ಕರ್ನಾಟಕ

karnataka

ETV Bharat / videos

'ಸಚಿವ ಮಹದೇವಪ್ಪ ಮನೆಯಲ್ಲಿ ಸಿಎಂ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ' - Minister Parameshwar - MINISTER PARAMESHWAR

By ETV Bharat Karnataka Team

Published : Oct 3, 2024, 8:18 PM IST

ತುಮಕೂರು: ಸಚಿವ ಮಹದೇವಪ್ಪನವರ ಮನೆಗೆ ನಾವು ಹೋಗಿದ್ದೆವು. ಆದ್ರೆ ಯಾವುದೇ ಮೀಟಿಂಗ್ ಮಾಡಿಲ್ಲ. ಭೇಟಿಯಾಗಿದ್ದೇವೆ ಅಷ್ಟೇ. ಅಲ್ಲಿ ಸಿಎಂ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಸಿಎಂಗೆ ಮಾರಲ್ ಸಪೋರ್ಟ್ ಆಗಿದ್ದೇವೆ. 136 ಶಾಸಕರಿದ್ದೇವೆ. ಎಲ್ಲ ಸಚಿವರೂ ಕೂಡ ಅವರ ಜೊತೆಗಿದ್ದೇವೆ ಎಂದರು.

ಕಾಫಿ ಕುಡಿಯಲು ಹೋದರೆ ಅದು ಸಭೆ ಆಗಲ್ಲ. ಕಾಫಿ ಕುಡಿದಿದ್ದೇವೆ, ಊಟ ಮಾಡಿಲ್ಲ. ಮುಖ್ಯಮಂತ್ರಿಗಳನ್ನು ಬೇರೆ ಬೇರೆ ವಿಚಾರದಲ್ಲಿ ಭೇಟಿಯಾಗಬೇಕಿತ್ತು. ಅದಕ್ಕಾಗಿ ಮಹದೇವಪ್ಪ ಅವರ ಮನೆಗೆ ಹೋಗಿದ್ದೆ ಎಂದು ಹೇಳಿದರು.   

ಇದೇ ವೇಳೆ, ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ನಂತರ ಎರಡು ಬಾರಿ ಸಿಎಂ ಆಗಿದ್ದಾರೆ. ಹೀಗಾಗಿ ಅವರು ಹೊರಗಿನವರು ಹೇಗಾಗುತ್ತಾರೆ? ಎಂದರು. 

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ಆಗಿದೆ. ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಈ ಹಿಂದೆ ಬಿಡಿಎ ಜಾಗ ಮರಳಿಸಿದ್ದರು, ರಾಜೀನಾಮೆ ಕೊಡ್ತಾರಾ: ಸಚಿವರುಗಳ ಸವಾಲು - MUDA Case

ABOUT THE AUTHOR

...view details