ಕರ್ನಾಟಕ

karnataka

ETV Bharat / videos

ಉಪ್ಪಿನಂಗಡಿ - ಕುಕ್ಕೆ ಸುಬ್ರಹ್ಮಣ್ಯ ರಸ್ತೆ ತುಂಬಾ ಹೊಂಡ - ಬಾಳೆ ಗಿಡ ನೆಟ್ಟು ಪ್ರತಿಭಟನೆ - Potholes in road - POTHOLES IN ROAD

By ETV Bharat Karnataka Team

Published : Aug 11, 2024, 8:24 PM IST

ಸುಬ್ರಹ್ಮಣ್ಯ/ದ. ಕ : ಉಪ್ಪಿನಂಗಡಿ - ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳಿಗೆ ಭಾನುವಾರ ಬಾಳೆಗಿಡ ಹಾಗೂ ಕೆಸುವಿನ ಗಿಡನೆಟ್ಟು ಆಟೋ ಚಾಲಕರು ಹಾಗೂ ಸ್ಥಳೀಯರು ವಿನೂತನವಾಗಿ ಪ್ರತಿಭಟನೆ ನಡೆಸಿದರು.  

ಪವಿತ್ರ ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರುವ ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಹಲವೆಡೆ ಹೊಂಡಗಳು ನಿರ್ಮಾಣವಾಗಿ ವಾಹನ ಅಪಘಾತಗಳು ಹೆಚ್ಚಾಗಿವೆ. ಬೈಕ್ ಸವಾರರು ರಾತ್ರಿ ವೇಳೆ ಸಂಚರಿಸುವಾಗ ಹೊಂಡ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಘಟನೆಗಳು ನಡೆದಿವೆ.

ಈ ಭಾಗದಲ್ಲಿ ತಕ್ಷಣಕ್ಕೆ ಯಾವುದೇ ಆಸ್ಪತ್ರೆಗಳು, ಆಂಬ್ಯುಲೆನ್ಸ್​ಗಳು ಇರುವುದಿಲ್ಲ. ರಸ್ತೆ ಹಾಳಾದ ಕಾರಣ ರಾತ್ರಿ ವೇಳೆ ಗಾಯಗೊಂಡವರನ್ನು ರಕ್ಷಿಸಲು ಕಡಬ, ಉಪ್ಪಿನಂಗಡಿ, ಮಂಗಳೂರು ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಎದುರಾಗಿದೆ.

ಭಾನುವಾರ ಕೈಕಂಬ ಆಟೋರಿಕ್ಷಾ ಚಾಲಕರು, ಸ್ಥಳೀಯ ಹಿರಿಯರು ಸೇರಿ, ರಸ್ತೆಯ ಹೊಂಡಕ್ಕೆ ಬಾಳೆಗಿಡ ಹಾಗೂ ಕೆಸುವಿನ ಗಿಡವನ್ನು ನೆಟ್ಟು ಪ್ರತಿಭಟಿಸಿದರು. ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ರವಾನಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಆಟೋ ಚಾಲಕ ಯಕ್ಷಿತ್ ಚೇರು, ನಾಗೇಶ್, ಪ್ರವೀಣ್, ಲೊಕೇಶ್, ಶಶಿ, ಹರೀಶ್, ಮಂಜುನಾಥ್, ಮಾಧವ, ಚಂದ್ರ, ತಿಲಕ್, ಪುರುಷೋತ್ತಮ, ಅಖಿಲೇಶ್, ಉಮೇಶ್, ದಿನೇಶ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ : ಆಗಸ್ಟ್‌ 10ರಂದು ಚಾಮರಾಜನಗರಕ್ಕೆ ಸಿಎಂ; ಭರದಿಂದ ಸಾಗಿದ ರಸ್ತೆ ಗುಂಡಿ ಮುಚ್ಚುವ ಕಾರ್ಯ - CM Siddaramaiah

ABOUT THE AUTHOR

...view details