ಬಿಗ್ ಬಾಸ್ ಕನ್ನಡ ಸೀಸನ್ 11 ಈಗಾಗಲೇ 50 ದಿನಗಳನ್ನು ಪೂರ್ಣಗೊಳಿಸಿದೆ. ಎಂಟನೇ ವಾರದ ಆಟ ಸಾಗಿದ್ದು, ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಹನುಮಂತು ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ. ಸದ್ಯ ಎಂಟನೇ ವಾರದ ಆರಂಭದಲ್ಲಿ ಶೋಭಾ ಶೆಟ್ಟಿ, ರಜತ್ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಪ್ರವೇಶಿಸಿದ್ದು, ಆಟ ಮತ್ತಷ್ಟು ರೋಮಾಂಚಕವಾಗಿರಲಿದೆ ಎಂಬ ಸುಳಿವು ಸಿಕ್ಕಿದೆ. ನಿನ್ನೆಯಷ್ಟೇ ಪ್ರತಿ ಸ್ಪರ್ಧಿಗಳ ಬಗ್ಗೆ ಈ ಇಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಎಲ್ಲರೊಡನೆ ಬೆರೆಯುವ ಹೊತ್ತಲ್ಲೇ ಶೋಭಾ ಶೆಟ್ಟಿ ಮಾತಿನ ಕಿಡಿಕಾರಿದ್ದು, ಮನೆಮಂದಿಗೆ ಶಾಕ್ ಆಗಿದೆ. ನೋಡುಗರಿಗೂ ಇದೇನಪ್ಪಾ? ಮೊದಲ ದಿನವೇ ಇಷ್ಟೊಂದು ಆಕ್ರೋಶ ಎಂದೆನಿಸೋದು ಸಹಜ.
ಶೋಭಾ ಶೆಟ್ಟಿ ಅವರ ಆಕ್ರೋಶದ ನೋಟವನ್ನು ಬಿಗ್ ಬಾಸ್ ಅನಾವರಣಗೊಳಿಸಿರುವ ಪ್ರೋಮೋ ಒದಗಿಸಿದೆ. ''ಮಾತಿನ ಸಮರಕ್ಕೆ ಮೂಕಸಾಕ್ಷಿಯಾಯ್ತಾ ದೊಡ್ಮನೆ?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ರಿಲೀಸ್ ಆಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿದೆ.
ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅನರ್ಹರು ಎಂದು ಆರಿಸಬೇಕು ಅಂತಾ ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಕೆಲವರು ಶೋಭಾ ಶೆಟ್ಟಿ ಅವರ ಹೆಸರನ್ನು ಸೂಚಿಸಿದ್ದಾರೆ. ರೂಲ್ಸ್ ರೆಗ್ಯೂಲೇಶನ್ಸ್ ಏನಿರುತ್ತೋ ಅದೆನ್ನೆಲ್ಲೋ ಶೋಭಾ ಶೆಟ್ಟಿ ಅವರು ಅಲ್ಲಾಡಿಸಿದ್ದಾರೆ ಅನಿಸುತ್ತದೆ ಎಂದು ಉಗ್ರಂ ಖ್ಯಾತಿಯ ಮಂಜು ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಈ ಮಾತಿಗೆ ಅಸಮಧಾನಗೊಂಡ ಶೋಭಾ ಶೆಟ್ಟಿ ಅಲ್ಲಾಡಿಸೋದಿಕ್ಕೆ ಗಿಲ್ಲಾಡಿಸೋದಿಕ್ಕೆ ವಾಟ್.. ಕಾರಣದಲ್ಲಿ ಕ್ಲ್ಯಾರಿಟಿನೇ ಇಲ್ಲ ಎಂದು ಶೋಭಾ ಶೆಟ್ಟಿ ಮಾತಿನ ಮಳೆ ಸುರಿಸಿದ್ದಾರೆ. ಉಗ್ರಂ ಮಂಜು ಪ್ರತಿಕ್ರಿಯಿಸಿ, ಕಿರುಚಬೇಡಿ. ಇಲ್ಲೇ ಇದಿನಿ ಹೇಳ್ರಿ ರೀ ಎನ್ನುತ್ತಲೇ ''ಕೇಳಿಸಿಕೊಳ್ಳೀ..'' ಎಂದು ಶೋಭಾ ಆರ್ಭಟಿಸಿದ್ದಾರೆ. ಗೌರವ ಕಳ್ಕೋಬೇಡಿ ಎಂದು ತಿಳಿಸಿದ್ದಾರೆ. ಇದೀಗ ಮನೆಯಲ್ಲಿ ಮೌನ ಆವರಿಸಿದೆ.
ಇದನ್ನೂ ಓದಿ: ಸಿನಿಮಾ ಅರ್ಧಕ್ಕೆ ಸ್ಥಗಿತಗೊಳಿಸಿದ ನಿರ್ದೇಶಕನ ಬೆದರಿಸಲು ಏರ್ ಫೈರ್: ನಟ ತಾಂಡವ್ ರಾಮ್ ಬಂಧನ
ಈ ಗಂಭೀರ ಪರಿಸ್ಥಿತಿಯಲ್ಲಿ ಹನುಮಂತ ಮತ್ತು ಧನರಾಜ್ ನಸುನಕ್ಕಿದ್ದಾರೆ. ಇದೇನಪ್ಪಾ? ಮೊದಲ ದಿನವೇ ಇಷ್ಟೊಂದು ಆರ್ಭಟ ಎಂಬಂತಿತ್ತು ಅವರ ರಿಯಾಕ್ಷನ್ಸ್. ಈ ಪ್ರಕ್ರಿಯೆ ಮುಗಿದ ನಂತರ ಧನರಾಜ್ ಬಳಿ ಮಾತನಾಡಿದ ಹನುಮಂತ, ಎಂಗ್ ಮಾತಾಡ್ತಾಳೆ ಯಪ್ಪಾ! ನಾವ್ ಹೋದ್ರೆ ಉ.... ಹೊಯ್ಕೋಳ್ತೀವಿ ಎಂದಿದ್ದಾರೆ. ಧನರಾಜ್ ಪ್ರತಿಕ್ರಿಯೆ ಕೂಡಾ ಹೀಗೇ ಇತ್ತು. ಪ್ರೋಮೋನೇ ಹೀಗೆ, ಟ್ರೇಲರ್ ಹೇಗಿರಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಕಾತರರಾಗಿದ್ದಾರೆ.
ಇದನ್ನೂ ಓದಿ: ರಣ್ಬೀರ್, ಅಲ್ಲು ಅರ್ಜುನ್ - ಪತ್ನಿ ಪಾತ್ರದಲ್ಲಿ ರಶ್ಮಿಕಾ: ಮಂದಣ್ಣ ಎದುರು ತಲೆಬಾಗಿದ ಆ್ಯಕ್ಷನ್ ಸ್ಟಾರ್ಸ್