ETV Bharat / state

ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಮುನಿಯಪ್ಪ - MINISTER KH MUNIYAPPA

ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ. ಆದರೆ, ಅವರು ಹೇಳಿದಾಗ ಮಾತ್ರ ಈ ಸಮಾವೇಶ ಮಾಡುತ್ತೇವೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

MINISTER KH MUNIYAPPA
ವಿಧಾನಸೌಧದಲ್ಲಿ ಸಚಿವ ಕೆ.ಹೆಚ್.​ಮುನಿಯಪ್ಪ ಸುದ್ದಿಗೋಷ್ಠಿ (ETV Bharat)
author img

By ETV Bharat Karnataka Team

Published : Feb 19, 2025, 8:20 PM IST

ಬೆಂಗಳೂರು: ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆಯೇ ಹೈಕಮಾಂಡ್ ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಒಗ್ಗೂಡಿಸಿ ಅಂತ ಹೇಳಿತ್ತು. ಹೈಕಮಾಂಡ್ ಯಾವಾಗ ಸಮಾವೇಶ ಮಾಡಬೇಕೆಂದು ಹೇಳುತ್ತದೋ ಆವಾಗ ಸಮಾವೇಶವನ್ನು ಮಾಡುತ್ತೇವೆ ಎಂದರು.

ವಿಧಾನಸೌಧದಲ್ಲಿ ಸಚಿವ ಕೆ.ಹೆಚ್.​ಮುನಿಯಪ್ಪ ಸುದ್ದಿಗೋಷ್ಠಿ (ETV Bharat)

ನಾನೇನೂ ಹೈಕಮಾಂಡ್ ಭೇಟಿಯಾಗಲ್ಲ. ಸಮಾವೇಶ ಮಾಡಬೇಕು ಅಂತ ರಾಜಣ್ಣ, ಪರಮೇಶ್ವರ್ ಸೇರಿ ಹಲವರು ಮನವಿ ಮಾಡಿದ್ದಾರೆ. ಬೇರೆಯವರು ಹೇಳಿದ್ದನ್ನೇ ನಾನು ಹೋಗಿ ಹೇಳಬೇಕು. ಚಿತ್ರದುರ್ಗದಲ್ಲಿ ಮಾಡಿದ ಐಕ್ಯತಾ ಸಮಾವೇಶ ಪಕ್ಷಕ್ಕೆ ಶಕ್ತಿ ತುಂಬಿದೆ. ಆ ಸಮಾವೇಶದಿಂದ ನಮಗೆ ಹೆಚ್ಚು ಲಾಭ ಆಗಿತ್ತು. ಚಿತ್ರದುರ್ಗದಲ್ಲಿ ಸಮಾವೇಶ ಮಾಡಬೇಕೆಂದು ಹೈಕಮಾಂಡ್ ನಾಯಕರೇ ಹೇಳಿದ್ದರು. ಈಗ ಕೃತಜ್ಞತಾ ಸಮಾವೇಶ ಅಂತಲೋ ಅಥವಾ ಬೇರೆ ಕಾರ್ಯಕ್ರಮ ಮಾಡಬೇಕು. ಹೈಕಮಾಂಡ್​ನಿಂದ ಇದಕ್ಕೆ ವಿರೋಧ ಇಲ್ಲ. ಆದರೆ, ಅವರು ಹೇಳಿದಾಗ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಸಭೆ ಸೇರುವುದರಲ್ಲಿ ತಪ್ಪಿಲ್ಲ, ನಾವು ಒಟ್ಟಿಗೆ ಸೇರಲೇಬಾರದಾ?: ಸಚಿವ ಪ್ರಿಯಾಂಕ್ ಖರ್ಗೆ - MINISTER PRIYANK KHARGE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.