ಕರ್ನಾಟಕ

karnataka

ETV Bharat / videos

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು, ಪ್ರಯಾಣಿಕರು ಪಾರು - Car Caught Fire - CAR CAUGHT FIRE

By ETV Bharat Karnataka Team

Published : Oct 6, 2024, 2:24 PM IST

ಆನೇಕಲ್: ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿಯ ಯಡವನಹಳ್ಳಿ ಗೇಟ್ ಸಮೀಪ ವಿಲಾಸಿ ಕಾರೊಂದು ಇಂದು ಹೊತ್ತಿ ಉರಿಯಿತು. ಇಂಜಿನ್​ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ವ್ಯಾಪಿಸಿ ಧಗ ಧಗನೆ ಉರಿದು ಕಾರಿನ ಮುಂಭಾಗ ಸುಟ್ಟು ಕರಕಲಾಯಿತು.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ಕಾರಿನಲ್ಲಿದ್ದ ಮೂವರು ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ವಾಹನ ಸವಾರರು ಬೆಂಕಿ ನಂದಿಸಲು ಹರಸಾಹಸಪಟ್ಟರು.

ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕಾರು ಸಂಪೂರ್ಣವಾಗಿ ಭಸ್ಮವಾಗುವುದನ್ನು ತಡೆದಿದ್ದಾರೆ. 

ತಮಿಳುನಾಡಿನ ಕೈಲಾಸ್, ರೋಹಿತ್ ಮತ್ತು ಸುನಿಲ್ ಎಂಬವರು ಬೊಮ್ಮನಹಳ್ಳಿಯಿಂದ ಚೆನ್ನೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿಯ ಯಡವನಹಳ್ಳಿ ಗೇಟ್​ ಸಮೀಪ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಉರಿಯುತ್ತಿದ್ದಂತೆ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ದಟ್ಟಣೆಯನ್ನು ತೆರವುಗೊಳಿಸಿದ್ದಾರೆ.

ಇದನ್ನೂ ನೋಡಿ: ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್‌ಗೆ ಬೆಂಕಿ; 25 ವಿದ್ಯಾರ್ಥಿಗಳು ಸುಟ್ಟು ಕರಕಲು - Bangkok School Bus Fire

ABOUT THE AUTHOR

...view details