ETV Bharat / state

ಬೆಂಗಳೂರು: ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ನಾಳೆ ಚಾಲನೆ, ಖರೀದಿಗೆ ಇಂದೇ ಮುಗಿಬಿದ್ದ ಜನ - KADALEKAI PARISHE 2024

ಬಸವನಗುಡಿಯ ಇತಿಹಾಸ ಪ್ರಸಿದ್ಧ ಕಡಲೆಕಾಯಿಗೆ ಪರಿಷೆಗೆ ನಾಳೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಕಡಲೆಕಾಯಿ ಪರಿಷೆ
ಕಡಲೆಕಾಯಿ ಪರಿಷೆ (ETV Bharat)
author img

By ETV Bharat Karnataka Team

Published : Nov 24, 2024, 7:15 PM IST

ಬೆಂಗಳೂರು: ಬಸವನಗುಡಿಯ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಸಿದ್ಧತೆ ಭರದಿಂದ ನಡೆದಿದ್ದು, ಪರಿಷೆ ಆರಂಭಕ್ಕೂ ಮುನ್ನವೇ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಬಸವನಗುಡಿಯ ದೊಡ್ಡಬಸವಣ್ಣ ಮತ್ತು ದೊಡ್ಡಗಣಪತಿ ದೇವಸ್ಥಾನದಲ್ಲಿ ನಾಳೆ(ಸೋಮವಾರ) ಮತ್ತು ಮಂಗಳವಾರ ಕಡಲೆಕಾಯಿ ಪರಿಷೆ ನಡೆಯಲಿದೆ. ಈಗಾಗಲೇ ಬುಲ್ ಟೆಂಪಲ್ ರಸ್ತೆಯ ಎಲ್ಲೆಡೆ ಮತ್ತು ಸುತ್ತಮುತ್ತ ಕಡಲೆಕಾಯಿ ವ್ಯಾಪಾರ ಆರಂಭವಾಗಿದೆ. ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ವ್ಯಾಪಾರಿಗಳು ಆಗಮಿಸಿದ್ದು, ತರಹೇವಾರಿ ಕಡಲೆಕಾಯಿಯನ್ನು ರಾಶಿ ಹಾಕಿಕೊಂಡಿದ್ದಾರೆ.

ಸೋಮವಾರ ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಆದರೆ ಭಾನುವಾರ ರಜಾದಿನ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ಬಸವನಗುಡಿಗೆ ಭೇಟಿ ನೀಡುತ್ತಿದ್ದು, ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ದೊಡ್ಡಬಳ್ಳಾಪುರ, ಮಾಗಡಿ ಹಾಗೂ ನೆರೆಯ ತಮಿಳುನಾಡು, ಆಂಧ್ರಪ್ರದೇಶದಿಂದಲೂ ರೈತರು, ವ್ಯಾಪಾರಿಗಳು ಕಡಲೆಕಾಯಿ ಮೂಟೆಯೊಂದಿಗೆ ಆಗಮಿಸಿದ್ದಾರೆ.

ಕಡಲೆಕಾಯಿ ಪರಿಷೆ
ಕಡಲೆಕಾಯಿ ಪರಿಷೆ (ETV Bharat)

ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಕಡಲೆಕಾಯಿ ವಿವಿಧ ತಳಿ ಹಾಗೂ ಹಸಿ ಕಡಲೆಕಾಯಿ ಅಲ್ಲದೆ ಹುರಿದ, ಬೇಯಿಸಿದ ಕಡಲೆಕಾಯಿ ಮಾರಾಟವಾಗುತ್ತಿದೆ. ಕೆಜಿಗೆ 80 ರಿಂದ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬರೀ ಕಡಲೆಕಾಯಿ ಅಲ್ಲದೆ, ಕಡಲೆಪುರಿ, ಬೆಂಡು-ಬತಾಸು ಸೇರಿ ಸುಮಾರು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ನಗರವಾಸಿಗಳನ್ನು ಆಕರ್ಷಿಸುತ್ತಿದೆ.

ಪರಿಷೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಡಲೆಕಾಯಿಯನ್ನು ಮನೆಗೆ ಕೊಂಡೊಯ್ಯಲು ಕಾಗದ ಹಾಗೂ ಬಟ್ಟೆ ಬ್ಯಾಗನ್ನು ಬಳಸುವಂತೆ ಕೆಲ ಎನ್‌ಜಿಒ ಸಂಸ್ಥೆಗಳು, ಬಿಬಿಎಂಪಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಪರಿಷೆ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ, ಪೊಲೀಸ್ ಇಲಾಖೆ, ಆರೋಗ್ಯ, ಜಲಮಂಡಳಿ, ಅಗ್ನಿಶಾಮಕ ದಳ, ಮುಜರಾಯಿ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ: ಸುಗಮ ಸಂಚಾರ ದೃಷ್ಟಿಯಿಂದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಲಾಲ್‌ಬಾಗ್ ವೆಸ್ಟ್‌ಗೇಟ್, ಚಾಮರಾಜಪೇಟೆ, ಬುಲ್ ಟೆಂಪಲ್ ಮೂಲಕ ಹನುಮಂತನಗರ ಕಡೆಗೆ ಸಂಚರಿಸುವ ವಾಹನಗಳು ರಾಮಕೃಷ್ಣಾಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಹಯವದನ ರಾವ್ ರಸ್ತೆಯಲ್ಲಿ ಸಾಗಿ ಗವಿಪುರಂ 3ನೇ ಅಡ್ಡರಸ್ತೆ ಮಾರ್ಗವಾಗಿ ಮೌಂಟ್‌ಜಾಯ್ ರಸ್ತೆ ಮೂಲಕ ಸಂಚರಿಸಬೇಕಿದೆ.

ಇನ್ನು ಆರ್‌ವಿ ಟೀಚರ್ಸ್ ಕಾಲೇಜು ಜಂಕ್ಷನ್, ಟ್ರಿನಿಟಿ ಆಸ್ಪತ್ರೆ ರಸ್ತೆ, ಕೆಆರ್ ರಸ್ತೆ, ಬ್ಯೂಗಲ್ ರಾಕ್ ರಸ್ತೆಯಿಂದ ಹನುಮಂತನಗರ ಕಡೆಗೆ ತೆರಳುವ ವಾಹನಗಳು ಠಾಗೂರ್ ವೃತ್ತದಲ್ಲಿ ಬಲ ತಿರುವು ಪಡೆದು ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್, ಸೀತಾರಾಮಯ್ಯ ರಸ್ತೆ, ಗವಿಪುರಂ ಬಡಾವಣೆ, 3ನೇ ಅಡ್ಡರಸ್ತೆ, ಮೌಂಟ್‌ಜಾಯ್ ರಸ್ತೆ ಮಾರ್ಗವಾಗಿ ತೆರಳಬೇಕಿದೆ.

ವಾಹನ ನಿಲುಗಡೆ: ರಾಮಕೃಷ್ಣಾಶ್ರಮ ವೃತ್ತ, ನಾರಾಯಣಸ್ವಾಮಿ ವೃತ್ತ, ಎಸಿಪಿಎಫ್‌ ಕಾಲೇಜು, ಗಾಂಧಿಬಜಾರ್ ಸರ್ಕಲ್, ರಂಗರಾವ್ ಜಂಕ್ಷನ್‌ನಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ನ.26ರಿಂದ ಲಕ್ಷದೀಪೋತ್ಸವ: ಪೂಜೆ, ಉತ್ಸವ, ಕಾರ್ಯಕ್ರಮಗಳ ವಿವರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.