ಈತ ಹಾಕಿದ್ದು ಬರೋಬ್ಬರಿ 54 ಕಿಸೆಯುಳ್ಳ ಬಟ್ಟೆ: ಯಾತಕ್ಕಾಗಿ ಗೊತ್ತಾ?: ವಿಡಿಯೋ ನೋಡಿ - 54 pocket dress - 54 POCKET DRESS
Published : Apr 5, 2024, 1:00 PM IST
ತೆಲಂಗಾಣ: ಶರ್ಟ್ನ ಮೇಲ್ಭಾಗ ಇಲ್ಲವೇ ಪ್ಯಾಂಟ್ನಲ್ಲಿ ಜೇಬು ಹೊಲಿಸಿಕೊಳ್ಳುವುದು ಕಾಮನ್. ಅತಿಯೆಂದರೆ ನೀವು ಧರಿಸುವ ಬಟ್ಟೆಯಲ್ಲಿ 4 ರಿಂದ 5 ಜೇಬು ಇರಬಹುದು. ಆದರೆ, ಇಲ್ಲೊಬ್ಬ ಬರೋಬ್ಬರಿ 54 ಜೇಬುಳ್ಳ ಬಟ್ಟೆ ಹೊಲಿಸಿ ಇದೀಗ ಪೊಲೀಸರ ವಶದಲ್ಲಿದ್ದಾನೆ.
ರಾಜ್ಯದಲ್ಲಿ ವ್ಯಕ್ತಿಯೊಬ್ಬ 54 ಜೇಬುಗಳುಳ್ಳ ಬಟ್ಟೆಯನ್ನು ಹೊಲಿದು ಅದರಲ್ಲಿ ಅಕ್ರಮ ಮದ್ಯದ ಬಾಟಲಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೌದು ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಭೀಮಸರಿ ಗ್ರಾಮದ ಮುನೀಶ್ವರ ಸತ್ಯ ನಾರಾಯಣ ಎಂಬ ಈ ವ್ಯಕ್ತಿ ಮಾಸ್ಟರ್ ಮೈಂಡ್ ಉಪಯೋಗಿಸಿ ವ್ಯಾಪಾರ ಮಾಡುತ್ತಿದ್ದನು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತ ಮಹಾರಾಷ್ಟ್ರದಿಂದ ಅಕ್ರಮವಾಗಿ 48 ದೇಸಿದಾರು ಮದ್ಯ ಬಾಟಲಿಗಳನ್ನು ಆದಿಲಾಬಾದ್ಗೆ ಕಳ್ಳಸಾಗಣೆ ಮಾಡುತ್ತಿದ್ದ. ಈ ವೇಳೆ, ಆದಿಲ್ಬಾದ್ನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಪೊಲೀಸರು ಈತನನ್ನು ವಿಚಾರಿಸಿ ಪರಿಶೀಲಿಸಿದಾಗ ಸಿಕ್ಕಿ ಬಿದ್ದಿದ್ದಾನೆ. ಮದ್ಯ ಸಾಗಾಣೆ ಮಾಡಲು ಈತ ಕಂಡುಕೊಂಡ ಉಪಾಯ ನೋಡಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಸದ್ಯ ಆತನ ವಿರುದ್ಧ ದೂರು ದಾಖಲಿಸಲಾಗಿದ್ದು, ಸತ್ಯ ನಾರಾಯಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Watch: ಬೈಕ್ ಸವಾರನಿಗೆ ಏಕಾಏಕಿ ಗುಮ್ಮಿದ ಕೋಲೆ ಬಸವ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bull Attack