ಚಹಾ ತೋಟದಲ್ಲಿ ಗುಂಡಿಗೆ ಬಿದ್ದಿದ್ದ ಮರಿಯಾನೆ ರಕ್ಷಣೆ: ವಿಡಿಯೋ
Published : Nov 12, 2024, 10:50 PM IST
ತೇಜ್‌ಪುರ(ಅಸ್ಸಾಂ ): ಅರುಣಾಚಲ ಪ್ರದೇಶದ ಗಡಿಭಾಗದ ರಂಗಪಾರದಲ್ಲಿರುವ ಧೋಲ್ಕಾವಾ ಟೀ ತೋಟದ ಗುಂಡಿಗೆ ಬಿದ್ದಿದ್ದ ಕಾಡಾನೆ ಮರಿಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ರಾತ್ರಿ ವೇಳೆ ಚಹಾ ತೋಟದ ಮಧ್ಯೆ ಇರುವ ಗುಂಡಿಗೆ ಮರಿಯಾನೆ ಬಿದ್ದಿದೆ. ಮರಿಯನ್ನು ಮೇಲೆತ್ತಲು ಆನೆಗಳು ಶತಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಆನೆ ಮರಿಯನ್ನು ಗುಂಡಿಯಿಂದ ರಕ್ಷಿಸಿದರು. ಸ್ಥಳೀಯರ ಪ್ರಕಾರ, ಸುಮಾರು 50 ಆನೆಗಳ ಹಿಂಡು ಚಹಾ ತೋಟದ ಮೂಲಕ ಹಾದು ಹೋಗುತ್ತಿದ್ದಾಗ 5 ರಿಂದ 6 ತಿಂಗಳ ಮರಿಯಾನೆ ಗುಂಡಿಗೆ ಬಿದ್ದಿದೆ.
ಅರಣ್ಯ ಸುರಕ್ಷಾ ಸಮಿತಿಯ ಸದಸ್ಯ ದಿಲೀಪ್ ನಾಥ್ ಪ್ರತಿಕ್ರಿಯಿಸಿ, ಸೋನಿತ್‌ಪುರ ಜಿಲ್ಲೆಯಲ್ಲಿ ಆನೆಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಹೆಚ್ಚುತ್ತಿದೆ. ಅರಣ್ಯಗಳ ಅತಿಕ್ರಮಣವು ಆನೆಗಳು ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಅಕ್ಟೋಬರ್ 31 ರಂದು ರಂಗಪಾರದ ಧೆಂಡೈ ಟೀ ಎಸ್ಟೇಟ್‌ನ ಒಂದು ಮರಿಯಾನೆ ಚಹಾ ತೋಟದ ಗುಂಡಿಗೆ ಬಿದ್ದು ಅಸುನೀಗಿತ್ತು.
ಇದನ್ನೂ ಓದಿ: ಹಾಸನ: ಒಂಟಿ ಕಾಡಾನೆ ಸಂಚಾರಕ್ಕೆ ಭಯಭೀತರಾದ ಶಾಲಾ ಮಕ್ಕಳು