಳೆಯಬೇಕೇ? ಆಲೂಗಡ್ಡೆಯ ಹಲವು ಪ್ರಯೋಜನ ತಿಳಿಯಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.