ETV Bharat / snippets

ಪ್ರಭಾಸ್​ಗೆ ₹150 ಕೋಟಿ ಸಂಭಾವನೆ!?: 'ಕಲ್ಕಿ' ಚಿತ್ರಕ್ಕೆ ಅಮಿತಾಬ್, ದೀಪಿಕಾ, ಕಮಲ್​​ ಪಡೆದ ಸಂಭಾವನೆ ಎಷ್ಟು ಗೊತ್ತಾ?

author img

By ETV Bharat Karnataka Team

Published : Jun 22, 2024, 11:51 AM IST

Kalki 2898AD Budget  Kalki 2898AD Remuneration  AMITAB DEEPIKA KAMAL REMUNERATION  KALKI 2898AD BUDGET 600 CRORES
ಪ್ರಭಾಸ್​ಗೆ ₹150 ಕೋಟಿ ಸಂಭಾವನೆ: 'ಕಲ್ಕಿ' ಚಿತ್ರಕ್ಕೆ ಅಮಿತಾಬ್, ದೀಪಿಕಾ, ಕಮಲ್​​ ಪಡೆದ ಸಂಭಾವನೆ ಎಷ್ಟು? (ETV Bharat)

Kalki 2898AD Budget and Remuneration: ಪ್ರಸ್ತುತ ಸಿನಿ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಕಲ್ಕಿ 2898 AD ಚಿತ್ರ ಜೂನ್ 27 ರಂದು ಬಿಡುಗಡೆಯಾಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಗ್ರ್ಯಾಂಡ್ ವಿಶುವಲ್ ವಂಡರ್ ಸೈಂಟಿಫಿಕ್ ಸಿನಿಮಾದಿಂದ ಬಾಕ್ಸ್ ಆಫೀಸ್ ಧೂಳೆಬ್ಬಿಸಲಿ ಎಂದು ಪ್ರೇಕ್ಷಕರೆಲ್ಲರೂ ಹಾರೈಸುತ್ತಿದ್ದಾರೆ.

ವೈಜಯಂತಿ ಮೂವೀಸ್ ಬ್ಯಾನರ್ ಅಡಿ ನಿರ್ಮಾಪಕ ಸಿ. ಅಶ್ವಿನಿದತ್ ಅವರು ಸುಮಾರು ₹600 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಚಿತ್ರದಲ್ಲಿರುವ ಸ್ಟಾರ್​ ನಟರಿಗೆ ಬರೋಬ್ಬರಿ ₹250 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

ಪ್ರಭಾಸ್ 150 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ತಲಾ ₹20 ಕೋಟಿ ಹಾಗೂ ದಿಶಾ ಪಟಾನಿಗೆ 5 ಕೋಟಿ ರೂ.ವರೆಗೆ ಸಂಭಾವನೆ ನೀಡಲಾಗಿದೆಯಂತೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಯಾವ ರೀತಿ ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.