ಮಂಗಳೂರು: 45 ನಿಮಿಷ ಈಜಾಡಿದ ಸಚಿವ ದಿನೇಶ್ ಗುಂಡೂರಾವ್- ವಿಡಿಯೋ - Dinesh Gundurao Swimming - DINESH GUNDURAO SWIMMING
Published : Jul 7, 2024, 2:50 PM IST
ಮಂಗಳೂರು: ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಾವೊಬ್ಬ ಒಳ್ಳೆಯ ಈಜುಪಟು ಎಂಬುದನ್ನು ತೋರಿಸಿದ್ದಾರೆ. ಶನಿವಾರ ಬೆಳಗ್ಗೆ ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳಕ್ಕೆ ಭೇಟಿ ನೀಡಿದ ಸಚಿವರು, 45 ನಿಮಿಷಗಳ ಕಾಲ ಈಜಾಡಿ ಖುಷಿಪಟ್ಟರು.
ಕಳೆದ ವರ್ಷ ಈಜುಕೊಳ ಉದ್ಘಾಟನೆಯ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಆಗಮಿಸಿರಲಿಲ್ಲ. ಈಜಾಡುವ ಮೂಲಕವೇ ಉದ್ಘಾಟನೆ ಮಾಡುವುದಾಗಿ ಅವರು ಹಿಂದೆ ಹೇಳಿದ್ದರು. ಇದೀಗ ಕಾರ್ಯನಿಮಿತ್ತ ಜಿಲ್ಲೆಗೆ ಬಂದಿರುವ ಗುಂಡೂರಾವ್ ಈಜಾಡಿ ಗಮನ ಸೆಳೆದಿದ್ದಾರೆ.
ಈಜುಪಟುಗಳಿಗೆ ಪ್ರತ್ಯೇಕ ಲಾಕ್ ರೂಮ್ ಇಲ್ಲದೇ ಇರುವುದನ್ನು ನೋಡಿ, ತಕ್ಷಣ ಅದಕ್ಕೊಂದು ವ್ಯವಸ್ಥೆ ಮಾಡಿ. ಕೊಳದೆದುರಿನ ಮೈದಾನಕ್ಕೆ ಇಂಟರ್ಲಾಕ್ ಹಾಕಿಸಿ, ಮಕ್ಕಳ ಆಟಕ್ಕೆ ಅನುಕೂಲವಾಗುವಂತೆ ರೂಪಿಸಿ. ಮೈದಾನದ ಸುತ್ತ ಫುಡ್ ಕೋರ್ಟ್ ಸ್ಥಾಪನೆಗೂ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಈಜುಕೊಳ ಕಟ್ಟಡ ವೀಕ್ಷಣೆಯ ಬಳಿಕ ಸುಮಾರು ಮುಕ್ಕಾಲು ಗಂಟೆ ಸಚಿವರು ಈಜಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಕಾಡಾನೆ ಸಾವು, ಕಳೇಬರದ ಬಳಿ ಗುಂಪಿನ ಇತರ ಆನೆಗಳ ಮೂಕ ರೋಧನೆ - wild elephant died