ಭಾರತದಲ್ಲಿ ಕೋವಿಡ್ ನಂತರ ಅನೇಕ ಗ್ರಾಹಕರು ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳ ಮೊರೆ ಹೋಗುತ್ತಿದ್ದಾರೆ. ಈ ಕಾರಗಳನ್ನು ಚಾಲನೆ ಮಾಡುವುದು ಸುಲಭ. ವಿಶೇಷವಾಗಿ ಟ್ರಾಫಿಕ್ ಪ್ರದೇಶಗಳಲ್ಲಿ ಆಗಾಗ್ಗೆ ಗೇರ್ ಬದಲಾವಣೆ ಮಾಡುವುದು ಮತ್ತು ಕ್ಲಚಿಂಗ್ ಮಾಡುವ ಅಗತ್ಯ ಇರಲಿಲ್ಲ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವಾಹನಗಳಿಗೆ ಉತ್ತಮ ಬೇಡಿಕೆ ಹೊರತಾಗಿಯೂ ಕೆಲವು ವರದಿಗಳ ಪ್ರಕಾರ, ದೇಶದ ಬಹುಪಾಲು ಜನರು ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳ ಖರೀದಿಯ ಆಸಕ್ತಿ ಹೊಂದಿದ್ದಾರೆ.
ಕಾರುಗಳ ಬೆಲೆಯಲ್ಲಿ ವ್ಯತ್ಯಾಸ:ದೇಶದಲ್ಲಿ ಹೆಚ್ಚು ಜನರು ಮ್ಯಾನುವಲ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಲು ಬೆಲೆಯೇ ಪ್ರಮುಖ ಕಾರಣ. ಆಟೋಮ್ಯಾಟಿಕ್ ಕಾರುಗಳಿಗೆ ಹೋಲಿಸಿದರೆ, ಮ್ಯಾನುವಲ್ ಕಾರುಗಳ ಬೆಲೆ ಕಡಿಮೆ ಎನ್ನುತ್ತಾರೆ ತಜ್ಞರು. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ 'ಸ್ಪಿನ್ನಿ' ಎಂಬ ಸಂಸ್ಥೆಯ ವರದಿಯ ಪ್ರಕಾರ, ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳಿಗೆ ಹೋಲಿಸಿದರೆ, ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವೇರಿಯಂಟ್ಗೆ ಸುಮಾರು 80,000 ರೂ. ಹೆಚ್ಚಾಗುತ್ತದೆ. ಖರೀದಿದಾರರು ಮ್ಯಾನ್ಯುವಲ್ ವೇರಿಯಂಟ್ಗಿಂತ ಆಟೋಮ್ಯಾಟಿಕ್ ವೆರಿಯಂಟ್ಗೆ ಹಣ ಹೆಚ್ಚು ಪಾವತಿಸಬೇಕಾಗುತ್ತದೆ.
ವಿಮಾ ವೆಚ್ಚಗಳು: ಆಟೋಮ್ಯಾಟಿಕ್ ಗೇರ್‌ಬಾಕ್ಸ್ ತಂತ್ರಜ್ಞಾನದಿಂದಾಗಿ ಕಾರಿನ ಹೆಚ್ಚಿನ ವೆಚ್ಚವು ಖರೀದಿದಾರರಿಗೆ ವಿಮಾ ವೆಚ್ಚವನ್ನೂ ಹೆಚ್ಚಿಸುತ್ತದೆ. ಇದರಿಂದ ವಾಹನ ಖರೀದಿ ಮೊತ್ತ ಹೆಚ್ಚು ದುಬಾರಿಯಾಗಿಸುತ್ತದೆ. ಈ ವ್ಯತ್ಯಾಸವು ಆರಂಭಿಕ ಹಂತದ ವಾಹನಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಇದೇ ಕಾರಣಕ್ಕಾಗಿ ಅನೇಕ ಗ್ರಾಹಕರು ಸ್ಟಿಕ್ಕರ್ ಬೆಲೆ ಮತ್ತು ವಿಮಾ ವೆಚ್ಚಗಳಲ್ಲಿ ಹಣವನ್ನು ಉಳಿಸಲು ಮ್ಯಾನುವಲ್ ವೇರಿಯಂಟ್ ಕಾರಗಳನ್ನೇ ಆಯ್ಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ನಿರ್ವಹಣಾ ವೆಚ್ಚ: ಹೆಚ್ಚಿನ ಜನರು ಮ್ಯಾನ್ಯುವಲ್ ಕಾರುಗಳತ್ತ ಆಸಕ್ತಿ ತೋರಲು ನಿರ್ವಹಣಾ ವೆಚ್ಚವೂ ಒಂದು ಕಾರಣ ಎನ್ನುತ್ತಾರೆ ತಜ್ಞರು. ಏಕೆಂದರೆ, ಮ್ಯಾನುವಲ್ ಗೇರ್ ಬಾಕ್ಸ್ ವಾಹನಗಳಿಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳ ನಿರ್ವಹಣೆ ದುಬಾರಿಯಾಗಿದೆ. ಅಲ್ಲದೇ, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳು, ಮ್ಯಾನುವಲ್ ಟ್ರಾನ್ಸ್ಮಿಷನ್ಗಳಿಗಿಂತ ಹೆಚ್ಚು ಸಂಕೀರ್ಣವಾದ ರಚನೆ ಹೊಂದಿವೆ. ಇದರ ಪರಿಣಾಮವಾಗಿ ಮಾಲೀಕರಿಗೆ ನಿರ್ವಹಣಾ ವೆಚ್ಚವು ಹೆಚ್ಚಾಗುತ್ತದೆ. ಅದೇ ರೀತಿ, ಆಟೋಮ್ಯಾಟಿಕ್ ಕಾರುಗಳಿಗೆ ಹೋಲಿಸಿದರೆ ಮ್ಯಾನುಯಲ್ ಕಾರುಗಳಲ್ಲಿ ಆಯಿಲ್ ಬದಲಾವಣೆಯ ವೆಚ್ಚವೂ ಕಡಿಮೆಯಾಗಿದೆ ಅಂತೆ.