ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ಕೋಟ್ಯಂತರ ರೂ. ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು ಜಲಾವೃತ - Brick kilns worth crores flooded - BRICK KILNS WORTH CRORES FLOODED
Published : Jul 27, 2024, 4:57 PM IST
ದಾವಣಗೆರೆ: ಗುತ್ತೂರು ಇಟ್ಟಿಗೆಗಳೆಂದರೆ ದಾವಣಗೆರೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಖ್ಯಾತಿ ಗಳಿಸಿವೆ. ಆದರೆ, ಇದೀಗ ಮಲೆನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಬಳಿ ಇರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು ನೀರಿನಿಂದ ಜಲಾವೃತಗೊಂಡಿವೆ.
10-15 ಇಟ್ಟಿಗೆ ಭಟ್ಟಿಗಳಿಗೆ ನೀರುವ ಆವರಿಸಿಕೊಂಡಿದೆ. ಮಧ್ಯೆ ಇಟ್ಟಿಗೆ ಭಟ್ಟಿಗಳಿದ್ದು, ಸುತ್ತ ನೀರು ಆವರಿಸಿರುವುದರಿಂದ ದ್ವೀಪದಂತೆ ಮಾರ್ಪಾಡಾಗಿದೆ. ಹರಿಹರ ತಾಲೂಕಿನ ಗುತ್ತೂರು ಭಾಗದಲ್ಲಿ ನೂರಾರು ಇಟ್ಟಿಗೆ ಭಟ್ಟಿಗಳಿದ್ದು, ನೀರು ನುಗ್ಗಿದ್ದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೇ ಖಾಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯ ಪ್ರವಾಹಕ್ಕೆ ಇಟ್ಟಿಗೆ ಭಟ್ಟಿಗಳು ಕೊಚ್ಚಿಕೊಂಡು ಹೋಗುವ ಭೀತಿ ಮಾಲೀಕರಿಗೆ ಕಾಡುತ್ತಿದೆ. ಬಡವರಿಗೆ ಕೆಲಸ ಕೊಡುವ ಇಟ್ಟಿಗೆ ಭಟ್ಟಿಗಳು ಪ್ರವಾಹಕ್ಕೆ ನಲುಗಿ ಹೋಗಿವೆ.
ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ: ಗಡ್ಡೆಗೂಳಿ ಶ್ರೀ ಬಸವೇಶ್ವರ ದೇವಾಲಯ ಜಲಾವೃತ - temple is flooded