ETV Bharat / sports

ಸೂರ್ಯಕುಮಾರ್ ಕ್ಯಾಚ್ ಮಾತ್ರವಲ್ಲ, ಬೌಲರ್‌ಗಳಿಂದ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು: ಮದನ್ ಲಾಲ್ - Madan Lal - MADAN LAL

ಜೂನ್ 29 ರಂದು ಭಾರತದ ವಿಶ್ವಕಪ್ ವಿಜಯೋತ್ಸವದ ನಂತರ, ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಅವರು ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಮಾತ್ರವಲ್ಲದೇ, ಬೌಲಿಂಗ್ ಘಟಕದ ಅದ್ಭುತ ಪ್ರದರ್ಶನವು ಭಾರತ ತಂಡದ ಗೆಲುವಿಗೆ ಸಹಾಯ ಮಾಡಿದೆ ಎಂದು ಭಾರತೀಯ ಬೌಲಿಂಗ್ ಘಟಕವನ್ನು ಹೊಗಳಿದ್ದಾರೆ. ಈಟಿವಿ ಭಾರತ್‌ನ ಸಂಜಿಬ್ ಗುಹಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಮುಂದಿನ ನಾಯಕರಾಗಬಹುದು ಎಂದು ಅವರು ಸುಳಿವು ನೀಡಿದ್ದಾರೆ.

T20 World Cup Final  India won the T20 World Cup  Madan Lal  Suryakumar Yadav
ಈಟಿವಿ ಭಾರತ್ ಸ್ಪೆಷಲ್: ಸೂರ್ಯಕುಮಾರ್ ಕ್ಯಾಚ್ ಮಾತ್ರವಲ್ಲ, ಬೌಲರ್‌ಗಳಿಂದ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು: ಮದನ್ ಲಾಲ್ (ETV Bharat)
author img

By ETV Bharat Karnataka Team

Published : Jul 3, 2024, 4:18 PM IST

ಕೋಲ್ಕತ್ತಾ: ಟೂರ್ನಮೆಂಟ್‌ನಲ್ಲಿ ಭಾರತವು ಅಜೇಯವಾಗಿ ಮುನ್ನುಗ್ಗುವ ಮೂಲಕ 2024ರ ಟಿ20 ವಿಶ್ವಕಪ್ ಅನ್ನು ಗೆದ್ದಿದೆ. ಆದರೆ, ಅಂತಿಮವಾಗಿ ಪ್ರಶಸ್ತಿ ಗೆಲ್ಲಲು ಕಳೆದ ಶನಿವಾರ ಬ್ರಿಡ್ಜ್‌ಟೌನ್‌ನ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಕೆಲವು ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. ವಿರಾಟ್ ಕೊಹ್ಲಿ ಹೆಚ್ಚು ಅಗತ್ಯವಿದ್ದಾಗ 59 ಎಸೆತಗಳಲ್ಲಿ 76 ರನ್ ಗಳಿಸಿ ಭಾರತ ತಂಡಕ್ಕೆ ನೆರವಾದರು.

ನಂತರ ಸ್ಪರ್ಧಾತ್ಮಕ ಮೊತ್ತವನ್ನು ರಕ್ಷಿಸಲು ಬೌಲರ್‌ಗಳು ಮುಂದಾದರು. ಡೇವಿಡ್ ಮಿಲ್ಲರ್ ಅವರನ್ನು ವಿಕೆಟ್​ ಎತ್ತಲು ಸೂರ್ಯ ಕುಮಾರ್ ಯಾದವ್ ಅಸಾಧ್ಯವಾದ ಕ್ಯಾಚ್ ಹಿಡಿದರು. 1983ರ ವಿಶ್ವಕಪ್ ಫೈನಲ್‌ನಲ್ಲಿ ಸರ್ ವಿವ್ ರಿಚರ್ಡ್ಸ್ ಅವರನ್ನು ವಿಕೆಟ್​ ಪಡೆಯಲು ಕಪಿಲ್ ದೇವ್ ಕಠಿಣವಾದ ಕ್ಯಾಚ್​ ಹಿಡಿದಿದ್ದನ್ನು ನೆನಪಾಗುತ್ತದೆ. ಅಲ್ಲದೇ, ಬೌಲರಗಳಾದ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರು ಭಾರತದ ಪರವಾಗಿ ಮಹತ್ವದ ವಿಕೆಟ್​ಗಳನ್ನು ಪಡೆದರು. ಹಾಗಾದರೆ ಫೈನಲ್​ ಪಂದ್ಯ ನಿಜವಾಗಿ ಟರ್ನ್​ ಆಗಿದ್ದು ಯಾವುದು? ETV ಭಾರತ ಜೊತೆಗೆ ಸಂದರ್ಶನದಲ್ಲಿ 1983ರ ವಿಶ್ವಕಪ್ ವಿಜೇತ ತಂಡದ ನಿರ್ಣಾಯಕ ಸದಸ್ಯ ಮದನ್ ಲಾಲ್ ಅವರು ಭಾರತ ತಂಡದ ಗೆಲುವಿನ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮದನ್ ಲಾಲ್​ ಸಂದರ್ಶನದ ಆಯ್ದ ಭಾಗ: ಪ್ರಶ್ನೆ: 1983ರ ವಿಶ್ವಕಪ್ ಫೈನಲ್‌ನಲ್ಲಿ ಕಪಿಲ್ ದೇವ್ ಕ್ಯಾಚ್ ಮತ್ತು 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಕ್ಯಾಚ್​​ ನೆನಪಿಸಿಕೊಂಡರೆ, ಈ ಎರಡು ಕ್ಯಾಚ್‌ಗಳನ್ನು ನೀವು ಹೇಗೆ ಹೋಲಿಸುತ್ತೀರಿ?

