ಕರ್ನಾಟಕ

karnataka

ETV Bharat / videos

ಎರಡು ನಾಯಿಗಳಿಗೆ ಹೊಂಚು ಹಾಕಿ ವಿಫಲವಾಗಿದ್ದ ಚಿರತೆ: ಮತ್ತೊಂದು ಯತ್ನದಲ್ಲಿ ಒಂದು ಶ್ವಾನ ನಾಪತ್ತೆ - Karwar

By ETV Bharat Karnataka Team

Published : Feb 25, 2024, 3:02 PM IST

ಕಾರವಾರ: ಮನೆಯಂಗಳದಲ್ಲಿದ್ದ ಎರಡು ನಾಯಿಗಳನ್ನು ಹೊತ್ತೊಯ್ಯಲು ಯತ್ನಿಸಿ ವಿಫಲವಾಗಿದ್ದ ಚಿರತೆಯೊಂದು ಮತ್ತೊಮ್ಮೆ ದಾಳಿ ನಡೆಸಿ ಒಂದು ನಾಯಿಯನ್ನು ಹೊತ್ತೊಯ್ದ ಘಟನೆ ಕುಮಟಾ ತಾಲ್ಲೂಕಿನ ಹೊಲನಗದ್ದೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. 

ಹೊಲನಗದ್ದೆಯ ದತ್ತಾತ್ರೇಯ ಭಟ್ಟ ಎಂಬವರ ಮನೆಯ ಅಂಗಳದಲ್ಲಿದ್ದ ಎರಡು ನಾಯಿಗಳಿಗೆ ಹೊಂಚು ಹಾಕಿದ ಚಿರತೆ ಅಂಗಳಕ್ಕೆ ಬಂದು ಕುಳಿತಿತ್ತು. ಮೊದಲು ಚಿರತೆ ಇರುವುದನ್ನು ನಾಯಿ ಸರಿಯಾಗಿ ಗಮನಿಸಿರಲಿಲ್ಲ. ಆದರೆ ಇನ್ನೂ ಹತ್ತಿರ ಬಂದಾಗ ನಾಯಿಗಳು ಚಿರತೆಯನ್ನೂ ಕಂಡು ಓಡಿ ಹೋಗಿ ತಪ್ಪಿಸಿಕೊಂಡಿದ್ದವು. ಈ ದೃಶ್ಯಗಳು ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. 

ಆದರೆ ಚಿರತೆ ಪುನಃ ಬಂದು ಒಂದು ನಾಯಿಯನ್ನು ಹೊತ್ತೊಯ್ದಿದೆ. ಆದರೆ ಆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಇಲ್ಲದ ಕಾರಣ ದೃಶ್ಯ ಸೆರೆಯಾಗಿಲ್ಲ. ಆದರೆ ಬೆಳಗ್ಗೆ ನಾಯಿ ಕಾಣದೇ ಇದ್ದಾಗ ಮನೆಯವರು ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಚಿರತೆ ಹೊಂಚು ಹಾಕಿರುವುದು ಸೆರೆಯಾಗಿದೆ. ಮತ್ತೊಂದು ನಾಯಿ ಇಲ್ಲದೆ ಇರುವುದರಿಂದ ಚಿರತೆ ಹೊತ್ತೊಯ್ದಿರುವುದು ಗೊತ್ತಾಗಿದೆ. 

ಹೊಲನಗದ್ದೆಯಲ್ಲಿ ಹಲವು ಮನೆಗಳಿವೆ. ಆದರೆ ಎಲ್ಲ ಮನೆಗಳನ್ನು ದಾಟಿ ಬಂದು ಚಿರತೆ ಈ ರೀತಿ ನಾಯಿಯನ್ನು ಹೊತ್ತೊಯ್ದಿರುವುದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ. ಕೂಡಲೇ ಚಿರತೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಕೂಡ ನಿಗಾ ವಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  

ಇದನ್ನೂ ಓದಿ: ಕಾರವಾರ: ಅವ್ಯವಹಾರ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ಆರೋಪ

ABOUT THE AUTHOR

...view details