ಕರ್ನಾಟಕ

karnataka

ETV Bharat / videos

ರಾಮನಗರದಲ್ಲಿ ಭಾರೀ ಮಳೆ: ಧರೆಗುರುಳಿದ ಹಲಸು, ತೆಂಗು, ಮಾವಿನ ಮರಗಳು - Ramanagara Rain - RAMANAGARA RAIN

By ETV Bharat Karnataka Team

Published : May 14, 2024, 1:02 PM IST

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಬಿರುಗಾಳಿಸಹಿತ ಭಾರೀ ಮಳೆಗೆ ನೂರಾರು ಮರಗಳು ಧರೆಗುರುಳಿವೆ. ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.

ಚನ್ನಪಟ್ಟಣ ತಾಲೂಕಿನ ಕೊಂಡಾಪುರ, ಹುಣಸನಹಳ್ಳಿ, ಮೊಕರಂಬೆದೊಡ್ಡಿ, ಕೋಡಂಬಳ್ಳಿ, ಹುಣಸನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಮಳೆ ಸುರಿದಿದೆ. ಈ ವೇಳೆ ತೆಂಗು, ಮಾವು, ಹಲಸು ಸೇರಿದಂತೆ ನೂರಾರು ಮರಗಳು ಧರಾಶಾಹಿಯಾಗಿದ್ದು ಜನಜೀವನವೂ ಅಸ್ತವ್ಯಸ್ತಗೊಂಡಿದೆ.

ಹಲವೆಡೆ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿರುವ ಘಟನೆಗಳೂ ನಡೆದಿದ್ದು, ಮನೆಮಂದಿ ಆತಂಕಗೊಂಡಿದ್ದಾರೆ. ಒಂದೆಡೆ ವರುಣ ದೇವನ ಆಗಮನ ಕಂಡು ರೈತರು ಸಂತಸಪಟ್ಟರೆ, ಮತ್ತೊಂದೆಡೆ ಬಿರುಗಾಳಿಯ ಅವಾಂತರಕ್ಕೆ ಜನ ಹಿಡಿಶಾಪ ಹಾಕುವ ಪರಿಸ್ಥಿತಿಯೂ ತಲೆದೋರಿದೆ. ಬಿರುಗಾಳಿಯಿಂದ ಹಲವೆಡೆ ಕೃಷಿಕರ ಬೆಳೆಗಳು ಹಾನಿಯಾಗಿದ್ದು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಮಳೆ ಮುನ್ಸೂಚನೆ: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗುಸಹಿತ ಮಳೆಯಾಗಲಿದೆ. 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಮೈಸೂರು: ರಾತ್ರಿ ಸುರಿದ ಮಳೆಗೆ ಕುಸಿದ ಮನೆ, ನೆಲೆ ಕಳೆದುಕೊಂಡು ಮಹಿಳೆಯ ಕಣ್ಣೀರು - House Collapsed

For All Latest Updates

ABOUT THE AUTHOR

...view details