ಐತಿಹಾಸಿಕ 'ವಾಲ್ಮೀಕಿ ಜಾತ್ರೆ'ಗೆ ಕ್ಷಣಗಣನೆ: ಸಿದ್ಧತೆ ಕುರಿತು ಪ್ರಸನ್ನಾನಂದಪುರಿ ಶ್ರೀ ಮಾಹಿತಿ - ವಾಲ್ಮೀಕಿ ಜಾತ್ರೆ
Published : Feb 7, 2024, 7:43 AM IST
ದಾವಣಗೆರೆ: ಈ ಬಾರಿ ಬರಗಾಲ ಇದ್ದರೂ ಕೂಡ ರಾಜನಹಳ್ಳಿ ವಾಲ್ಮೀಕಿ ಜಾತ್ರೆ ಮಾಡಲಾಗುತ್ತಿದೆ ಎಂಬ ನಾಯಕ ಸಮಾಜದ ಕೆಲವರಿಂದ ಅಪಸ್ವರ ಕೇಳಿ ಬಂದಿತ್ತು. ಈ ವಿಚಾರವಾಗಿ ಪ್ರಸನ್ನಾನಂದಪುರಿ ಶ್ರೀಗಳು ಮೌನ ಮುರಿದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಮಠದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು 'ವಾಲ್ಮೀಕಿ ಜಾತ್ರೆ'ಗೆ ಭರ್ಜರಿ ಸಿದ್ಧತೆ ನಡೆದಿದೆ. ಈ ಜಾತ್ರೆಗೆ 02 ರಿಂದ 03 ಲಕ್ಷ ಜನ ಸೇರಲಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ 25 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರಸಾದದ ವ್ಯವಸ್ಥೆ, ಉಳಿದುಕೊಳ್ಳಲು ಮೂಲ ಸೌಲಭ್ಯದ ಸಿದ್ಧತೆ ಆಗುತ್ತಿದೆ ಎಂದರು.
ಇನ್ನು ಜಾತ್ರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಪುಟ ದರ್ಜೆಯ ಸಚಿವರು ಆಗಮಿಸಲಿದ್ದಾರೆ. ಇದಲ್ಲದೇ ವಿಪಕ್ಷದ ನಾಯಕರು, ಮಾಜಿ ಸಿಎಂಗಳು ಆಗಮಿಸಲಿದ್ದಾರೆ. ಆದರೆ, ಈ ಬಾರಿ ನಟ ಕಿಚ್ಚ ಸುದೀಪ್ ಸೇರಿದಂತೆ ಯಾವುದೇ ಚಲನಚಿತ್ರ ನಟರುಗಳನ್ನು ಕರೆಸುತ್ತಿಲ್ಲ ಎಂದು ಸ್ಪಷ್ಟತೆ ನೀಡಿದರು. ಈ ಜಾತ್ರೆ ಜಾಗೃತಿಗಾಗಿ ಜಾತ್ರಾಮಹೋತ್ಸವ ಆಗಿದ್ದರಿಂದ ಕೇಂದ್ರ ರಾಜ್ಯ ಸರ್ಕಾರಗಳ ಕೆಲ ಸಂವಿಧಾನಿತ ಹಕ್ಕುಗಳು ಜಾರಿ ಹಾಗೂ ರಕ್ಷಣೆ ಮಾಡಬೇಕೆಂದು ಜಾತ್ರೆಯಲ್ಲಿ ಹಕ್ಕೊತ್ತಾಯ ಮಾಡಲಾಗುತ್ತದೆ. ಇನ್ನು ನಾವು ಆರಂಭದಲ್ಲಿ ಸಭೆ ಕರೆದು ಜಾತ್ರೆ ಮಾಡಬೇಕೆಂದು ತೀರ್ಮಾನ ಮಾಡಿದ್ದರಿಂದ ಜಾತ್ರೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಸುತ್ತೂರು ಜಾತ್ರೆ: ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಸುತ್ತೂರು ಶ್ರೀಗಳು