ಮದನ್ ಲಾಲ್: ಈ ಕ್ಯಾಚ್‌ಗಳನ್ನು ಹೋಲಿಸುವುದು ತುಂಬಾ ಕಷ್ಟ. ಸೂರ್ಯ ಕುಮಾರ್ ಅವರು ಕಪಿಲ್ ದೇವ್‌ಗಿಂತ ಉತ್ತಮ ಕ್ಯಾಚ್ ಹಿಡಿದಿದ್ದಾರೆ. ಬೌಂಡರಿ ಲೈನ್​ ಸನಿಹದಲ್ಲೇ ಅವರು ಕ್ಯಾಚ್ ಪಡೆದರು. ಆದರೆ, ಈ ಕ್ಯಾಚ್‌ಗಳಿಂದ ಪಂದ್ಯಗಳು ಟರ್ನ್​ ಆಗಿವೆ. ಎರಡು ಕ್ಯಾಚ್‌ಗಳನ್ನು ಹೇಗೆ ಹೋಲಿಸುವುದು ಎಂದು ನನಗೆ ತಿಳಿದಿಲ್ಲ. ಎರಡೂ ಕ್ಯಾಚ್‌ಗಳು ಫೈನಲ್ ಪಂದ್ಯಗಳನ್ನು ಟರ್ನ್​ ಮಾಡಿವೆ ಎಂದು ನಾನು ಹೇಳಬಲ್ಲೆ.

ಪ್ರಶ್ನೆ: ಕಪಿಲ್ ದೇವ್ ಹಿಡದ ಆ ಕ್ಯಾಚ್ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದರೆ, ಈಗ ಸೂರ್ಯಕುಮಾರ್​ ಹಿಡಿದ ಕ್ಯಾಚ್ ಭಾರತಕ್ಕೆ ಮತ್ತೊಮ್ಮೆ ಗೆದ್ದುಕೊಟ್ಟಿದೆ ಎಂದು ನೀವು ಒಪ್ಪುತ್ತೀರಾ?

ಮದನ್ ಲಾಲ್: ಇಲ್ಲಿ, ಸೂರ್ಯಕುಮಾರ್​ ಹಿಡಿದ ಆ ಕ್ಯಾಚ್ ಮಾತ್ರ ಭಾರತಕ್ಕೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು ಎಂದು ನಾನು ಭಾವಿಸುವುದಿಲ್ಲ. ನನ್ನ ಅಭಿಪ್ರಾಯದಲ್ಲಿ, ಟಿ20 ವಿಶ್ವಕಪ್‌ನಲ್ಲಿ ಭಾರತದ ಬೌಲಿಂಗ್ ಘಟಕದಿಂದ ಗೆಲುವು ಲಭಿಸಿದೆ.

ಪ್ರಶ್ನೆ: 2024ರ ಬೌಲಿಂಗ್ ಘಟಕಕ್ಕೆ 1983ರ ತಂಡದ ಬೌಲಿಂಗ್ ಘಟಕವನ್ನು ನೀವು ಹೇಗೆ ಹೋಲಿಸುತ್ತೀರಿ?

