ಕರ್ನಾಟಕ

karnataka

ETV Bharat / videos

ದಾವಣಗೆರೆ: ಬಿಸಿಲಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ - Davanagere Rain - DAVANAGERE RAIN

By ETV Bharat Karnataka Team

Published : Apr 3, 2024, 10:07 PM IST

ದಾವಣಗೆರೆ: ಜಿಲ್ಲೆಯ ಕೆಲವೆಡೆ ಇಂದು ಮಳೆರಾಯ ತಂಪೆರೆದಿದ್ದಾ‌ನೆ. ಸೂರ್ಯನ ತಾಪದ ನಡುವೆ ಜನರು ತುಸು ನಿಟ್ಟುಸಿರು ಬಿಟ್ಟರು. ಸಂಜೆಯಾಗುತ್ತಿದ್ದಂತೆ ದಾವಣಗೆರೆ ತಾಲೂಕಿನ ಹೆಬ್ಬಾಳ, ಚಿನ್ನಸಮುದ್ರ, ಕೊಡಗನೂರು ಕ್ರಾಸ್, ಗಂಗನಕಟ್ಟೆ, ನರಗನಹಳ್ಳಿ, ಹೊನ್ನಾಯಕನಹಳ್ಳಿ, ಅಣ್ಣಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆ ಸುರಿಯಿತು. ಈ ವರ್ಷದ ಮೊದಲ ಮಳೆ ಇದಾಗಿದೆ. 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಗಾಳಿಸಮೇತ ಮಳೆಗೆ ಮರಗಳು ರಸ್ತೆಗೆ ಉರುಳಿದವು.

ಬರ ಎಂದು ತಲೆಮೇಲೆ ಕೈ ಹೊತ್ತು ಕುಳಿತ ರೈತರ ಮುಖದಲ್ಲೂ ಮಂದಹಾಸ ಮೂಡಿದೆ. ಮಳೆ ಬರಲೆಂದು ದೇವರಲ್ಲಿ ಪ್ರಾರ್ಥಿಸಿದ ಜನರಿಗೆ ಮಳೆರಾಯ ಕೃಪೆ ತೋರಿದ್ದಾ‌ನೆ. ಮಳೆಯಿಂದ ಹಲವೆಡೆ ಮರಗಳು ಧರೆಗುರುಳಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ದೂರದೂರುಗಳಿಗೆ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರಿಗೆ ತಕ್ಕಮಟ್ಟಿಗೆ ತೊಂದರೆಯಾಯಿತು. ಮಾಯಕೊಂಡಗೆ ತೆರಳುವ ರಸ್ತೆಯಲ್ಲಿ ಬೃಹತ್ ಬೇವಿನ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳೀಯರು ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

ಇದನ್ನೂ ಓದಿ: ಸುಡು ಬಿಸಿಲಿಗೆ ಬಸವಳಿದಿದ್ದ ಕುಂದಾನಗರಿ ಜನರಿಗೆ ತಂಪೆರೆದ ಮಳೆ - Belagavi Rain

For All Latest Updates

ABOUT THE AUTHOR

...view details