ಮತ ಚಲಾಯಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ - Voted by Mohan Bhagwat - VOTED BY MOHAN BHAGWAT
Published : Apr 19, 2024, 8:49 AM IST
ನಾಗ್ಪುರ (ಮಹಾರಾಷ್ಟ್ರ): ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ಬೆಳಗ್ಗೆ ನಾಗ್ಪುರದಲ್ಲಿ ಮತ ಚಲಾಯಿಸಿದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬೆಳಗ್ಗೆ 6.55ಕ್ಕೆ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಸಮೀಪವಿರುವ ಭೌಜಿ ದಪ್ತರಿ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಬಂದು ವೋಟ್ ಮಾಡಿದರು.
ಲೋಕಸಭೆ ಚುನಾವಣೆ 2024ರ ನಾಗ್ಪುರದ ಮತದಾನ ಕೇಂದ್ರಗಳಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 5 ಲೋಕಸಭಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಮತದಾನ ನಡೆಯುತ್ತಿದೆ. ನಾಗ್ಪುರ, ರಾಮ್ಟೆಕ್, ಚಂದ್ರಾಪುರ, ಭಂಡಾರ ಗೊಂಡಿಯಾ ಮತ್ತು ಗಡ್ಚಿರೋಲಿ ಚಿಮುರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ.
"ಮತದಾನ ಮಾಡುವುದು ನಮ್ಮ ಕರ್ತವ್ಯ. ಮತದಾನದ ಮೂಲಕ ನಾವು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತೇವೆ. ನಾನು ನನ್ನ ಮೊದಲ ಕರ್ತವ್ಯವನ್ನು ಪೂರ್ಣಗೊಳಿಸಿದ್ದೇನೆ. ಇಂದು ಬೇರೆ ಯಾವುದೇ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ" ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಆರ್‌ಎಸ್‌ಎಸ್ ಕಾರ್ಯವಾಹ ಭಯ್ಯಾಜಿ ಜೋಶಿ, "ದೇಶವು ಎದುರಿಸುತ್ತಿರುವ ಸವಾಲುಗಳಿಗೆ ಸಮರ್ಥವಾಗಿ ಉತ್ತರಿಸುವ ಸರ್ಕಾರದ ಅಗತ್ಯವಿದೆ. ನಾವು ದೇಶವನ್ನು ಅಭಿವೃದ್ಧಿಪಡಿಸಲು ಮತ್ತು ರಕ್ಷಿಸಲು ಬಯಸುತ್ತೇವೆ. ನಾವು ಗರಿಷ್ಠ ಮತದಾನ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ" ಎಂದರು.