ಕರ್ನಾಟಕ

karnataka

ETV Bharat / videos

ಚಾಮರಾಜನಗರ: ಕೆಟ್ಟು ನಿಂತ ಲಾರಿ ಮೇಲೆ ಆನೆ ದಾಳಿ, ಟಾರ್ಪಲ್ ಕಿತ್ತೆಸೆದು ರಂಪಾಟ - ಲಾರಿ ಮೇಲೆ ಆನೆ ದಾಳಿ

By ETV Bharat Karnataka Team

Published : Feb 8, 2024, 11:16 AM IST

ಚಾಮರಾಜನಗರ: ಕೆಟ್ಟು ನಿಂತಿದ್ದ ಲಾರಿಯೊಂದರ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಟಾರ್ಪಲ್ ಕಿತ್ತೆಸೆದು ರಂಪಾಟ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗದ ತಮಿಳುನಾಡಿನ‌ ಆಸನೂರಿನಲ್ಲಿ ನಡೆದಿದೆ.

ಲಾರಿ ಟಾರ್ಪಲ್​ ಕಿತ್ತೆಸೆದು ಆನೆ ದಾಂಧಲೆ: ಆಹಾರ ಅರಸಿ ಕಾಡಿನಿಂದ ರಸ್ತೆಗಿಳಿದ ಒಂಟಿ ಸಲಗವೊಂದು ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನು ಹುಡುಕಾಟದಲ್ಲಿರುವಾಗ ಕೆಟ್ಟು ನಿಂತ ಲಾರಿ ಮೇಲೆ ದಾಳಿ‌ ಮಾಡಿದೆ. ಲಾರಿಗೆ ಹೊದಿಸಿದ್ದ ಟಾರ್ಪಲ್​ ಕಿತ್ತೆಸೆದು ದಾಂಧಲೆ ಮಾಡಿರುವ ದೃಶ್ಯ ಲಾರಿ ಚಾಲಕನ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಆನೆ ರಂಪಾಟ ವಾಹನ ಸಂಚಾರ ಅಸ್ತವ್ಯಸ್ತ: ಇನ್ನು ಆನೆ ರಂಪಾಟದಿಂದ ಬೆಳಗ್ಗೆ ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬಿಆರ್ಟಿ ಹಾಗೂ ತಮಿಳುನಾಡಿನ‌ ಸತ್ಯಮಂಗಲಂ‌ ಹುಲಿ ಸಂರಕ್ಷಿತ ಪ್ರದೇಶವನ್ನು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಬೆಸೆಯಲಿದ್ದು, ಆಹಾರ ಅರಸಿ ಆಗಾಗ್ಗೆ ಆನೆಗಳು ಕಾಡಿನಿಂದ ರಸ್ತೆಗಿಳಿದು ರಂಪಾಟ ನಡೆಸುತ್ತವೆ. ಕಬ್ಬು ತುಂಬಿದ ಲಾರಿಗಳಿಗಾಗಿ ಆನೆಗಳು ರಸ್ತೆಗೆ ಬರುತ್ತಿರುವುದರಿಂದ ನಿತ್ಯವೂ ವಾಹನ ಸವಾರರು ಹೈರಾಣು ಆಗುತ್ತಿದ್ದಾರೆ.

ಇದನ್ನೂ ಓದಿ:ರಾಮನಗರದಲ್ಲಿ ಕಾಡಾನೆ ತುಳಿತಕ್ಕೆ ಓರ್ವ ಬಲಿ

ABOUT THE AUTHOR

...view details