ಮದನ್ ಲಾಲ್: 2024 ರಲ್ಲಿ ಬೌಲರ್‌ಗಳು ಪಂದ್ಯವನ್ನು ಟರ್ನ್​ ಮಾಡಿದರು. ಏಕೆಂದರೆ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿತು. ಆ ಹಂತದಲ್ಲಿಯೇ, ಜಸ್ಪ್ರೀತ್ ಬುಮ್ರಾ ಅವರು (ಹೆನ್ರಿಚ್) ಕ್ಲಾಸೆನ್ ವಿಕೆಟ್ ಪಡೆದರು. ಮತ್ತು ಪಂದ್ಯವನ್ನು ಭಾರತದತ್ತ ಟರ್ನ್​ ಮಾಡಿದರು. ಅದಕ್ಕಾಗಿಯೇ ಬೌಲರ್‌ಗಳು ಫೈನಲ್​ ಪಂದ್ಯದ ಗೆಲುವಿಗೆ ಮಹತ್ವ ಕೊಡುಗೆ ನೀಡಿದರು ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆ: ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಬಗ್ಗೆ ಏನು ಹೇಳಿತ್ತೀರಿ?

ಮದನ್ ಲಾಲ್: ವಿರಾಟ್ ಮ್ಯಾಚ್ ವಿನ್ನರ್ ಎಂದು ನಾನು ಯಾವಾಗಲೂ ನಂಬುತ್ತೇನೆ. ಅವರು ಪರಿಸ್ಥಿತಿಗೆ ತಕ್ಕಂತೆ ಆಡುವ ಬ್ಯಾಟರ್. ವಿರಾಟ್ ಎಂತಹ ಬ್ಯಾಟರ್ ಎಂದರೆ, ನಿರ್ಣಾಯಕ ವಿಕೆಟ್‌ ಒಪ್ಪಿಸದೇ ಕ್ರಿಸ್​ನಲ್ಲಿ ನಿಂತು ಆಡಿದರು. ವೇಗವರ್ಧನೆಯ ಅಗತ್ಯವಿರುವಾಗ ತುಂಬಾ ಫಾಸ್ಟ್​ ಆಟವಾಡುತ್ತಾರೆ. ಒಬ್ಬ ಶ್ರೇಷ್ಠ ಆಟಗಾರ ಯಾವಾಗಲೂ ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತಾನೆ. ಅದಕ್ಕಾಗಿಯೇ ವಿರಾಟ್​ ಶ್ರೇಷ್ಠ ಆಟಗಾರ.

ಪ್ರಶ್ನೆ: ನಿಮ್ಮ ಪ್ರಕಾರ ಟಿ20 ವಿಶ್ವಕಪ್ ಫೈನಲ್‌ನ ಟರ್ನಿಂಗ್ ಪಾಯಿಂಟ್ ಯಾವುದು?

ಮದನ್ ಲಾಲ್: ಕ್ಲಾಸೆನ್ ಅವರ ವಿಕೆಟ್ ಪಂದ್ಯದ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ. ಡೇವಿಡ್ ಮಿಲ್ಲರ್ ಇನ್ನೂ ಅಲ್ಲಿದ್ದಾರೆಂದು ನನಗೆ ತಿಳಿದಿದೆ. ಆದರೆ, ಕ್ಲಾಸೆನ್ ಒಂದು ಅಥವಾ ಎರಡು ಓವರ್ ಅಲ್ಲಿದ್ದರೆ, ಅವರು ಪಂದ್ಯವನ್ನು ನಮ್ಮಿಂದ ದೂರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅದೊಂದು ದೊಡ್ಡ ವಿಕೆಟ್ ಆಗಿತ್ತು. ಜೊತೆಗೆ ಇತರ ಪ್ರೋಟಿಯಸ್ ಬ್ಯಾಟರ್‌ಗಳ ಮೇಲೆ ಒತ್ತಡವನ್ನು ಸೃಷ್ಟಿಸಿತು.

