ಕರ್ನಾಟಕ

karnataka

ETV Bharat / videos

ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್​ಪಾತ್‌ಗೆ ನುಗ್ಗಿದ ಗೂಡ್ಸ್ ವಾಹನ: ಸಿಸಿಟಿವಿ ದೃಶ್ಯ - Goods Vehicle Accident - GOODS VEHICLE ACCIDENT

By ETV Bharat Karnataka Team

Published : Jun 21, 2024, 6:00 PM IST

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಫುಟ್​ಪಾತ್ ಮೇಲೆ ನುಗ್ಗಿದ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗೂಡ್ಸ್ ವಾಹನ ಏಕಾಏಕಿ ರಸ್ತೆಯ ಬಲಭಾಗದ ಪಾದಚಾರಿ ರಸ್ತೆ ಮೇಲೆ ಹರಿದಿದ್ದು, ಬಳಿಕ ಅಂಗಡಿಗೆ ನುಗ್ಗಿದೆ. ಇದಕ್ಕೂ ಮುನ್ನ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ಮಲ್ಲೇಶ್ವರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಂತಿದ್ದ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ: ನಿಂತಿದ್ದ ಬೈಕ್​​ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ (ಏಪ್ರಿಲ್ 10) ರಾಜಗೋಪಾಲನಗರದ ಹೆಗ್ಗನಹಳ್ಳಿ ಬಳಿ ನಡೆದಿತ್ತು. ಮೊಹಮ್ಮದ್ ಫಾರೂಕ್ ಹಾಗೂ ಅಬ್ರಾರ್ ಅಹಮದ್ ಮೃತ ದುರ್ದೈವಿಗಳೆಂದು ತಿಳಿದುಬಂದಿತ್ತು. ಈ ಕುರಿತು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಇದನ್ನೂ ಓದಿ: ನಿಂತಿದ್ದ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರ ಸಾವು, ಓರ್ವನಿಗೆ ಗಾಯ - Road Accident

ABOUT THE AUTHOR

...view details