BSNL Best Recharge Plan: ಜುಲೈ ತಿಂಗಳಿನಿಂದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ರೀಚಾರ್ಜ್ ಯೋಜನೆಗಳ ಬೆಲೆಗಳು ಸುಮಾರು ಶೇ 25ರಷ್ಟು ಏರಿಕೆಯಾದ ನಂತರ, ಜನರು ಈಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNLನ ಯೋಜನೆಗಳಿಗೆ ಎಡತಾಕುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು 1 GB ದೈನಂದಿನ ಡೇಟಾದೊಂದಿಗೆ BSNL ಅಗ್ಗದ ಯೋಜನೆಯೊಂದನ್ನು ಇದೀಗ ಹೊರತಂದಿದೆ.
ಜಿಯೋಗೆ ಹೋಲಿಸಿದರೆ ಈ ಯೋಜನೆಗಳು ಅರ್ಧದಷ್ಟು ಬೆಲೆಗೆ ಸಿಗುತ್ತವೆ. ಜಿಯೋಗೆ ಸಮಾನ ಮಾನ್ಯತೆ ಮತ್ತು ಕರೆಗಳನ್ನೂ ಒದಗಿಸುತ್ತವೆ. ಅಂದಹಾಗೆ ಇದು 298 ರೂ ರೀಚಾರ್ಜ್ ಯೋಜನೆ. ಇದರ ಸಿಂಧುತ್ವವು ಪೂರ್ಣ 2 ತಿಂಗಳವರೆಗೆ ಲಭ್ಯವಿಲ್ಲ. ಆದರೆ 2 ತಿಂಗಳ ರೀಚಾರ್ಜ್ ಯೋಜನೆಗೆ ಅಗ್ಗದ ಆಯ್ಕೆ ಎನ್ನಬಹುದು.
ವ್ಯಾಲಿಡಿಟಿ 56 ದಿನ: ಅನಿಯಮಿತ ಕರೆ ಮತ್ತು ಅನಿಯಮಿತ ಡೇಟಾ ಇರುವ ಪ್ರಿಪೇಯ್ಡ್ ಯೋಜನೆ 56 ದಿನಗಳ ಮಾನ್ಯತೆಯೊಂದಿಗೆ ಬರುತ್ತಿದೆ. ಪ್ಯಾಕ್ ಸ್ಥಳೀಯ ಮತ್ತು STDಯಲ್ಲಿ ಅನಿಯಮಿತ ಧ್ವನಿ ಕರೆಗಳನ್ನು ಒದಗಿಸುತ್ತದೆ. ದಿನಕ್ಕೆ 1GB ಡೇಟಾ ಮತ್ತು ದಿನಕ್ಕೆ 100 SMS ಸೌಲಭ್ಯ ಹೊಂದಿದೆ. ಈ ಯೋಜನೆಯು Eros Now ಮನರಂಜನಾ ಸೇವೆಗಳಿಗೆ ಉಚಿತ ಚಂದಾದಾರಿಕೆ ಒಳಗೊಂಡಿದೆ. ಅನಿಯಮಿತ ಡೇಟಾ ಮತ್ತು ದೀರ್ಘಕಾಲ ಕರೆ ಮಾಡುವವರಿಗೆ ಈ ಯೋಜನೆ ಸೂಕ್ತ.
ಜನವರಿ 2025ರಲ್ಲಿ 5G ಸೇವೆ ಪ್ರಾರಂಭ:ಬಿಎಸ್ಎನ್ಎಲ್ನ ಆಂಧ್ರ ಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಬಿಎಸ್‌ಎನ್‌ಎಲ್ ತನ್ನ 5ಜಿ ಸೇವೆಯನ್ನು ಜನವರಿ 2025ರಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಘೋಷಿಸಿದ್ದಾರೆ. ಸಾಧ್ಯವಾದಷ್ಟು ಬೇಗ 5G ರೋಲ್‌ಔಟ್‌ಗೆ ಅನುಕೂಲವಾಗುವಂತೆ ತನ್ನ ಮೂಲಸೌಕರ್ಯವನ್ನು ಅಪ್‌ಡೇಟ್ ಮಾಡಲು ಕಂಪನಿ ಒತ್ತು ನೀಡುತ್ತಿದೆ. ಇದು ಟವರ್ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ವೊಡಾಫೋನ್, ಜಿಯೋ, ಏರ್‌ಟೆಲ್: ಉತ್ತಮ ಡೇಟಾ ಪ್ಲಾನ್ಗಳ ವಿವರ ಇಲ್ಲಿದೆ - Daily Data Prepaid Plans