ಕರ್ನಾಟಕ

karnataka

ETV Bharat / technology

ಒಂದಲ್ಲ, ಎರಡಲ್ಲ ಭಾರತದಲ್ಲಿ 14 ಹೊಚ್ಚ ಹೊಸ ಬೈಕ್​ಗಳ ಬಿಡುಗಡೆಗೆ ಡುಕಾಟಿ ರೆಡಿ - UPCOMING DUCATI BIKES

Upcoming Ducati Bikes: ಈ ವರ್ಷ ಭಾರತದಲ್ಲಿ ಡುಕಾಟಿ ಸುಮಾರು 14 ಬೈಕ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

UPCOMING DUCATI BIKE LAUNCH  DUCATI BIKE DETAILS  DUCATI BIKE TIMELINE  DUCATI BIKES
ಭರ್ಜರಿ ಸಿದ್ಧತೆ ನಡೆಸಿರುವ ಡುಕಾಟಿ, (Photo Credit : Ducati)

By ETV Bharat Tech Team

Published : Jan 8, 2025, 1:17 PM IST

Upcoming Ducati Bikes:ಡುಕಾಟಿ ಈ ವರ್ಷ ಭಾರತೀಯ ಮಾರುಕಟ್ಟೆಗೆ ಸರಿಸುಮಾರು 14 ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕಾಗಿ ಹೊಸ ಹೊಸ ಮಾಡೆಲ್‌ಗಳನ್ನು ಬಹಿರಂಗಪಡಿಸಿದೆ. ಈ ಬೈಕ್‌ಗಳ ಬಿಡುಗಡೆಯ ಟೈಮ್‌ಲೈನ್ ಬಿಡುಗಡೆ ಮಾಡಿದೆ. ಇವು ರೆಟ್ರೋ ಲುಕ್‌ಗಳಿಂದ ಸೂಪರ್ ಬೈಕ್‌ಗಳವರೆಗೂ ನೋಡಲು ಆಕರ್ಷಕವಾಗಿವೆ.

ಪಾನಿಗೇಲ್ V4 7 ಜನರೇಷನ್, ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ, ಪ್ಯಾನಿಗೇಲ್, ಸ್ಟ್ರೀಟ್‌ಫೈಟರ್ ಮತ್ತು ಮಲ್ಟಿಸ್ಟ್ರಾಡಾ V2 ಒಳಗೊಂಡಿರುವ ಅಪ್​ಡೇಟ್ಡ್​ V2 ರೇಂಜ್​ ಈ ಪಟ್ಟಿಯಲ್ಲಿವೆ. ಇದರೊಂದಿಗೆ ಮೂರನೇ ತಲೆಮಾರಿನ ಸ್ಟ್ರೀಟ್‌ಫೈಟರ್ V4 ಮತ್ತು ಸ್ಕ್ರ್ಯಾಂಬ್ಲರ್ ಡಾರ್ಕ್ 2 ಜನರೇಷನ್ ಅನ್ನು ಸಹ 2025ರಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಇದಲ್ಲದೇ, ಡುಕಾಟಿಯ ಡುಕಾಟಿ ಡಯಾವೆಲ್, ಪಾನಿಗೇಲ್ ವಿ2 ಫೈನಲ್ ಎಡಿಷನ್, ಪ್ಯಾನಿಗೇಲ್ ವಿ4 ಟ್ರೈಕಲರ್ ಇಟಾಲಿಯಾ, ಪ್ಯಾನಿಗೇಲ್ ವಿ4 ಟ್ರೈಕಲರ್ ಮತ್ತು ಸ್ಕ್ರ್ಯಾಂಬ್ಲರ್ ರಿಜೋಮಾ ಕೂಡಾ ಬಿಡುಗಡೆಯಾಗಲಿದೆ.

