ಕರ್ನಾಟಕ

karnataka

ETV Bharat / technology

ಯೂಟ್ಯೂಬ್, ಫೇಸ್​ಬುಕ್ ಅಮೆರಿಕನ್ನರು ಅತ್ಯಧಿಕ ಬಳಸುವ ಸಾಮಾಜಿಕ ಮಾಧ್ಯಮ: ವರದಿ - ಯೂಟ್ಯೂಬ್ ಮತ್ತು ಫೇಸ್ ಬುಕ್

ಅಮೆರಿಕದಲ್ಲಿನ ವಯಸ್ಕರು ಹೆಚ್ಚಾಗಿ ಯೂಟ್ಯೂಬ್ ಮತ್ತು ಫೇಸ್​ಬುಕ್ ಬಳಸುತ್ತಾರೆ ಎಂದು ಪ್ಯೂ ರಿಸರ್ಚ್ ವರದಿ ಹೇಳಿದೆ.

YouTube, Facebook most used social media platform among US adults: Report
YouTube, Facebook most used social media platform among US adults: Report

By ETV Bharat Karnataka Team

Published : Feb 1, 2024, 12:08 PM IST

ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಯೂಟ್ಯೂಬ್ ಮತ್ತು ಫೇಸ್ ಬುಕ್ ಅಮೆರಿಕದಲ್ಲಿನ ವಯಸ್ಕರು ಅತಿ ಹೆಚ್ಚು ಬಳಸುವ ಆನ್ ಲೈನ್ ಪ್ಲಾಟ್ ಫಾರ್ಮ್​ಗಳಾಗಿವೆ ಎಂದು ವರದಿಯೊಂದು ತಿಳಿಸಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಂಶೋಧನೆಯ ಪ್ರಕಾರ, ಅಮೆರಿಕದ ಪ್ರತಿ ಹತ್ತು ವಯಸ್ಕರ ಪೈಕಿ ಎಂಟು ಜನ (ಶೇ 83) ಯೂಟ್ಯೂಬ್ ಬಳಸುತ್ತಾರೆ.

ಶೇಕಡಾ 68 ರಷ್ಟು ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ ಆನ್​ಲೈನ್ ಕ್ಷೇತ್ರದಲ್ಲಿನ ಮುಂಚೂಣಿ ಕಂಪನಿಯಾಗಿದ್ದು, ಶೇಕಡಾ 47 ರಷ್ಟು ಯುಎಸ್ ವಯಸ್ಕರು ಇನ್​ಸ್ಟಾಗ್ರಾಮ್ ಬಳಸುತ್ತಾರೆ. ಪ್ಯೂ ರಿಸರ್ಚ್​ನ ಇತ್ತೀಚಿನ ಸಂಶೋಧನೆಗಳ ಪ್ರಕಾರ ಯುಎಸ್ ಹದಿಹರೆಯದವರಲ್ಲಿ ಯೂಟ್ಯೂಬ್ ಅತ್ಯಧಿಕ ಜನಪ್ರಿಯವಾಗಿದೆ ಎಂದು ತಿಳಿದು ಬಂದಿದೆ.

"ಯೂಟ್ಯೂಬ್ ಮತ್ತು ಫೇಸ್​ಬುಕ್ ಇವೆರಡು ಮಾತ್ರ ಎಲ್ಲಾ ವಯಸ್ಸಿನ ಬಹುತೇಕ ಜನ ಬಳಸುವ ಎರಡು ವೇದಿಕೆಗಳಾಗಿವೆ. ಯೂಟ್ಯೂಬ್ ಬಳಕೆಯನ್ನು ಗಮನಿಸಿದರೆ ಕಿರಿಯರು ಮತ್ತು ಹಿರಿಯ ವಯಸ್ಕರ ನಡುವೆ ಇನ್ನೂ ದೊಡ್ಡ ವಯಸ್ಸಿನ ಅಂತರವಿದೆ. ಆದಾಗ್ಯೂ, ಫೇಸ್​ಬುಕ್​ ವಿಚಾರದಲ್ಲಿ ವಯಸ್ಸಿನ ಅಂತರವು ತುಂಬಾ ಚಿಕ್ಕದಾಗಿದೆ" ಎಂದು ಪ್ಯೂ ರಿಸರ್ಚ್ ಸೆಂಟರ್​ನ ಸಂಶೋಧನಾ ಸಹಾಯಕ ನಿರ್ದೇಶಕ ಜೆಫ್ರಿ ಗಾಟ್​ಫ್ರೆಡ್ ವರದಿಯಲ್ಲಿ ತಿಳಿಸಿದ್ದಾರೆ.

