Spyware Attack: ಇಸ್ರೇಲಿ ಸ್ಪೈವೇರ್ ಕಂಪೆನಿ ಪ್ಯಾರಾಗಾನ್ ಹ್ಯಾಕಿಂಗ್ ತನ್ನ ಬಳಕೆದಾರರ ಮೇಲೆ ದಾಳಿ ಮಾಡಿದೆ ಎಂದು ವಾಟ್ಸ್‌ಆ್ಯಪ್ ಆರೋಪಿಸಿದೆ. ಇಸ್ರೇಲಿ ಕಂಪೆನಿಯು ತನ್ನ ಗ್ರಾಫೈಟ್ ಸ್ಪೈವೇರ್ ಮೂಲಕ ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿದೆ.
ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್, ಇಸ್ರೇಲಿ ಸ್ಪೈವೇರ್ ಕಂಪೆನಿ ಪ್ಯಾರಗಾನ್ ಸೊಲ್ಯೂಷನ್ಸ್ ಹ್ಯಾಕಿಂಗ್ ಮಾಡಿದೆ ಎಂದು ದೂರಿದೆ. ಸ್ಪೈವೇರ್ ಗ್ರ್ಯಾಫೈಟ್ ಸಹಾಯದಿಂದ ಸುಮಾರು 24 ದೇಶಗಳ ನೂರಾರು ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಗುರಿಯಾಗಿಸಲಾಗಿದ್ದು, ಪ್ಯಾರಗನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ವಾಟ್ಸ್‌ಆ್ಯಪ್ ಹೇಳಿಕೆ ನೀಡಿದೆ.
ಇದು ಝಿರೋ-ಕ್ಲಿಕ್ ದಾಳಿ:ಪ್ಯಾರಾಗಾನ್ ಸೊಲ್ಯೂಷನ್ಸ್ ಕಚೇರಿ ಅಮೆರಿಕದ ವರ್ಜೀನಿಯಾದಲ್ಲಿದೆ. ಗ್ರ್ಯಾಫೈಟ್ ಸ್ಪೈವೇರ್ ಅತ್ಯಂತ ಅಪಾಯಕಾರಿ. ಇದನ್ನು ಬಲಿಪಶುವಿಗೆ ತಿಳಿಯದಂತೆ ಸಾಧನದಲ್ಲಿ ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲ ಬಳಕೆದಾರರು ಯಾವುದೇ ಲಿಂಕ್ ಸೇರಿದಂತೆ ಇತ್ಯಾದಿಗಳನ್ನು ಕ್ಲಿಕ್ ಮಾಡುವ ಅಗತ್ಯವಿಲ್ಲ. ಈ ರೀತಿಯ ತಂತ್ರವನ್ನು ಝಿರೋ-ಕ್ಲಿಕ್ ದಾಳಿ ಎಂದು ಕರೆಯಲಾಗುತ್ತದೆ. ಒಮ್ಮೆ ನಿಮ್ಮ ಸಾಧನದಲ್ಲಿ ಈ ವೈರಸ್ ಅಳವಡಿಕೆ ನಂತರ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಸುಲಭವಾಗಿಯೇ ಆಪರೇಟ್ ಮಾಡುತ್ತಾರೆ. ನಂತರ ಹ್ಯಾಕರ್‌ಗಳು ತಮ್ಮ ಇಚ್ಛೆಯಂತೆ ಫೋನ್‌ನಿಂದ ಡೇಟಾ ಕದಿಯಬಹುದು. ಇದು ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ NSO ಗ್ರೂಪ್‌ನ ಪೆಗಾಸಸ್ ಸ್ಪೈವೇರ್‌ನಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹ.
ಡಿಸೆಂಬರ್‌ನಲ್ಲಿ ದಾಳಿ:ಪತ್ರಕರ್ತ ಮತ್ತು ಇತರ ಬಲಿಪಶುಗಳನ್ನು ಯಾವಾಗಿನಿಂದಲೋ ಗುರಿಯಾಗಿಸಲಾಯಿತು ಎಂದು ವಾಟ್ಸ್‌ಆ್ಯಪ್ ಹೇಳಿಲ್ಲ. ಆದರೆ ದಾಳಿ ಡಿಸೆಂಬರ್‌ನಲ್ಲಿ ನಡೆದಿದೆ ಎಂದು ದೃಢಪಡಿಸಿದೆ. ಕಂಪೆನಿಯು ಈಗ ಪೀಡಿತ ಬಳಕೆದಾರರಿಗೆ ಸಹಾಯ ಮಾಡುವುದರ ಜೊತೆಗೆ ಭವಿಷ್ಯದಲ್ಲಿ ಇಂತಹ ಸ್ಪೈವೇರ್ ಅನ್ನು ತಪ್ಪಿಸಲು ತನ್ನ ಭದ್ರತೆಯನ್ನು ಬಲಪಡಿಸುತ್ತಿದೆ.