YouTube Auto Dub Feature:ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಹೆಸರು ಆಟೋ ಡಬ್ಬಿಂಗ್. ಇದು ಎಐ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಯೂಟ್ಯೂಬ್ನ ಹೊಸ ವೈಶಿಷ್ಟ್ಯದ ಸಹಾಯದಿಂದ ಪ್ರಪಂಚದ ಅನೇಕ ಭಾಷೆಗಳಲ್ಲಿ ವಿಡಿಯೋಗಳನ್ನು ಈಗ ಸುಲಭವಾಗಿ ವೀಕ್ಷಿಸಬಹುದಾಗಿದೆ.
ಆಟೋ-ಡಬ್ಬಿಂಗ್ ವೈಶಿಷ್ಟ್ಯ:ಈ ವೈಶಿಷ್ಟ್ಯದ ಸಹಾಯದಿಂದ ಯೂಟ್ಯೂಬ್ ಆಟೋಮೆಟಿಕ್ ಆಗಿ ವಿಡಿಯೋವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುತ್ತದೆ ಮತ್ತು ಡಬ್ ಮಾಡುತ್ತದೆ. ಇದರರ್ಥ ನೀವು ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ರೆ, ಅದು ಫ್ರೆಂಚ್, ಜರ್ಮನ್, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಜಪಾನೀಸ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಡಬ್ ಆಗುತ್ತದೆ. ನೀವು ಈ ಮೇಲಿನ ಯಾವುದೇ ಭಾಷೆಗಳಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ರೆ, ಅದು ಇಂಗ್ಲಿಷ್‌ಗೆ ಡಬ್ ಮಾಡುತ್ತದೆ. ಈ ವೈಶಿಷ್ಟ್ಯದ ದೊಡ್ಡ ಪ್ರಯೋಜನವೆಂದರೆ ಬಳಕೆದಾರರು ಈಗ ತಮ್ಮ ಆದ್ಯತೆಯ ಭಾಷೆಯಲ್ಲಿ ವಿಷಯವನ್ನು ಪಡೆಯುತ್ತಾರೆ. ಇದು ವಿಡಿಯೋವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.
ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುವುದು ಹೇಗೆ?:ಯೂಟ್ಯೂಬ್ನ ಈ ವೈಶಿಷ್ಟ್ಯವು ಎಐ ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಎಐ ಸಿಸ್ಟಮ್ ಅದರ ಆಡಿಯೋದಿಂದ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಗುರುತಿಸುತ್ತದೆ. ನಂತರ, ಸಿಸ್ಟಮ್ ಅನುವಾದ ಮತ್ತು ಡಬ್ಬಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ವಿಡಿಯೋದಲ್ಲಿ ಬಳಸಲಾದ ಭಾಷೆಯನ್ನು ಬದಲಾಯಿಸಲಾಗುತ್ತದೆ ಮತ್ತು ನೀವು ಆಯ್ಕೆ ಮಾಡಿಕೊಂಡ ಭಾಷೆಗೆ ಪರಿವರ್ತಿಸಲಾಗುತ್ತದೆ. ಈ ವೈಶಿಷ್ಟ್ಯವು ಇನ್ನೂ ಹೊಸ ತಂತ್ರಜ್ಞಾನವನ್ನು ಆಧರಿಸಿದೆ, ಆದ್ದರಿಂದ ಆರಂಭಿಕ ಹಂತದಲ್ಲಿ ಅನುವಾದದಲ್ಲಿ ಕೆಲವು ದೋಷಗಳು ಇರಬಹುದು. ಆದರೆ ಈ ತಂತ್ರಜ್ಞಾನವು ಕಾಲಾನಂತರದಲ್ಲಿ ಗೂಗಲ್ ಸುಧಾರಣೆ ಮಾಡುತ್ತಾ ಮುಂದೆ ಸಾಗುತ್ತದೆ.