ಕರ್ನಾಟಕ

karnataka

ETV Bharat / videos

ಗಾಯಾಳುಗಳನ್ನು ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಕೋಳಿವಾಡ - MLA Prakash Koliwada - MLA PRAKASH KOLIWADA

By ETV Bharat Karnataka Team

Published : Jul 8, 2024, 2:12 PM IST

ಹಾವೇರಿ: ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸೇರಿಸುವ ಮೂಲಕ ರಾಣೆಬೆನ್ನೂರಿನ ಶಾಸಕ ಪ್ರಕಾಶ ಕೋಳಿವಾಡ ಮಾನವೀಯತೆ ಮೆರೆದಿದ್ದಾರೆ. 

ಶಾಸಕ ಪ್ರಕಾಶ ಕೋಳಿವಾಡ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವೈ.ಟಿ.ಹೊನ್ನತ್ತಿ ಗ್ರಾಮಕ್ಕೆ ವೈಯಕ್ತಿಕ ಕಾರ್ಯಕ್ಕಾಗಿ ತೆರಳಿದ್ದರು. ತಮ್ಮ ಕಾರ್ಯ ಮುಗಿಸಿ ರಾಣೆಬೆನ್ನೂರಿಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವೈ.ಟಿ. ಹೊನ್ನತ್ತಿ ಕ್ರಾಸ್ ಬಳಿ ಕಾರು ಮತ್ತು‌ ಬೈಕ್ ನಡುವೆ ಅಪಘಾತ ಸಂಭವಿಸಿ, ಗಾಯಾಳುಗಳು ಬಿದ್ದು ಒದ್ದಾಡುತ್ತಿದ್ದದ್ದನ್ನು ಕಂಡಿದ್ದಾರೆ. 

ಬೈಕ್ ಸವಾರರ ಅವಸ್ಥೆ ಕಂಡ ಶಾಸಕರು ಚಾಲಕನಿಗೆ ಕೂಡಲೇ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅವರ ಆರೋಗ್ಯ ವಿಚಾರಿಸಿ, ತಮ್ಮ ವಾಹನದಲ್ಲಿಯೇ ಗಾಯಾಳುಗಳನ್ನು ಕರೆದುಕೊಂಡು ಬಂದು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಿ, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ ನಂತರ ಶಾಸಕರು ಮುಂದೆ ಪಯಣಿಸಿದ್ದಾರೆ‌. ಶಾಸಕರ ಕಾರ್ಯಕ್ಕೆ ಗಾಯಾಳುಗಳು ಧನ್ಯವಾದ ಸಲ್ಲಿಸಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಶಾಲೆಗೆ ಭೇಟಿ ನೀಡಿದ್ದ ಶಾಸಕ ಪ್ರಕಾಶ ಕೋಳಿವಾಡ್ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ನೋಡಿ: ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರ; 10 ವರ್ಷದಿಂದ ಗ್ರಾಮಸ್ಥರ ದಾಹ ತೀರಿಸುತ್ತಿರುವ ರೈತ! - WATER SCARCITY

ABOUT THE AUTHOR

...view details