Vodafone Idea 5G Services: ವೊಡಾಫೋನ್-ಐಡಿಯಾದಿಂದ ಜಿಯೋ ಮತ್ತು ಏರ್‌ಟೆಲ್‌ಗೆ ಇದೊಂದು ರೀತಿ ಶಾಕಿಂಗ್ ನ್ಯೂಸ್. ಕೊನೆಗೂ ವೊಡಾಫೋನ್-ಐಡಿಯಾ ಈ ಕಂಪನಿಗಳೊಂದಿಗೆ ಸ್ಪರ್ಧಿಸಲು ತನ್ನ 5G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಹೊಸತರಲು ಸಿದ್ಧವಾಗುತ್ತಿದೆ. ಕಂಪನಿಯ ಪ್ರತಿನಿಧಿಯೊಬ್ಬರು ಈ ವರ್ಷದ ಮಾರ್ಚ್‌ನಲ್ಲಿ ಸುಮಾರು 75ಕ್ಕೂ ಹೆಚ್ಚು ನಗರಗಳಲ್ಲಿ 5G ಸೇವೆ ಪ್ರಾರಂಭಿಸಲಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ. ಉತ್ತಮ ನೆಟ್‌ವರ್ಕ್ ಅನುಭವದ ಜೊತೆಗೆ ಈ ಸೇವೆಗಳು ಕಡಿಮೆ ಬೆಲೆಯಲ್ಲಿ ದೊರೆಯುವ ನಿರೀಕ್ಷೆ ಮೂಡಿದೆ.
ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ದೇಶದ ಮೂರು ದೊಡ್ಡ ಖಾಸಗಿ ಟೆಲಿಕಾಂ ಕಂಪನಿಗಳಾಗಿವೆ. ಮೊದಲಿನಿಂದಲೂ ನಡೆಯುತ್ತಿರುವ ತ್ರಿಕೋನ ಸಮರದಲ್ಲಿ ವೊಡಾಫೋನ್ ಐಡಿಯಾ ಕೊನೆಯ ಸ್ಥಾನದಲ್ಲಿದೆ. ಪ್ರಸ್ತುತ ಅದರ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ Vodafone-Idea ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ Jio ಮತ್ತು Airtel ತಮ್ಮ 5G ಸೇವೆಗಳನ್ನು ವಿಸ್ತರಿಸಿವೆ.
ವೊಡಾಫೋನ್-ಐಡಿಯಾ 5G ರೂಪದಲ್ಲಿ ಕಠಿಣ ಸವಾಲು ಎದುರಿಸಿದೆ ಎಂದು ಹೇಳಬಹುದು. 5G ಸ್ಪೆಕ್ಟ್ರಮ್ ಪಡೆದುಕೊಂಡಿರುವ ಕಂಪನಿಯು ಹಣದ ಕೊರತೆಯಿಂದಾಗಿ ಬಿಡುಗಡೆ ವಿಳಂಬಗೊಳಿಸಿದೆ. ಇನ್ನೂ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಜಿಯೋ ಮತ್ತು ಏರ್‌ಟೆಲ್ ತಮ್ಮ 5G ಸೇವೆಗಳನ್ನು ವೇಗವಾಗಿ ವಿಸ್ತರಿಸಿವೆ. ಹೀಗಾಗಿ ವೊಡಾಫೋನ್-ಐಡಿಯಾ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಕಳೆದುಕೊಂಡಿತು. ಆದರೆ ಈಗ ಸ್ವಲ್ಪ ತಡವಾಗಿ VI (ವೊಡಾಫೋನ್-ಐಡಿಯಾ) 5G ಸೇವೆಗಳನ್ನು ತರುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.