ಕರ್ನಾಟಕ

karnataka

ETV Bharat / videos

ಬಳ್ಳಾರಿ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರ ರಥೋತ್ಸವ- ವಿಡಿಯೋ - SRIKOTE MALLESHWARA RATHTSAVA

By ETV Bharat Karnataka Team

Published : Feb 12, 2025, 8:36 PM IST

ಬಳ್ಳಾರಿ: ಗಣಿ ನಗರಿ ಬಳ್ಳಾರಿಯ ಆರಾಧ್ಯ ದೈವ ಶ್ರೀ ಕೋಟೆ ಮಲ್ಲೇಶ್ವರ ವಾರ್ಷಿಕ ಜಾತ್ರಾ ಬ್ರಹ್ಮ ರಥೋತ್ಸವ ಇಂದು ಸಾವಿರಾರು ಭಕ್ತ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. 

ನಗರದ ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಬಳ್ಳಾರಿ ನಗರ, ಜಿಲ್ಲೆಯಲ್ಲದೇ, ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ತಮ್ಮ ಆರಾಧ್ಯ ದೈವಕ್ಕೆ ಭಕ್ತಿ ಸಮರ್ಪಿಸಿ ಧನ್ಯತಾ ಭಾವ ಮೆರೆದರು. ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯದ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರುಗು ತಂದವು.

ಬ್ರಹ್ಮ ರಥವನ್ನು ತೇರು ಬೀದಿಯಿಂದ ಸಮೀಪದ ಕಣೇಕಲ್ ಬಸ್ ನಿಲ್ದಾಣ ಬಳಿಯ ಗಣೇಶನ ದೇವಸ್ಥಾನದವರೆಗೆ ಭಕ್ತರೆಲ್ಲ ಸೇರಿ ಎಳೆದೊಯ್ದು ಅಲ್ಲಿಂದ ಪುನಃ ಮೂಲ ಸ್ಥಾನಕ್ಕೆ ತಂದರು. ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಇದನ್ನೂ ನೋಡಿ: ಟಿ.ನರಸೀಪುರದಲ್ಲಿ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ವೈಭವದ ದೀಪಾರತಿ- ವಿಡಿಯೋ

ABOUT THE AUTHOR

...view details