ಕರ್ನಾಟಕ

karnataka

ETV Bharat / videos

LIVE: ಬೆಂಬಲಿಗರೊಂದಿಗೆ ಸಂಸದೆ ಸುಮಲತಾ ಸಭೆ - MP Sumalatha Meeting - MP SUMALATHA MEETING

By ETV Bharat Karnataka Team

Published : Mar 30, 2024, 4:22 PM IST

Updated : Mar 30, 2024, 4:27 PM IST

ಬೆಂಗಳೂರು: ಮಂಡ್ಯದಿಂದ ಲೋಕಸಭೆ ಟಿಕೆಟ್​ ವಂಚಿತರಾಗಿರುವ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರು ಇಲ್ಲಿನ ಜೆಪಿ ನಗರ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ. ಮುಂದಿನ ರಾಜಕೀಯ ನಡೆ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ. ಸುಮಲತಾ ಜೊತೆ ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ, ನಿವಾಸದ ಮುಂದೆ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಮಂಡ್ಯ, ಮದ್ದೂರು ಸೇರಿದಂತೆ ಹಲವು ಕಡೆಗಳಿಂದ ಜನರು ಆಗಮಿಸಿದ್ದಾರೆ. ಈಗಾಗಲೇ ಮಾತನಾಡಿರುವ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್, ''ಸಮಯ ಇಲ್ಲ, ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಂಬಿ ಮಗನಾಗಿ ಹೇಳುತ್ತೇನೆ ಮಂಡ್ಯ ಬಿಟ್ಟು ಹೋಗಲ್ಲ, ಎಲ್ಲರೂ ನನ್ನನ್ನು ಮಂಡ್ಯದ ಗಂಡು ಅಂಬರೀಷ್​ ಮಗ ಎಂದೇ ಗುರುತಿಸುತ್ತಾರೆ. ಎಲ್ಲರ ಅಭಿಪ್ರಾಯ ಪಡೆದುಕೊಂಡು ನಮ್ಮ ತಾಯಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ'' ಎಂದು ಹೇಳಿದ್ದಾರೆ.ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸುಮಲತಾ ಭೇಟಿಯಾಗಿ ಚರ್ಚೆ ನಡೆಸಿದ್ದರು. ಶನಿವಾರ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಬಿಜೆಪಿಗೆ ಬೆಂಬಲಿಸುವುದು ಒಂದು ಕಡೆ ಆದರೆ, ನನ್ನ ಬೆಂಬಲಿಗರ ನಿಲುವು ನನ್ನ ಆದ್ಯತೆ ಆಗಿರಲಿದೆ. ಕೆಲ ದಿನಗಳಲ್ಲಿ ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದರು.
Last Updated : Mar 30, 2024, 4:27 PM IST

ABOUT THE AUTHOR

...view details