ಕರ್ನಾಟಕ

karnataka

ETV Bharat / videos

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಶ್ರೀ ಕ್ಷೇತ್ರ ಉಕ್ಕಡಗಾತ್ರಿಗೆ ಜಲದಿಗ್ಬಂಧನ, ರಸ್ತೆ, ಸೇತುವೆಗಳು ಜಲಾವೃತ - Road Bridges flooded - ROAD BRIDGES FLOODED

By ETV Bharat Karnataka Team

Published : Jul 31, 2024, 6:51 PM IST

ದಾವಣಗೆರೆ: ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ ಮಾಡಿರುವ ಬೆನ್ನಲ್ಲೇ, ಶ್ರೀ ಕ್ಷೇತ್ರ ಉಕ್ಕಡಗಾತ್ರಿಗೆ ಜಲದಿಗ್ಬಂಧನವಾಗಿದೆ. ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು, ಸೇತುವೆಗಳು ತುಂಗಭದ್ರಾ ನದಿ ನೀರಿನಿಂದ ಜಲಾವೃತವಾಗಿವೆ. ಹರಿಹರದಿಂದ ಉಕ್ಕಡಗಾತ್ರಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ತುಮ್ಮಿನ ಕಟ್ಟೆ ಹಾಗೂ ಉಕ್ಕಡಗಾತ್ರಿ ರಸ್ತೆ ಹಾಗೂ ಸೇತುವೆ ನೀರಿನಿಂದ ಮುಳುಗಡೆಯಾಗಿವೆ. ಜನರ ಸಂಚಾರಕ್ಕೆ ಅಡಚಣೆಯಾಗಿದೆ.

ಭಕ್ತರು ಉಕ್ಕಡಗಾತ್ರಿ ಕ್ಷೇತ್ರಕ್ಕೆ ತೆರಳಬೇಕಾದರೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಮಾಪಟ್ಟಣ್ಣಂ ಮೂಲಕ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಉಕ್ಕಡಗಾತ್ರಿಯಿಂದ ಪತ್ತೆಪುರ, ನಂದಿಗುಡಿ, ಮಲೇಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಎರಡೂ ಜಲಾವೃತ ಆಗಿರುವುದರಿಂದ ಜನರ ಸಂಚಾರಕ್ಕೆ ಸಂಚಕಾರ ಎದುರಾಗಿದೆ‌. ಸೇತುವೆ ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಈ ಭಾಗದ ಜನರು ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಕಾಯಕಲ್ಪ ಮಾತ್ರ ದೊರಕಿಲ್ಲ. ತುಂಗಭದ್ರಾ ನದಿಗೆ ನೀರು ಬಂತೆಂದರೇ, ಈ ಸೇತುವೆಗಳು ಜಲಾವೃತ ಆಗುವುದು ಸರ್ವೇ ಸಾಮಾನ್ಯ. ಹಾಗಾಗಿ ಸ್ಥಳೀಯರು, ತಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಈ ಟಿವಿ ಭಾರತ ಪ್ರತಿನಿಧಿ ವಾಕ್​ ಥ್ರೂ ಮೂಲಕ ಮಾಹಿತಿ ನೀಡಿದರು.

ಇದನ್ನೂ ನೋಡಿ: ತುಂಗಭದ್ರಾ ಜಲಾಶಯದ ರಮಣೀಯ ನೋಟ ಡ್ರೋನ್​ ಕ್ಯಾಮೆರಾದಲ್ಲಿ ಸೆರೆ: ನೋಡಿ - Tungabhadra Dam

ABOUT THE AUTHOR

...view details