ಟಿಕ್​ಟಾಕ್ ಬಳಕೆದಾರರ ಸಂಖ್ಯೆ 2021 ರಿಂದ ವೃದ್ಧಿಯಾಗಿದೆ ಎಂದು 2023 ರ ಮೇ-ಸೆಪ್ಟೆಂಬರ್​ನಲ್ಲಿ ನಡೆಸಿದ 5,733 ಯುಎಸ್ ವಯಸ್ಕರ ಸಮೀಕ್ಷೆಯನ್ನು ಆಧರಿಸಿದ ಸಂಶೋಧನೆಗಳು ಹೇಳಿವೆ. ಒಂದು ಸಮಯದಲ್ಲಿ ಕೆಲ ಯುಎಸ್​ ಸಂಸದರು ಟಿಕ್ ಟಾಕ್ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದು ಗಮನಾರ್ಹ.

ಯುಎಸ್ ವಯಸ್ಕರಲ್ಲಿ ಮೂರನೇ ಒಂದು ಭಾಗದಷ್ಟು (ಶೇಕಡಾ 33) ಜನ ವೀಡಿಯೊ ಆಧಾರಿತ ಪ್ಲಾಟ್​ ಫಾರ್ಮ್ ಅನ್ನು ಬಳಸುತ್ತಾರೆ. ಇದು 2021 ಕ್ಕೆ ಹೋಲಿಸಿದರೆ (ಶೇಕಡಾ 21) ಶೇಕಡಾ 12 ರಷ್ಟು ಹೆಚ್ಚಾಗಿದೆ. ಯುಎಸ್ ವಯಸ್ಕರಲ್ಲಿ ಸುಮಾರು ಶೇಕಡಾ 27 ರಿಂದ 35 ರಷ್ಟು ಜನ ಪಿಂಟರೆಸ್ಟ್, ಟಿಕ್ ಟಾಕ್, ಲಿಂಕ್ಡ್ಇನ್, ವಾಟ್ಸ್​ಆ್ಯಪ್ ಮತ್ತು ಸ್ನ್ಯಾಪ್ ಚಾಟ್​ ಅನ್ನು ಬಳಸುತ್ತಾರೆ.

ಇದಲ್ಲದೆ, ಐವರಲ್ಲಿ ಒಬ್ಬರು ಎಕ್ಸ್ (ಹಿಂದೆ ಟ್ವಿಟರ್) ಮತ್ತು ರೆಡ್ಡಿಟ್ ಅನ್ನು ಬಳಸುತ್ತಾರೆ ಎಂದು ವರದಿ ಹೇಳಿದೆ. ಪುರುಷರಿಗಿಂತ ಮಹಿಳೆಯರು ಪಿಂಟರೆಸ್ಟ್ (ಶೇಕಡಾ 50 ಮತ್ತು ಶೇಕಡಾ 19), ಟಿಕ್​ ಟಾಕ್ (ಶೇಕಡಾ 40 ಮತ್ತು ಶೇಕಡಾ 25) ಮತ್ತು ಇನ್​ ಸ್ಟಾಗ್ರಾಮ್ (ಶೇಕಡಾ 54 ಮತ್ತು ಶೇಕಡಾ 39) ಬಳಸುವ ಸಾಧ್ಯತೆ ಹೆಚ್ಚು ಎಂದು ವರದಿ ತೋರಿಸಿದೆ.

ಇದನ್ನೂ ಓದಿ :2023ರಲ್ಲಿ $307 ಬಿಲಿಯನ್ ಆದಾಯ ಗಳಿಸಿದ ಗೂಗಲ್

ABOUT THE AUTHOR

...view details