ಆಗ್ರಾ(ಉತ್ತರ ಪ್ರದೇಶ): ಇಂಗ್ಲೆಂಡ್ನ ಮಾಜಿ ಪ್ರಧಾನಿ, ಭಾರತದ ಅಳಿಯ ರಿಷಿ ಸುನಕ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ವಿಶ್ವವಿಖ್ಯಾತ ತಾಜ್ ಮಹಲ್‌ಗೆ ಶನಿವಾರ ಭೇಟಿ ನೀಡಿದರು. ಕೆಲ ದಿನಗಳಿಂದ ಭಾರತ ಪ್ರವಾಸದಲ್ಲಿರುವ ಅವರು ಇಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ರಿಷಿ ಸುನಕ್, ಪತ್ನಿ ಅಕ್ಷತಾ ಮೂರ್ತಿ, ಪುತ್ರಿಯರಾದ ಕೃಷ್ಣ, ಅನುಷ್ಕಾ ಮತ್ತು ರಾಜ್ಯಸಭೆ ಸದಸ್ಯೆ, ಬರಹಗಾರ್ತಿ ಹಾಗು ಅತ್ತೆ ಸುಧಾ ಮೂರ್ತಿ ಅವರೊಂದಿಗೆ ಬಿಗಿ ಭದ್ರತೆಯ ನಡುವೆ ಪ್ರೇಮಸೌಧಕ್ಕೆ ಆಗಮಿಸಿದ್ದರು.
#WATCH | Agra, Uttar Pradesh: Rishi Sunak, former Prime Minister of the United Kingdom, along with his wife, Akshata Murty and mother-in-law, Sudha Murthy, visited the Taj Mahal, in Agra today pic.twitter.com/ZSjuQax0pL
— ANI (@ANI) February 15, 2025
ತಾಜ್ಮಹಲ್ ಆವರಣದೊಳಗೆ ಆಗಮಿಸಿದ ರಿಷಿ ಸುನಕ್ ಥೇಟ್ ಭಾರತೀಯ ಶೈಲಿಯಲ್ಲಿ ಎರಡು ಕೈ ಮುಗಿದು ಜನರತ್ತ ನಮಸ್ಕರಿಸಿದರು. ಜನಸಮೂಹದತ್ತ ಕೈ ಬೀಸಿದರು. ಜನರು ಕೂಡ ಪ್ರೀತಿಯಿಂದ ಪ್ರತಿಕ್ರಿಯಿಸಿದರು.

'ನಿಜಕ್ಕೂ ಇದೊಂದು ಭೇಟಿ'- ಸಂದರ್ಶಕರ ಬುಕ್ನಲ್ಲಿ ಸಹಿ: ತಾಜ್ಮಹಲ್ ವೀಕ್ಷಣೆಯ ಬಳಿಕ ವಾಡಿಕೆಯಂತೆ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಪತ್ನಿಯೊಂದಿಗೆ ಸಹಿ ಹಾಕಿದರು. "ನಿಜಕ್ಕೂ ಇದೊಂದು ಭೇಟಿ. ಜಗತ್ತಿನ ಕೆಲವೇ ಅವಿಸ್ಮರಣೀಯ ಸ್ಥಳಗಳಲ್ಲಿ ತಾಜ್ ಮಹಲ್ ಕೂಡ ಒಂದು. ನಮ್ಮ ಮಕ್ಕಳು ಇದನ್ನು ವೀಕ್ಷಿಸಿದ್ದು ಎಂದಿಗೂ ಮರೆಯುವುದಿಲ್ಲ. ಆತ್ಮೀಯ ಆತಿಥ್ಯಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಮ್ಮ ಇಡೀ ಕುಟುಂಬಕ್ಕೆ ಮರೆಯಲಾಗದ ಅನುಭವ. ಧನ್ಯವಾದಗಳು" ಎಂದು ಸುನಕ್ ಬರೆದಿದ್ದಾರೆ.

ಪತ್ನಿ ಅಕ್ಷತಾ ಮೂರ್ತಿ ಅವರು ಕೂಡ ತಮ್ಮ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದು, "ಇದು ಯುಗಾಂತರಗಳ ನೆನಪು" ಎಂದು ಅದ್ಭುತ ಸಾಲಿನ ಸಮೇತ ಸಹಿ ಹಾಕಿದ್ದಾರೆ.
ಸುನಕ್ ಕ್ರಿಕೆಟ್ ಪ್ರೀತಿ: ಮಾಜಿ ಪ್ರಧಾನಿ ಸುನಕ್ ಫೆಬ್ರವರಿ 2ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಐದನೇ ಟಿ20 ಪಂದ್ಯವನ್ನು ವೀಕ್ಷಿಸಿದ್ದರು.
Tough day for England at the Wankhede but I know our team will come back stronger.
— Rishi Sunak (@RishiSunak) February 2, 2025
Congratulations to Team India on the win.
Despite the result, it was an honour to meet @josbuttler and @surya_14kumar before the match and a pleasure to watch the cricket with my father-in-law. pic.twitter.com/m2nzQbFujG
ಅದಕ್ಕೂ ಮೊದಲು ಫೆಬ್ರವರಿ 1ರಂದು ರಾಜಸ್ಥಾನದಲ್ಲಿ ನಡೆದ ಜೈಪುರ ಸಾಹಿತ್ಯ ಉತ್ಸವದಲ್ಲಿ ಪತ್ನಿ ಅಕ್ಷತಾ ಮೂರ್ತಿ, ಅತ್ತೆ ಸುಧಾ ಮೂರ್ತಿ ಮತ್ತು ಮಾವ ನಾರಾಯಣ ಮೂರ್ತಿ ಅವರೊಂದಿಗೆ ಭಾಗವಹಿಸಿದ್ದರು.
ಭಾರತದ ಅಳಿಯ ರಿಷಿ ಸುನಕ್ 2022ರ ಅಕ್ಟೋಬರ್ನಿಂದ 2024ರ ಜುಲೈವರೆಗೆ ಇಂಗ್ಲೆಂಡ್ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸೋಲುವ ಮೂಲಕ ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ 2 ದಿನಗಳ ಭಾರತ ಭೇಟಿ: ತಾಜ್ ಮಹಲ್ ವೀಕ್ಷಿಸಲಿರುವ ಬ್ರಿಟನ್ ಜೋಡಿ