₹2 ಕೋಟಿ 70 ಲಕ್ಷ ಕರೆನ್ಸಿ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ!: ಎಲ್ಲಿ ಗೊತ್ತಾ? - Decoration by currency notes
Published : Sep 14, 2024, 9:31 PM IST
ಆಂಧ್ರಪ್ರದೇಶ: ದೇಶಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಜೋರಾಗಿದೆ. ಹಳ್ಳಿಯಿಂದ ದಿಲ್ಲಿಯ ವರೆಗೆ ಬೀದಿ ಬೀದಿಗಳಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಗಣೇಶನನ್ನು ಕೂರಿಸುವ ಮಂಟಪಕ್ಕೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿದೆ. ಆದರೆ, ಎಲ್ಲದಕ್ಕಿಂತ ಭಿನ್ನವಾಗಿ ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ನಂದಿಗಾಮದ ವಾಸವಿ ಮಾರುಕಟ್ಟೆ ಬಳಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಮಂಟಪವನ್ನು 2 ಕೋಟಿ 70 ಲಕ್ಷ ರೂಪಾಯಿ ಕರೆನ್ಸಿ ನೋಟುಗಳಿಂದ ಸಿಂಗರಿಸಲಾಗಿದೆ.
ನಂದಿಗಾಮದ ವಾಸವಿ ಬಜಾರ್ನ ಸಮಿತಿ ಸದಸ್ಯರು 42ನೇ ಗಣೇಶೋತ್ಸವದ ಪ್ರಯುಕ್ತ ರಾಜ ದರ್ಬಾರ್ ಗಣಪತಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸುತ್ತಿದ್ದಾರೆ. ಇದರ ಭಾಗವಾಗಿ ಶುಕ್ರವಾರ ವಿವಿಧ ಮುಖಬೆಲೆಯ 2 ಕೋಟಿ 70 ಲಕ್ಷ ರೂಪಾಯಿ ಹಣದಿಂದ ಗಣೇಶ ಸೇರಿದಂತೆ ಇಡೀ ಮಂಟಪವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಈ ವಿಭಿನ್ನ ಅಲಂಕಾರ ಕಾಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಮತ್ತೊಂದೆಡೆ, ಗುಂಟೂರು ಜಿಲ್ಲೆಯ ಮಂಗಳಗಿರಿಯ ಪ್ರಮುಖ ಬೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಯನ್ನು 2 ಕೋಟಿ 30 ಲಕ್ಷ ರೂಪಾಯಿಗಳ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿ 10, 20, 50, 100, 200, 500 ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ. ಸಚಿವ ನಾರಾ ಲೋಕೇಶ್ ಅವರು ಈ ಕರೆನ್ಸಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ರೈತ ಗಣೇಶೋತ್ಸವ: ತರಕಾರಿ, ಹೂಗಳಿಂದ ಸಿಂಗಾರ - Sathyaganapati Temple