ETV Bharat / snippets

'ತುಂಗಾ ನದಿ ನೀರು ಸ್ವಚ್ಛಗೊಳಿಸಿ': ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ನಟ ಅನಿರುದ್ಧ್

author img

By ETV Bharat Karnataka Team

Published : Jun 26, 2024, 4:50 PM IST

Updated : Jun 26, 2024, 6:10 PM IST

Anirudh Met CM Siddaramaiah
ಸಿಎಂ ಸಿದ್ದರಾಮಯ್ಯ ಭೇಟಿಯಾದ ನಟ ಅನಿರುದ್ಧ್ (ETV Bharat)

ಬೆಂಗಳೂರು: ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರನ್ನು ನಟ ಅನಿರುದ್ಧ್ ಜತ್ಕರ್ ಭೇಟಿ ಮಾಡಿ ತುಂಗಾ ನದಿ ನೀರು ಸ್ವಚ್ಛತೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅನಿರುದ್ಧ್ ಮನವಿ ಪತ್ರ ಸಲ್ಲಿಸಿದರು. ಸಿಎಂ ಕೂಡಲೇ ನೀರಾವರಿ‌ ನಿಗಮದ ಎಂಡಿ ರಾಜೇಶ್​ಗೆ ಕರೆ ಮಾಡಿ ಕೂಡಲೇ ನದಿ ಸ್ವಚ್ಛತೆಗೆ ಗಮನ ಹರಿಸುವಂತೆ ಸೂಚಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಸಿನಿಮಾ ಪ್ರಚಾರದ ವೇಳೆ ಶಿವಮೊಗ್ಗಕ್ಕೆ ಹೋಗಿದ್ದೆ. ಅಲ್ಲಿ ಹರಿಯುವ ತುಂಗಾ ನದಿಯ ಸ್ಥಿತಿ ನೋಡಿ ಬೇಸರವಾಯಿತು. ಚರಂಡಿ‌ ನೀರನ್ನು ನದಿಗೆ ಬಿಟ್ಟಿದ್ದಾರೆ. ಕಳೆ ಬೆಳೆದುಕೊಂಡಿದೆ ಎಂದು ಹೇಳಿದರು. ಅದೇ ನೀರು ಹರಿಹರ, ಹೊಸಪೇಟೆಗೆ ಹೋಗುತ್ತಿದೆ. ಮಂತ್ರಾಲಯದಲ್ಲಿ ನಾವು ಬಳಸುವ ತೀರ್ಥ ಕೂಡ ಇದೇ ನದಿ ನೀರಿನದ್ದು. ತುಂಗೆಯ ಋಣ ನಮ್ಮೆಲ್ಲರ ಮೇಲಿದೆ. ಅಳಿಲು ಸೇವೆ ಮಾಡೋ ನಿಟ್ಟಿನಲ್ಲಿ ನಾನಿಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಸಿಎಂ ಕೂಡ ತಕ್ಷಣ ಸ್ಪಂದಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ, ನದಿ ನೀರನ್ನು ಸ್ವಚ್ಛಗೊಳಿಸಲು ತಿಳಿಸಿದ್ದಾರೆ ಎಂದರು.

Last Updated : Jun 26, 2024, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.