ಕರ್ನಾಟಕ

karnataka

ETV Bharat / videos

ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ₹1.12 ಕೋಟಿ ಕಾಣಿಕೆ - Nanjundeshwar Hundi Counting

By ETV Bharat Karnataka Team

Published : Aug 7, 2024, 1:12 PM IST

ಮೈಸೂರು‌: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು. ದೇವಾಲಯದ ದಾಸೋಹ ಭವನದಲ್ಲಿ ಸುಮಾರು 35 ಹುಂಡಿಗಳನ್ನು ಎಣಿಕೆ ಮಾಡಲಾಯಿತು. 1.12 ಕೋಟಿ ರೂ. ಹಣ ಸಂಗ್ರಹವಾಗಿದೆ.

ಒಂದು ತಿಂಗಳ ಅವಧಿಯಲ್ಲಿ 35 ಹುಂಡಿಗಳ ಎಣಿಕೆಯಲ್ಲಿ 1,12,92,056 ರೂ. ಸಂಗ್ರಹವಾಗಿದೆ. ಹುಂಡಿ ಎಣಿಕೆಯಲ್ಲಿ ಭಕ್ತರು ದೇವಾಲಯದಲ್ಲಿರುವ ಅವ್ಯವಸ್ಥೆಯ ಬಗ್ಗೆ ಬರೆದಿರುವ ಪತ್ರಗಳು ದೊರೆತಿವೆ. ಜೊತೆಗೆ 51 ಗ್ರಾಂ 380 ಮಿಲಿಗ್ರಾಂಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ, 46 ವಿದೇಶಿ ನೋಟುಗಳು ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ. ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. 

ಜಿಲ್ಲೆಯ ಪ್ರಮುಖ ದೇಗುಲಗಳ ಪೈಕಿ ನಂಜುಂಡೇಶ್ವರನ ದೇಗುಲವೂ ಒಂದಾಗಿದ್ದು, ಜನರ ನೆಚ್ಚಿನ ದೇವಸ್ಥಾನ ಆಗಿದೆ. ಇತ್ತೀಚೆಗೆ ಹೊರ ರಾಜ್ಯ ಹಾಗೂ ಇತರೆ ಜಿಲ್ಲೆಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತ ಮತ್ತು ದೇಶ ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ದೇಗುಲಕ್ಕೆ ಹೆಚ್ಚಾಗಿ ಕಾಣಿಕೆ ಹರಿದುಬಂದಿದೆ. ಇದರ ಪರಿಣಾಮ ಹುಂಡಿಯಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಎಇಒ ಸತೀಶ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ಗುರು ಮಲ್ಲಯ್ಯ, ಮುಜರಾಯಿ ತಹಶೀಲ್ದಾರ್ ವಿದ್ಯುಲತಾ, ಕೆನರಾ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮದೇವಿ ಹುಂಡಿ ಎಣಿಕೆ: ಒಂದೂವರೆ ತಿಂಗಳಲ್ಲಿ ₹1.96 ಕೋಟಿ ಕಾಣಿಕೆ ಸಂಗ್ರಹ! - Savadatti Yallamma Devi

ABOUT THE AUTHOR

...view details