ಕರ್ನಾಟಕ

karnataka

ETV Bharat / videos

ದೊಡ್ಡಬಳ್ಳಾಪುರ: ಯೂಟರ್ನ್​ನಲ್ಲಿ ಮೊಪೆಡ್​ಗೆ ಕಾರು ಡಿಕ್ಕಿ, ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ - car collided with a moped - CAR COLLIDED WITH A MOPED

By ETV Bharat Karnataka Team

Published : Jul 3, 2024, 2:10 PM IST

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯ ಯೂಟರ್ನ್​ನಲ್ಲಿ ಕ್ರಾಸ್ ಮಾಡುತ್ತಿದ್ದ ಮೊಪೆಡ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ವಯೋವೃದ್ಧ ಸಾವನ್ನಪ್ಪಿದ್ದಾರೆ, ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 648ರ ರಾಮೇಶ್ವರ ಗೇಟ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೊಪೆಡ್ ಸವಾರ ಸಾವನ್ನಪ್ಪಿದ್ದಾರೆ. ಮೃತರನ್ನು ನಾರನಹಳ್ಳಿ ಗ್ರಾಮದ 80 ವರ್ಷದ ಮಾಳಪ್ಪ ಎಂದು ಗುರುತಿಸಲಾಗಿದೆ. ಜುಲೈ 1ರ ಮಧ್ಯಾಹ್ನ ಸಮಯದಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿ ಯೂಟರ್ನ್ ಮೂಲಕ ರಸ್ತೆ ಕ್ರಾಸ್ ಮಾಡುವ ಯತ್ನ ನಡೆಸಿದ್ದಾರೆ. 

ಆದರೆ ಮತ್ತೊಂದು ಬದಿಯಲ್ಲಿ ಕಾರು ಬರುವುದನ್ನ ಗಮನಿಸದ ಅವರು ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮೊಪೆಡ್​ಗೆ ಡಿಕ್ಕಿ ಹೊಡಿದಿದ್ದು ಮೊಪೆಡ್ ನ ಸವಾರ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಕಾಣೆಯಾದ 6 ಜನರಲ್ಲಿ ಮೂವರ ಶವ ಪತ್ತೆ - Vijayapura Raft Tragedy

ABOUT THE AUTHOR

...view details