ಪ್ರಶ್ನೆ: ಮೂರು ಪ್ರಮುಖ ಆಟಗಾರರಾದ ವಿರಾಟ್, ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ನಿವೃತ್ತರಾಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮದನ್ ಲಾಲ್: ನಿವೃತ್ತಿ ಯಾವಾಗಲೂ ವೈಯಕ್ತಿಕ ನಿರ್ಧಾರ. ಆದರೆ, ನಾವು ಖಂಡಿತವಾಗಿಯೂ ಅವರನ್ನು ಕಳೆದುಕೊಳ್ಳುತ್ತೇವೆ. ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಮತ್ತು ಅವರ ಆಕ್ರಮಣಶೀಲತೆಯ ಬ್ಯಾಟಿಂಗ್ ಪುನರಾವರ್ತಿಸುವುದು ಕಷ್ಟ. ರೋಹಿತ್ ಶರ್ಮಾ ಅವರ ಸೊಗಸಾದ ಸ್ಟ್ರೋಕ್‌ಪ್ಲೇ ಮತ್ತು ಜಡೇಜಾ ಅವರ ಆಲ್‌ರೌಂಡ್ ಸಾಮರ್ಥ್ಯಗಳನ್ನು ಮಿಸ್​ ಮಾಡಿಕೊಳ್ಳುತ್ತೇವೆ. ಜಡೇಜಾ ತಂಡಕ್ಕಾಗಿ ರನ್ ಗಳಿಸಿದರು, ವಿಕೆಟ್‌ಗಳನ್ನು ಪಡೆದರು ಹಾಗೂ ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾಗಿದರು. ಭಾರತವು ಈ ಮೂರನ್ನೂ ಮಿಸ್ ಮಾಡಿಕೊಳ್ಳುತ್ತದೆ.

ಪ್ರಶ್ನೆ: ಅಗ್ರ ಆಟಗಾರರ ನಿವೃತ್ತಿಯ ನಂತರ, ಮೆನ್ ಇನ್ ಬ್ಲೂ ತಂಡದ ಬಗ್ಗೆ ಏನು ಹೇಳಲು ಬಯಸುತ್ತೀರಿ?

ಮದನ್ ಲಾಲ್: ಅವರಿಲ್ಲದೆ, ತಂಡವು ಸಾಕಷ್ಟು ಪ್ರತಿಭೆಗಳನ್ನು ಹೊಂದಿದ್ದರೂ, ನಾವು ಮತ್ತೆ ಅಸಾಧಾರಣ ಘಟಕವನ್ನು ನಿರ್ಮಿಸಬೇಕಾಗಿದೆ.

ಪ್ರಶ್ನೆ: ಈಗ ತಂಡವನ್ನು ಯಾರು ಮುನ್ನಡೆಸಬೇಕು? ನೀವು ಯಾವುದನ್ನಾದರೂ ಹೆಸರಿಸಬಹುದೇ?

ಮದನ್ ಲಾಲ್: ಎಲ್ಲರಿಂದ ಗೌರವವನ್ನು ಪಡೆಯುವವನು ಮತ್ತು ನಾಯಕತ್ವದ ಗುಣಗಳನ್ನು ಹೊಂದಿರಬೇಕು. ನಿಖರವಾಗಿ ಯಾರು ನಾಯಕರಾಗಬೇಕೆಂದು ನನಗೆ ಖಚಿತವಿಲ್ಲ, ಆದರೆ, ಬಹಳಷ್ಟು ಅನುಭವಿ ಹಾರ್ದಿಕ್ ಪಾಂಡ್ಯ. ಉಳಿದವರು ನಾಯಕನ ಪಾತ್ರವನ್ನು ನಿಭಾಯಿಸುವಷ್ಟು ಅನುಭವಿಗಳಲ್ಲ. ಜಸ್ಪ್ರೀತ್ ಬುಮ್ರಾ ಅವರು ಅತ್ಯುತ್ತಮ ಆಟಗಾರರಾಗಿದ್ದಾರೆ. ಆದರೆ, ಅವರ ನಾಯಕತ್ವದ ಗುಣಗಳ ಬಗ್ಗೆ ನನಗೆ ಖಚಿತವಿಲ್ಲ. ಆದರೆ, ಪಾಂಡ್ಯ ಅವರು ಈಗಾಗಲೇ ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹಾಗಾಗಿ ಈಗ ಪಾಂಡ್ಯ ಕ್ಯಾಪ್ಟನ್​ ಸೀಟ್‌ನಲ್ಲಿ ಕೂರಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ರನ್, ವಿಕೆಟ್‌ ಅಲ್ಲ, ಇಂತಹ ಕ್ಷಣಗಳು ಶಾಶ್ವತ: ಟೀಂ ಇಂಡಿಯಾದ ನಿರ್ಗಮಿತ ಕೋಚ್​ ದ್ರಾವಿಡ್​​ ಸ್ಪೂರ್ತಿದಾಯಕ, ಭಾವನಾತ್ಮಕ ಮಾತು! - RAHUL DRAVID FAIRWELL SPEECH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.