ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಮಾಡಿದ ಸನ್ನೆಯು ವಿವಾದ ಎಬ್ಬಿಸಿದೆ. ಕೆಲವರು ಇದನ್ನು 'ನಾಜಿ' ಅಥವಾ 'ಫ್ಯಾಸಿಸ್ಟ್' ಸೆಲ್ಯೂಟ್ ಎಂದು ಕರೆದಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿಗಾಗಿ ಶ್ರಮಿಸಿದ್ದ ಮಸ್ಕ್ ಪದಗ್ರಹಣ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ದೇಶದ ಜನರಿಗೆ ಧನ್ಯವಾದ ಸಲ್ಲಿಸುವಾಗ ಅವರ ಬಲಗೈಯನ್ನು ಎದೆಯ ಮೇಲಿಟ್ಟುಕೊಂಡು ನಾಜಿ ಸೆಲ್ಯೂಟ್ನಂತೆ ಸನ್ನೆ ಮಾಡಿದ್ದಾರೆ.
Full video:pic.twitter.com/OoJHbegUq7
— Yehuda Teitelbaum (@chalavyishmael) January 20, 2025
ನಾಜಿಸಂನಲ್ಲಿ ಪರಿಣತಿ ಹೊಂದಿರುವ ಇತಿಹಾಸಕಾರ ಕ್ಲೇರ್ ಆಬಿನ್ ಅವರು, ಮಸ್ಕ್ ಅವರ ಸನ್ನೆಯು 'ಸೀಗ್ ಹೀಲ್' ಅಥವಾ ನಾಜಿ ಸೆಲ್ಯೂಟ್ ಎಂದು ಒಪ್ಪಿಕೊಂಡಿದ್ದಾರೆ. "ನನ್ನ ವೃತ್ತಿ ಅನುಭವದ ಅಭಿಪ್ರಾಯವೆಂದರೆ ನೀವು ಕಂಡಿದ್ದು ಸತ್ಯವಾಗಿದೆ, ಇದನ್ನು ನೀವು ನಂಬಲೇಬೇಕು" ಎಂದು ಹೇಳುವ ಮೂಲಕ ನಾಜಿ ಸೆಲ್ಯೂಟ್ ಅನ್ನು ದೃಢೀಕರಿಸಿದ್ದಾರೆ.
Historian of fascism here. That was a Nazi salute - and a very belligerent one too https://t.co/PB9sFCVJGA
— Ruth Ben-Ghiat (@ruthbenghiat) January 20, 2025
ಫ್ಯಾಸಿಸಂನ ಇನ್ನೊಬ್ಬ ಇತಿಹಾಸಕಾರ ರುತ್ ಬೆನ್-ಘಿಯಾಟ್ ಕೂಡ "ಈ ಸನ್ನೆಯು ನಾಜಿ ಸೆಲ್ಯೂಟ್ ಆಗಿತ್ತು. ತುಂಬಾ ಆವೇಶ ಭರಿತದಿಂದಲೂ ಕೂಡಿತ್ತು" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಪಕ್ಷದಿಂದ ಟೀಕೆ: ವಿಪಕ್ಷ ಡೆಮಾಕ್ರಟಿಕ್ ಸದಸ್ಯರು ಕೂಡ ಮಸ್ಕ್ ಅವರ ಈ ಸನ್ನೆಯನ್ನು ನಾಜಿ ಸೆಲ್ಯೂಟ್ ಎಂದು ಟೀಕಿಸಿದ್ದಾರೆ. "ಒಳ್ಳೆಯದು, ಮನಸ್ಸಿನಲ್ಲಿರುವುದು ಹೆಚ್ಚು ದಿನ ಉಳಿಯದೆ, ಹೊರಬಂದಿದೆ" ಎಂದು ಸೆನೆಟರ್ ಜಿಮ್ಮಿ ಗೊಮೆಜ್ ಅವರು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
Welp, that didn’t take long. #TrumpInauguration https://t.co/VoSjOQhrty
— Rep. Jimmy Gomez (@RepJimmyGomez) January 20, 2025
ಮತ್ತೊಬ್ಬ ಇತಿಹಾಸಕಾರ ಆರನ್ ಆಸ್ಟರ್ ಅವರು ಎಲಾನ್ ಮಸ್ಕ್ ಅವರ ಮೇಲೆ ಕೇಳಿ ಬಂದ ನಾಜಿ ಸೆಲ್ಯೂಟ್ ಆರೋಪಗಳನ್ನು ನಿರಾಕರಿಸಿದರು. ಈ ಸನ್ನೆಯು ನಾಜಿ ಸೆಲ್ಯೂಟ್ ಅಲ್ಲ. ವ್ಯಕ್ತಿಯೊಬ್ಬರು 'ನನ್ನ ಹೃದಯವು ನಿಮ್ಮ ಕಡೆಗೆ ಮಿಡಿಯುತ್ತದೆ' ಎಂದು ಹೇಳುವ ರೀತಿಯಾಗಿದೆ ಎಂದಿದ್ದಾರೆ.
This is a delicate moment. It’s a new day and yet so many are on edge. Our politics are inflamed, and social media only adds to the anxiety.
— ADL (@ADL) January 20, 2025
It seems that @elonmusk made an awkward gesture in a moment of enthusiasm, not a Nazi salute, but again, we appreciate that people are on…
ಚುನಾವಣೆಯಲ್ಲಿ ಟ್ರಂಪ್ಗೆ ಬಹಿರಂಗ ಬೆಂಬಲ ಘೋಷಿಸಿದ್ದ ಮಸ್ಕ್: ಎಲೋನ್ ಮಸ್ಕ್ ಈ ಬಾರಿಯ ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ಟ್ರಂಪ್ ಅವರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ನಡುವೆ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ಕುಟುಂಬ ಸಮೇತ ಭಾಗವಹಿಸಿ ಗಮನ ಸೆಳೆದರು. ಇದೇ ವೇಳೆ, ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ರಿಟರ್ನ್ ಆಫ್ ದಿ ಕಿಂಗ್ ಎಂಬ ವಿಶೇಷ ಶೀರ್ಷಿಕೆ ನೀಡಿ ಪೋಸ್ಟ್ ಕೂಡಾ ಮಾಡಿದ್ದಾರೆ.
I have criticized Elon Musk many times for letting neo-Nazis pollute this platform. But this gesture is not a Nazi salute. This is a socially awkward autistic man's wave to the crowd where he says " my heart goes out to you." https://t.co/QWWiYHEI65
— Aaron Astor (@AstorAaron) January 20, 2025