Upcoming Smartphones in December:ಇತ್ತೀಚೆಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ 'ರಿಯಲ್ಮಿ ಜಿಟಿ 7 ಪ್ರೊ' ಮೊಬೈಲ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ವಿಚಾರ ಗೊತ್ತಿರುವುದೇ.. ಈ ಪ್ರೊಸೆಸರ್‌ನೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಈಗ ಅದೇ ಚಿಪ್‌ಸೆಟ್ ಹೊಂದಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈ ತಿಂಗಳು ಪ್ರವೇಶಿಸಲು ಸಿದ್ಧವಾಗಿವೆ. ಈ ಫ್ಲ್ಯಾಗ್‌ಶಿಪ್ ಮೊಬೈಲ್‌ಗಳ ಜೊತೆಗೆ ಟೆಕ್ನೋದಿಂದ ಫೋಲ್ಡಬಲ್ ಫೋನ್‌ಗಳು ಸಹ ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಗಮನಾರ್ಹ..
ಈ ವರ್ಷದ ಕೊನೆಯ ತಿಂಗಳಲ್ಲಿ ಪೊಕೊದಿಂದ ಹೊಸ ಫೋನ್ ಕೂಡ ಬಿಡುಗಡೆಯಾಗಬಹುದು. ಇವುಗಳ ಜೊತೆಗೆ ಅನೇಕ ಇತರ ಸ್ಮಾರ್ಟ್‌ಫೋನ್‌ಗಳು ಡಿಸೆಂಬರ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತವೆ. ಈ ಹಿನ್ನೆಲೆ ಡಿಸೆಂಬರ್ 2024 ರಲ್ಲಿ ಬಿಡುಗಡೆಯಾಗಲಿರುವ ಮೊಬೈಲ್‌ಗಳು ಮತ್ತು ಅವುಗಳ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ..
1. ಐಕ್ಯೂ 13:ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ 'ಐಕ್ಯೂ 13' ಮೊಬೈಲ್ ಡಿಸೆಂಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. AnTuTu ನಲ್ಲಿ ಫೋನ್ 3 ಮಿಲಿಯನ್‌ಗಿಂತಲೂ ಹೆಚ್ಚು ಗಳಿಸಿದೆ. ಫೋನ್ 6,000mAh ಬ್ಯಾಟರಿ ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ವಾಟರ್ ಮತ್ತು ಡಸ್ಟ್ ರೆಸಿಸ್ಟನ್ಸಿಗಾಗಿ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇತರ ವೈಶಿಷ್ಟ್ಯಗಳು:
- ಡಿಸ್ಪ್ಲೇ: 6.82-ಇಂಚಿನ BOE Q10 LTPO AMOLED
- ರೆಸಲ್ಯೂಶನ್: 2K
- ರಿಫ್ರೆಶ್ ರೇಟ್: 144Hz
- ಬ್ರೈಟ್ನೆಸ್: 4,500 ನಿಟ್ಸ್
ಕ್ಯಾಮೆರಾ ಸೆಟಪ್: ಫೋನ್ 50MP ಸೋನಿ IMX921 ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP 3x ಟೆಲಿಫೋಟೋ ಲೆನ್ಸ್ ಜೊತೆಗೆ 50MP ಅಲ್ಟ್ರಾ-ವೈಡ್ - ಆಂಗಲ್ ಕ್ಯಾಮೆರಾ ಹೊಂದಿದೆ. ಇದು ಮುಂಭಾಗದಲ್ಲಿ 32MP ಕ್ಯಾಮೆರಾವನ್ನು ಹೊಂದಿರಬಹುದು.
2. 'ವಿವೋ ಎಕ್ಸ್200' ಸೀರಿಸ್:ಕಂಪನಿಯು 'ವಿವೋ ಎಕ್ಸ್200' ಸೀರಿಸ್ನ ಬಿಡುಗಡೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಇದೇ ಡಿಸೆಂಬರ್‌ನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆಯಂತೆ. 'ವಿವೋ ಎಕ್ಸ್200' MediaTek 9400 ಪ್ರೊಸೆಸರ್‌ನೊಂದಿಗೆ ಬರಲಿದೆಯಂತೆ. ಇದು 16GB ಯ LPDDR5X RAM ಮತ್ತು 512GB ವರೆಗಿನ UFS 4.0 ಸ್ಟೋರೇಜ್ ಹೊಂದಿದೆ ಎಂದು ಹೇಳಲಾಗುತ್ತದೆ.
ಈ ಸೀರಿಸ್ ಬಿಡುಗಡೆಯಾದರೆ, 'ವಿವೋ ಎಕ್ಸ್200' ಮತ್ತು 'ವಿವೋ ಎಕ್ಸ್200 ಪ್ರೊ' ಎಂಬ ಎರಡು ಮಾಡೆಲ್ಗಳು ಹೊಂದಿರಬಹುದು. ಇವುಗಳಲ್ಲಿ, 'ವಿವೋ ಎಕ್ಸ್200' 50MP ಸೋನಿ IMX882 ಟೆಲಿಮ್ಯಾಕ್ರೋ 3x ಸೆನ್ಸಾರ್ನೊಂದಿಗೆ ಬರಬಹುದು. 'ವಿವೋ ಎಕ್ಸ್200 ಪ್ರೊ' ಮಾಡೆಲ್ 3.7x ಆಪ್ಟಿಕಲ್ ಜೂಮ್‌ನೊಂದಿಗೆ 200MP ಸ್ಯಾಮ್‌ಸಂಗ್ HP9 ಟೆಲಿಮ್ಯಾಕ್ರೋ ಸೆನ್ಸಾರ್ ಹೊಂದಿರಬಹುದು. ಆದರೂ, ಎರಡೂ ಫೋನ್‌ಗಳು ಒಂದೇ 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 32MP ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತವೆ ಎಂದು ತೋರುತ್ತದೆ.