ನವರಾತ್ರಿ ಸಡಗರ: ಬೆಂಕಿ ಮಧ್ಯೆ ಮಲಗಿ 'ಸ್ವಸ್ತಿಕ್ ರಾಸ್' ಪ್ರದರ್ಶನ- ನೋಡಿ - Swastik Raas - SWASTIK RAAS
Published : Oct 6, 2024, 12:10 PM IST
ಗುಜರಾತ್: ದೇಶದೆಲ್ಲೆಡೆ ನವರಾತ್ರಿಯ ಸಂಭ್ರಮ, ಸಡಗರ ಮನೆ ಮಾಡಿದೆ. ಕರ್ನಾಟಕದಲ್ಲಿ ನಾಡಹಬ್ಬದ ಸಂಭ್ರಮೋಲ್ಲಾಸವಿದೆ. ಅಂತೆಯೇ ದೇಶದ ಉತ್ತರದ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ನವದುರ್ಗೆಯ ಆರಾಧನೆ, ಪೂಜಾ ವಿಧಿಗಳು ನಡೆಯುತ್ತಿವೆ.
ಗುಜರಾತ್‌ನಲ್ಲಿ ಜನರು ಗರ್ಬಾ ನೃತ್ಯ ಮಾಡುತ್ತಾ ವಿಶೇಷವಾಗಿ ನವರಾತ್ರಿ ಆಚರಿಸುತ್ತಾರೆ. ಇದರ ಭಾಗವಾಗಿ ಜಾಮ್ ನಗರದಲ್ಲಿ ನಿನ್ನೆ (ಶನಿವಾರ) ಜನರು ಸೇರಿ 'ಸ್ವಸ್ತಿಕ್ ರಾಸ್' ಪ್ರದರ್ಶಿಸಿದರು. ಸ್ವಸ್ತಿಕ್ ರೀತಿಯಲ್ಲಿ ಎಲ್ಲರೂ ನೆಲದಲ್ಲಿ ಮಲಗಿಕೊಂಡು ಕೋಲಾಟ ರೀತಿಯಲ್ಲಿ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ಅವರ ಸುತ್ತಲೂ ಬೆಂಕಿ ಹಚ್ಚಲಾಗುತ್ತದೆ. ಈ ಬೆಂಕಿ ಸ್ವಸ್ತಿಕಾಕಾರದಲ್ಲಿ ಸುತ್ತುವರೆಯುತ್ತದೆ. ಈ ರೋಮಾಂಚನಕಾರಿ ದೃಶ್ಯ ನೋಡಲು ಆಕರ್ಷಕವಾಗಿತ್ತು. ನೆರೆದಿದ್ದ ಜನರೆಲ್ಲ ಸ್ವಸ್ತಿಕ್ ರಾಸ್ ಕಣ್ತುಂಬಿಕೊಂಡರು.
ಇದನ್ನೂ ಓದಿ: ಸೀರೆ ಉಟ್ಟು ನೃತ್ಯ ಮಾಡುವ ಪುರುಷರು: ಅಹಮದಾಬಾದ್‌ನ ವಿಶಿಷ್ಟ ಗರ್ಬಾ ಆಚರಣೆಯ ವಿಶೇಷತೆ ಏನು? - men dress up as women
ಇದನ್ನೂ ಓದಿ: ತಿರುಮಲದಲ್ಲಿ ಬ್ರಹ್ಮೋತ್ಸವ ಸಂಭ್ರಮ; 9 ದಿನವೂ ವಿಶೇಷ ವಾಹನದಲ್ಲಿ ಶ್ರೀವಾರಿ ಸೇವೆ - TIRUMALA BRAHMOTSAVAMS