ಚಂದನವನ ಮಾತ್ರವಲ್ಲದೇ ದಕ್ಷಿಣ ಚಿತ್ರರಂಗದಲ್ಲಿ ಸಖತ್ ಸ್ಟಾರ್ಡಮ್ ಹೊಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರ ಯಶಸ್ವಿ 5 ದಿನಗಳನ್ನು ಪೂರೈಸಿದೆ. ಆರನೇ ದಿನದ ಪ್ರದರ್ಶನ ಮುಂದುವರಿಸಿದ್ದು, ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶಗಳು ಉತ್ತಮವಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗಿದ್ದ ಭೈರತಿ ರಣಗಲ್ ಅವತಾರವನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ಯಶಸ್ವಿ ಪ್ರದರ್ಶನಗೊಂಡಿದ್ದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಭೈರತಿ ರಣಗಲ್ ಕಲೆಕ್ಷನ್: ಸೂಪರ್ ಹಿಟ್ ಮಫ್ತಿ ಚಿತ್ರದ ಪ್ರೀಕ್ವೆಲ್ ಭೈರತಿ ರಣಗಲ್ಗೆ ಮಫ್ತಿ ನಿರ್ದೇಶಕರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ನರ್ತನ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ಕುತೂಹಲಕಾರಿ ಪಾತ್ರ ನಿರ್ವಹಿಸಿದ್ದರು. ಟೈಟಲ್, ಟ್ರೇಲರ್, ಟೀಸರ್, ಪೋಸ್ಟರ್ಗಳಿಂದ ಸಖತ್ ಸದ್ದು ಮಾಡಿದ್ದ ಈ ಚಿತ್ರ ಇದೇ ನವೆಂಬರ್ 15, ಶುಕ್ರವಾರದಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಸೆಂಚುರಿ ಸ್ಟಾರ್ನ ಅಪಾರ ಸಂಖ್ಯೆಯ ಅಭಿಮಾನಿಗಳು ಹಬ್ಬದಂತೆ ಸಂಭ್ರಮಾಚರಿಸಿ, ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಸಿನಿಮಾ ಈ 5 ದಿನಗಲಲ್ಲಿ 11.15 ಕೋಟಿ ರೂ. (ನೆಟ್ ಕಲೆಕ್ಷನ್) ಮಾಡಿದೆ. ಈ ಅಂಕಿಅಂಶಗಳು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿಯನ್ನು ಆಧರಿಸಿದ್ದು, ಅಭಿಮಾನಿಗಳು ಚಿತ್ರತಂಡದ ಘೋಷಣೆ ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: ''ಬಳೆ ತೊಡ್ಕೋ'': ಬಿಗ್ ಬಾಸ್ನಲ್ಲಿ ಮತ್ತೆ ಬಳೆ ವಿಚಾರ; ಶೋ ಬಿಡುವೆನೆಂದ ಗೋಲ್ಡ್ ಸುರೇಶ್
ತೆರೆಕಂಡ ದಿನ 2.3 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸೆಂಚುರಿ ಸ್ಟಾರ್ನ ಭೈರತಿ ರಣಗಲ್, ಎರಡನೇ ದಿನ 2.7 ಕೋಟಿ ರೂ. ಕಲೆಕ್ಷನ್ ಮಾಡಿತು. ಮೂರನೇ ದಿನ 3.4 ಕೋಟಿ ರೂ., ನಾಲ್ಕನೇ ದಿನ 1.65 ಕೋಟಿ ರೂ., ಐದನೇ ದಿನ 1.10 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಕಳೆದ ಐದು ದಿನಗಳಲ್ಲಿ 11.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: 'ಪುಷ್ಪ 2'ನಲ್ಲಿ ಅರ್ಧ ತಲೆಬೋಳಿಸಿದ ಈ ವ್ಯಕ್ತಿ ಯಾರು? ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ ಹೇಳಿದ್ದಿಷ್ಟು
ಶಿವರಾಜ್ಕುಮಾರ್ ಜೋಡಿಯಾಗಿ ರುಕ್ಮಿಣಿ ವಸಂತ್ ಅಬಿನಯಿಸಿದ್ದಾರೆ. ಶಿವಣ್ಣನ ತಂಗಿಯಾಗಿ ಛಾಯಾಸಿಂಗ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ನಟಿಸಿದ್ದಾರೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ನವೀನ್ ಕುಮಾರ್ ಕ್ಯಾಮರಾ ಹಿಡಿದಿದ್ದಾರೆ. ಕಲಾ ನಿರ್ದೇಶಕ ಗುಣ ಅವರ ಕಲಾ ನಿರ್ದೇಶನ ಮತ್ತು ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜಾ ಅವರ ಆ್ಯಕ್ಷನ್ ಡೈರೆಕ್ಷನ್ಸ್ ಇದೆ.