ಕರ್ನಾಟಕ

karnataka

ETV Bharat / videos

ರಾಯರ ಮೂಲ ಬೃಂದಾವನಕ್ಕೆ ಪುಣ್ಯ ಗಂಧಲೇಪನ - chandana utsava

By ETV Bharat Karnataka Team

Published : May 10, 2024, 10:44 PM IST

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಂದನ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಕ್ಷಯ ತೃತೀಯ ಶುಭ ಹಿನ್ನೆಲೆಯಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರಂಭಿಸಿ, ಪವಿತ್ರ ಶ್ರೀಗಂಧದ ಪೇಸ್ಟ್ (ಗಂಧ)ವನ್ನು ಗರ್ಭಗುಡಿಯ ಕಡೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಶ್ರೀಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಪುಣ್ಯ ಗಂಧಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಂಧಕ್ಕೆ ಮಂಗಳಾರತಿ ನೆರವೇರಿಸಿದರು. ರಾಯರ ಬೃಂದಾವನಕ್ಕೆ ಮಾತ್ರವಲ್ಲದೇ ಶ್ರೀ ಮಂಚಾಲಮ್ಮ, ಶ್ರೀ ಪ್ರಾಣದೇವರು, ಶ್ರೀ ರುದ್ರ ದೇವರು ಮತ್ತು ಶ್ರೀ ಮಠದಲ್ಲಿರುವ ಗೌರವಾನ್ವಿತ ಸಂತರ ಇತರ ಪವಿತ್ರ ಬೃಂದಾವನಗಳಿಗೂ ಇಂದು ಪವಿತ್ರವಾದ ಶ್ರೀಗಂಧದ (ಗಂಧಲೇಪನ) ಲೇಪನ ಮಾಡುವ ಮೂಲಕ ವಿಶೇಷವಾಗಿ ಅಲಂಕರಿಸಲಾಗಿತ್ತು.

36 ಅಡಿ ಏಕಶಿಲಾ ಅಭಯರಾಮನ ಮೂರ್ತಿ ಪ್ರತಿಷ್ಠಾಪನೆ : ತುಂಗಭದ್ರಾ ನದಿ ತೀರದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಏಕಶಿಲಾ ಅಭಯರಾಮನ ಮೂರ್ತಿಯನ್ನು (ಜನವರಿ-21-24) ಪ್ರತಿಷ್ಠಾಪನೆ ಮಾಡಲಾಗಿತ್ತು.

ಪುಣ್ಯಕ್ಷೇತ್ರದ ಮಂತ್ರಾಲಯದ ಅಭಯ ಆಂಜನೇಯ ಸ್ವಾಮಿ ಮಂದಿರದ ಎದುರಿಗೆ ಇರುವ ಆರು ಎಕರೆ ಪ್ರದೇಶದಲ್ಲಿ ಅಭಯ ಶ್ರೀರಾಮನ ಮಂದಿರ ನಿರ್ಮಿಸಲಾಗುತ್ತಿದೆ. ಆ ಮಂದಿರದ ಮುಂಭಾಗದಲ್ಲಿ ಶನಿವಾರ ಮಠದ ಪೀಠಾಧಿಪತಿ ಡಾ ಸುಬುಧೇಂದ್ರ ತೀರ್ಥರು ನವ ಧಾನ್ಯಗಳನ್ನ ಇರಿಸಿ ಪೂಜೆ ಮಾಡಿದ್ದರು. ನಂತರ 36 ಅಡಿ ಎತ್ತರದ ಅಭಯ ಶ್ರೀರಾಮನ ಏಕಶಿಲಾ ಮೂರ್ತಿಯನ್ನು ಕಮಲ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿತ್ತು.

ಇದನ್ನೂ ಓದಿ : ಮಂತ್ರಾಲಯದಲ್ಲಿ 36 ಅಡಿ ಏಕಶಿಲಾ ಅಭಯರಾಮನ ಮೂರ್ತಿ ಪ್ರತಿಷ್ಠಾಪನೆ

ABOUT THE AUTHOR

...view details