ETV Bharat / state

ಪೊಲೀಸರು ಶೂಟ್ ಮಾಡದೇ ಇದ್ದರೆ ಅವನೇ ದಾಳಿ ಮಾಡುತ್ತಿದ್ದ: ಡಾ.ಜಿ.ಪರಮೇಶ್ವರ್ - DR G PARAMESHWAR

ವಿಕ್ರಂ ಗೌಡ ಶರಣಾಗತಿಗೆ ಈ ಹಿಂದೆ ಪ್ರಯತ್ನಗಳು ನಡೆದಿದ್ದವು, ಸಂಬಂಧಿಕರು ಹೇಳಿದರೂ ಆತ ಒಪ್ಪಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

Home Minister Dr G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Nov 20, 2024, 2:33 PM IST

Updated : Nov 20, 2024, 3:03 PM IST

ಬೆಂಗಳೂರು: "ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ. ಪೊಲೀಸರು ಶೂಟ್ ಮಾಡದೇ ಇದ್ದರೆ, ಅವನೇ ದಾಳಿ ನಡೆಸುತ್ತಿದ್ದ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು.

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಕ್ರಂಗೌಡ ಮೇಲೆ ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಆಟೋಮ್ಯಾಟಿಕ್ ಮಷಿನ್ ಗನ್ ಇಟ್ಟುಕೊಂಡಿದ್ದ. ಈ ಹಿಂದೆ ಶರಣಾಗಾತಿಗಾಗಿ ಪ್ರಯತ್ನಗಳು ನಡೆದಿದ್ದವು. ಅವರ ಸಂಬಂಧಿಕರೂ ಸಹ ಶರಣಾಗುವಂತೆ ಹೇಳಿದ್ದರು, ಆದರೆ ವಿಕ್ರಂ ಗೌಡ ಒಪ್ಪಿರಲಿಲ್ಲ" ಎಂದರು.

"ಕಾರ್ಕಳದಲ್ಲಿ ಎಎನ್‌ಎಫ್ ಹೆಡ್‌ಕ್ವಾಟರ್ಸ್ ಇದೆ. ನಕ್ಸಲ್ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾ ಇಟ್ಟುಕೊಂಡು ಬರಲಾಗಿದೆ. ಕಳೆದ ವಾರ ನಕ್ಸಲ್ ಲತಾ ಎಂಬವರನ್ನು ಗುರುತಿಸಲಾಗಿತ್ತು. ಕೂಂಬಿಂಗ್ ನಡೆಸಲಾಗಿತ್ತು. ಅವರನ್ನು ಹಾಗೇ ಬಿಟ್ಟುಕೊಂಡು, ಏನು ಮಾಡಿದರೂ ನಡೆಯುತ್ತದೆ ಎಂದು ಸುಮ್ಮನಿರಲು ಸಾಧ್ಯವಿಲ್ಲ" ಎಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)

ಎನ್‌ಕೌಂಟರ್ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ವ್ಯತ್ಯಾಸವಿಲ್ಲ ಎಂಬ ಕೆಲವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಎನ್ನುವ ಪ್ರಶ್ನೆ ಇಲ್ಲಿ ಬರಲ್ಲ, ಸುರಕ್ಷತೆ ಮುಖ್ಯ. ಈ ಹಿಂದೆಯೇ ಆತನಿಗೆ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ ಶರಣಾಗಿರಲಿಲ್ಲ. ನಕ್ಸಲ್ ವಿಚಾರದಲ್ಲಿ ಪಕ್ಷದ ಪ್ರಶ್ನೆ ಬರುವುದಿಲ್ಲ. ಜನರ ಸುರಕ್ಷತೆ ಮುಖ್ಯವಾಗುತ್ತದೆ" ಎಂದು ಹೇಳಿದರು‌.

ಸಂಪುಟ ಪುನಾರಚನೆ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಸಂಪುಟ ಪುನಾರಚನೆ ವಿಚಾರ ನನಗೆ ಗೊತ್ತಿಲ್ಲ. ಅದು ಸಿಎಂಗೆ ಮಾತ್ರ ಗೊತ್ತಿರುತ್ತದೆ. ಆದರೆ, ಅರ್ಹತೆ ಇರುವವರು ಕೇಳಬಹುದು. ಸಚಿವ ಸ್ಥಾನ‌ ಕೇಳುವುದರಲ್ಲಿ ತಪ್ಪೇನಿಲ್ಲ. ಅವರಿಗೂ ಅರ್ಹತೆ ಇದೆ, ಶಕ್ತಿ ಇದೆ. ಆದರೆ, ಯಾವಾಗ ಪುನಾರಚನೆ ಗೊತ್ತಿಲ್ಲ" ಎಂದರು.

ಬಿಪಿಎಲ್ ಕಾರ್ಡ್​ಗಳ ರಾದ್ಧಾಂತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಈಗಾಗಲೇ‌ ಡಿಸಿಗಳಿಗೆ ಸೂಚಿಸಲಾಗಿದೆ.‌ ಅನರ್ಹ ಕಾರ್ಡ್ ರದ್ದಿಗೆ ಮಾತ್ರ ಸೂಚಿಸಲಾಗಿದೆ. ಕೆಲವೊಂದು ಲೋಪಗಳಾಗಿರಬಹುದು. ಇದರ ಬಗ್ಗೆ ಈಗಾಗಲೇ ಸಿಎಂ ಹೇಳಿದ್ದಾರೆ. ಕೆಲವೊಂದು ಕಡೆ ಅರ್ಹರ ಕಾರ್ಡ್ ತೆಗೆದಿರಬಹುದು. ತೆಗೆದಿದ್ದರೆ ಸರಿಪಡಿಸಲಾಗುವುದು. ಅನರ್ಹರ ಕಾರ್ಡ್ ಮಾತ್ರ ಪರಿಷ್ಕರಣೆ. ನಿಯಮಾನುಸಾರ ಪರಿಷ್ಕರಿಸುವ ಕೆಲಸ ಆಗುತ್ತಿದೆ. ಅಧಿಕಾರಿಗಳು ಲೋಪವೆಸಗಿದರೆ ಸರಿಪಡಿಸೋಣ" ಎಂದರು.

ಇದನ್ನೂ ಓದಿ: ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಮೃತ: ಡಿಜಿಪಿ ರೂಪಾ

Last Updated : Nov 20, 2024, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.