2025ರಲ್ಲಿ ಬಿಡುಗಡೆಯಾಗಲಿರುವ ಡುಕಾಟಿ ಬೈಕ್‌ಗಳ ಟೈಮ್‌ಲೈನ್:

  • Panigale V4 7th Generation- ಜನವರಿ ಮತ್ತು ಮಾರ್ಚ್ 2025ರ ನಡುವೆ ಬಿಡುಗಡೆ
  • Ducati DesertX Discovery- ಜನವರಿ ಮತ್ತು ಮಾರ್ಚ್ 2025 ರ ನಡುವೆ ಬಿಡುಗಡೆ
  • Panigale V2 Final Edition- ಏಪ್ರಿಲ್ ಮತ್ತು ಜೂನ್ 2025 ರ ನಡುವೆ ಬಿಡುಗಡೆ
  • Scrambler 2G Dark-ಏಪ್ರಿಲ್ ಮತ್ತು ಜೂನ್ 2025 ರ ನಡುವೆ ಬಿಡುಗಡೆ
  • Multistrada V2 - ಜುಲೈ ಮತ್ತು ಸೆಪ್ಟೆಂಬರ್ 2025 ರ ನಡುವೆ ಬಿಡುಗಡೆ
  • Scrambler Rizoma -ಜುಲೈ ಮತ್ತು ಸೆಪ್ಟೆಂಬರ್ 2025 ರ ನಡುವೆ ಬಿಡುಗಡೆ
  • Streetfighter V4 3rd Generation - ಜುಲೈ ಮತ್ತು ಸೆಪ್ಟೆಂಬರ್ 2025ರ ನಡುವೆ ಬಿಡುಗಡೆ
  • Streetfighter V2 - ಜುಲೈ ಮತ್ತು ಸೆಪ್ಟೆಂಬರ್ 2025 ರ ನಡುವೆ ಬಿಡುಗಡೆ
  • Panigale V2 - ಜುಲೈ ಮತ್ತು ಸೆಪ್ಟೆಂಬರ್ 2025 ರ ನಡುವೆ ಬಿಡುಗಡೆ

ಡುಕಾಟಿ ಬೈಕ್ ಬುಕ್ಕಿಂಗ್​:ಡುಕಾಟಿ ಬೈಕ್‌ನಲ್ಲಿ ಆಸಕ್ತಿ ಹೊಂದಿರುವವರು ಕೊಚ್ಚಿ, ಹೈದರಾಬಾದ್, ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಚಂಡೀಗಢ ಮತ್ತು ಅಹಮದಾಬಾದ್‌ ನಗರಗಳಲ್ಲಿನ ಡೀಲರ್‌ಶಿಪ್‌ಗಳ ಮೂಲಕ ಮೋಟಾರ್‌ಸೈಕಲ್ ಬುಕ್ ಮಾಡಬಹುದು.

ಕಂಪನಿ ಹೇಳಿದ್ದೇನು?: ಈ ವರ್ಷ ಭಾರತದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಆದರೆ ಯಾವ ಮಾದರಿ ಎಂದು ಇನ್ನೂ ಬಹಿರಂಗಪಡಿಸಿಲ್ಲ. ಮಾನ್‌ಸ್ಟರ್‌ನ 30 ವಾರ್ಷಿಕೋತ್ಸವ ಆವೃತ್ತಿಗಳಲ್ಲಿ ಒಂದನ್ನು ಡುಕಾಟಿ ಪ್ರಾರಂಭಿಸಬಹುದು ಎಂದು ಊಹಿಸಲಾಗಿದೆ. 2025ರಲ್ಲಿ 14 ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡುವುದರ ಜೊತೆಗೆ, ಡುಕಾಟಿ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ವಿಸ್ತರಿಸಲು ಯೋಜಿಸುತ್ತಿದೆ. ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಮೋಟಾರ್‌ಸೈಕಲ್‌ಗಳು EICMA 2024ರಲ್ಲಿ ಅನಾವರಣಗೊಂಡ ಅಪ್​ಡೇಟ್ಡ್​ ಸ್ಟ್ರೀಟ್‌ಫೈಟರ್ V2 ಮತ್ತು ಬಹುನಿರೀಕ್ಷಿತ Panigale V2 ಅನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ:ಸತೀಶ್ ಧವನ್ ಕೇಂದ್ರದಿಂದ 100ನೇ ರಾಕೆಟ್‌ ಉಡಾವಣೆಗೆ ಇಸ್ರೋ ಸನ್ನದ್ಧ: ಇಲ್ಲಿಗೆ ಈ ಹೆಸರೇಕೆ ಬಂತು? ಸ್ಥಳದ ಆಯ್ಕೆ ಹೇಗಾಯಿತು?

ABOUT THE AUTHOR

...view details