ಕರ್ನಾಟಕ

karnataka

ETV Bharat / videos

24ಕ್ಕೂ ಹೆಚ್ಚು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಯೋಧರು ನಿವೃತ್ತಿ: ತವರೂರಲ್ಲಿ ಅದ್ಧೂರಿ ಸ್ವಾಗತ - Welcome to the soldiers

By ETV Bharat Karnataka Team

Published : Oct 3, 2024, 10:59 AM IST

ಹಾವೇರಿ: ಭಾರತೀಯ ಸೈನ್ಯದಲ್ಲಿ 24ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿ ಹಾವೇರಿ ತಾಲೂಕಿನ ಮೂವರು ಯೋಧರು ಬುಧವಾರ ನಿವೃತ್ತರಾಗಿದ್ದಾರೆ. ಹಾವೇರಿ ತಾಲೂಕು ಹಳೇರಿತ್ತಿ ಗ್ರಾಮದ ಶಿವಾನಂದ ತಿಮ್ಮಣ್ಣನವರ್, ಶಂಭುಲಿಂಗ ಕಲ್ಲೇದೇವರ ಮತ್ತು ಶಿರಮಾಪುರ ಗ್ರಾಮದ ಕುಮಾರ ಶಿಡಗನಾಳ ನಿವೃತ್ತರಾದ ಮೂವರು ಯೋಧರು. 

ಮಹಾತ್ಮಾ ಗಾಂಧೀಜಿ ಜನ್ಮದಿನ ತವರಿಗೆ ಆಗಮಿಸಿದ ಮೂವರು ನಿವೃತ್ತ ಯೋಧರನ್ನು ಮಾಜಿ ಸೈನಿಕರ ಸಂಘ, ಯೋಧರ ಸಂಬಂಧಿಕರು ದೇಶಾಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. 

ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ ಮೂವರು ನಿವೃತ್ತ ಯೋಧರನ್ನು ಪುಷ್ಪಾರ್ಪಣೆ ಮಾಡುವ ಮೂಲಕ ಸ್ವಾಗತಿಸಲಾಯಿತು. ನಂತರ ತೆರೆದ ಸಾರೋಟಾದಲ್ಲಿ ಸೈನಿಕರನ್ನು ಮೆರವಣಿಗೆ ಮಾಡಲಾಯಿತು. ರೈಲು ನಿಲ್ದಾಣದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 

ಮಹಾತ್ಮಾ ಗಾಂಧಿಜಿ ಪುತ್ಥಳಿಗೆ, ಸ್ವಾತಂತ್ರ ಹೋರಾಟಗಾರ ಹೊಸಮನಿ ಸಿದ್ದಪ್ಪ ಪ್ರತಿಮೆಗೆ ನಿವೃತ್ತ ಯೋಧರು ಮಾಲಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಧರು. "ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರು ದೇಶ ಸೇವೆ ಮಾಡಬೇಕು ದೇಶದ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೇವೆ ಸಲ್ಲಿಸಿದ್ದಕ್ಕೆ ಜೀವನ ಸಾರ್ಥಕತೆ ಬಂದಿದೆ".

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ - Mysuru Dasara 2024

ABOUT THE AUTHOR

...view details