ಕರ್ನಾಟಕ

karnataka

ETV Bharat / videos

ರಸ್ತೆಯಲ್ಲಿ ದನಗಳ ಹಾವಳಿ: ಚಿಕ್ಕಮಗಳೂರು ಎಸ್​ಪಿ ನೇತೃತ್ವದಲ್ಲಿ ಕಾರ್ಯಾಚರಣೆ - Street Cattle - STREET CATTLE

By ETV Bharat Karnataka Team

Published : Jul 14, 2024, 7:53 PM IST

ಚಿಕ್ಕಮಗಳೂರು: ರಸ್ತೆಯಲ್ಲಿ ದನಗಳಿಂದ ಆಗುವ ಅಪಘಾತಗಳನ್ನು ತಪ್ಪಿಸಲು ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಖುದ್ದು ತಾವೇ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು. ಎಸ್​ಪಿ ನೇತೃತ್ವದಲ್ಲಿ ಪೊಲೀಸರು ಇಂದು ಕಾರ್ಯಾಚರಣೆ ನಡೆಸಿ, ರಸ್ತೆಯಲ್ಲಿ ಓಡಾಡುತ್ತಿದ್ದ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ್ದಾರೆ.   

ಚಿಕ್ಕಮಗಳೂರು ನಗರದಲ್ಲಿ ಇತ್ತೀಚಿಗೆ ರಸ್ತೆಯಲ್ಲಿ ದನಕರುಗಳು ಅಡ್ಡ ಬಂದ ಕಾರಣ ಇಬ್ಬರು ಸಾವನ್ನಪ್ಪಿದ್ದರು. ಸುಮಾರು 60ಕ್ಕೂ ಹೆಚ್ಚು ಬೈಕ್ ಸವಾರರು ಬೈಕಿನಿಂದ ಬಿದ್ದು ಗಾಯಗೊಂಡು ನರಳಾಡಿದ್ದಾರೆ. ಹಾಗಾಗಿ, ದನಗಳ ನಿಯಂತ್ರಿಸಲು ಇಂದು ಎಸ್ಪಿ ನೇತೃತ್ವದಲ್ಲಿ ಪೊಲೀಸರು ಮುಂದಾಗಿ, ಮೂರು ದೊಡ್ಡ ಹಸು ಹಾಗೂ ಒಂದು ಚಿಕ್ಕ ಕರುವನ್ನ ಹಿಡಿದಿದ್ದಾರೆ. ರಾಸುಗಳಿಗೆ ಬಾಳೆಹಣ್ಣನ್ನ ತಿನ್ನಿಸಿ ಅವುಗಳನ್ನ ಚಿಕ್ಕಮಗಳೂರು ನಗರದ ಹೊರಹೊಲಯದ ಗೋಶಾಲೆಗೆ ಬಿಟ್ಟಿದ್ದಾರೆ. ರಾಸುಗಳ ಮಾಲೀಕರಿಗೆ ದಂಡ ಕಟ್ಟಿ ದನಕರುಗಳನ್ನ ಬಿಡಿಸಿಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಮತ್ತೊಮ್ಮೆ ರಾಸುಗಳನ್ನ ಬೀದಿಗೆ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ನಗರದಲ್ಲಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಎಸ್ಪಿ ವಿಕ್ರಂ ಅಮಟೆ ಅವರಿಗೆ, ಅಗ್ನಿಶಾಮಕ ದಳ, ಪಶು ಸಂಗೋಪನ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾಖೆ ಸಾಥ್ ನೀಡಿತ್ತು.

ಇದನ್ನೂ ಓದಿ :  ತುಕ್ಕು ಹಿಡೀತಿವೆ ಹಾವೇರಿ ಜಾನುವಾರು ಮಾರುಕಟ್ಟೆ ಮಳಿಗೆಗಳು: ಇತ್ತ ವ್ಯಾಪಾರಕ್ಕೂ ಇಲ್ಲ, ಅತ್ತ ನಿರ್ವಹಣೆಯೂ ಇಲ್ಲ!

ABOUT THE AUTHOR

...view details