Zomato New Name :ಪ್ರಮುಖ ಆಹಾರ ವಿತರಣಾ ವೇದಿಕೆಯಾಗಿರುವ ಜೊಮ್ಯಾಟೊಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರ ಬಿದ್ದಿದೆ. ಬೋರ್ಡ್ ಮೀಟಿಂಗ್ನಲ್ಲಿ ಕಂಪನಿ ತನ್ನ ಹೆಸರನ್ನು ಬದಲಾಯಿಸಲು ಅನುಮೋದಿಸಿದೆ. ಈಗ ಜೊಮ್ಯಾಟೊ ಹೆಸರನ್ನು ಎಟರ್ನಲ್ ಎಂದು ಬದಲಾಯಿಸಲಾಗಿದೆ.
ಫೆಬ್ರವರಿ 6 ರಂದು ಕಂಪನಿಯಲ್ಲಿ ನಡೆದ ಬೋರ್ಡ್ ಮೀಟಿಂಗ್ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂಪನಿಯು ಬಿಎಸ್‌ಇಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಈ ಬಗ್ಗೆ ತಿಳಿಸಿದೆ. ಇದರಲ್ಲಿ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಕಂಪನಿಗೆ "ಎಟರ್ನಲ್" ಎಂಬ ಪದವನ್ನು ಬಹಳ ಸಮಯದಿಂದ ಬಳಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾವು ಬ್ಲಿಂಕಿಂಟ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಕಂಪನಿ ಮತ್ತು ಬ್ರ್ಯಾಂಡ್/ಆ್ಯಪ್ ನಡುವೆ ವ್ಯತ್ಯಾಸವನ್ನು ಗುರುತಿಸಲು ಜೊಮ್ಯಾಟೊ ಬದಲಿಗೆ ಎಟರ್ನಲ್ ಎಂದು ಕರೆಯಲು ಪ್ರಾರಂಭಿಸಿದ್ದೇವೆ. ಜೊಮ್ಯಾಟೊ ಹೊರತುಪಡಿಸಿ ನಮ್ಮ ಬೇರೆ ಯಾವುದೇ ಉತ್ಪನ್ನಗಳು ನಮ್ಮ ಭವಿಷ್ಯಕ್ಕೆ ಮುಖ್ಯವಾದರೆ ನಾವು ಕಂಪನಿಯ ಹೆಸರನ್ನು ಸಾರ್ವಜನಿಕವಾಗಿ ಎಟರ್ನಲ್ ಎಂದು ಬದಲಾಯಿಸುತ್ತೇವೆ ಅಂತಾ ನಾವು ಆಗ ಯೋಚಿಸಿದ್ದೆವು. ಇಂದು ಬ್ಲಿಂಕಿಂಟ್‌ನೊಂದಿಗೆ ನಾವು ಈ ಕಾರ್ಯಕ್ಕೆ ತಲುಪಿದ್ದೇವೆ. ನಾವು ಜೊಮ್ಯಾಟೊ ಲಿಮಿಟೆಡ್ ಕಂಪನಿಯ ಹೆಸರನ್ನು (ಬ್ರಾಂಡ್ ಮತ್ತು ಅಪ್ಲಿಕೇಶನ್ ಅಲ್ಲ) ಎಟರ್ನಲ್ ಎಂದು ಬದಲಾಯಿಸುತ್ತಿದ್ದೇವೆ ಅಂತಾ ಗೋಯಲ್ ಸ್ಪಷ್ಟಪಡಿಸಿದರು.
ಎಟರ್ನಲ್ ಅರ್ಥವೇನು?ಎಟರ್ನಲ್ ಲ್ಯಾಟಿನ್ ಮತ್ತು ಇಟಾಲಿಯನ್ ಭಾಷೆಯಿಂದ ಬಂದಿದ್ದು, ಇದರರ್ಥ ಕನ್ನಡದಲ್ಲಿ ಅಮರ ಅಥವಾ ಶಾಶ್ವತ ಎಂದು ಕರೆಯಲಾಗುತ್ತಿದೆ. ಅಮರ ಎಂದ್ರೆ ಎಂದಿಗೂ ಸಾವಿಲ್ಲ ಎಂದರ್ಥ.