Two Wheelers Sales Report in November: ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಲು ಜನರಲ್ಲಿ ವಿಭಿನ್ನವಾದ ಕ್ರೇಜ್ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದಿಂದ ಹಿಡಿದು ದುಬಾರಿವರೆಗೆ ಎಲ್ಲ ರೀತಿಯ ಮೋಟಾರ್ ಸೈಕಲ್‌ಗಳು ಲಭ್ಯವಿವೆ. ಕಳೆದ ತಿಂಗಳು ಅಂದರೆ ನವೆಂಬರ್ನ ದ್ವಿಚಕ್ರ ವಾಹನ ಮಾರಾಟ ವರದಿ ಬಿಡುಗಡೆಯಾಗಿದೆ. ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಯಾವ ಕಂಪನಿಯು ಯಾವ ಸ್ಥಾನವನ್ನು ಕಬಳಿಸಿಕೊಂಡಿದೆ ಎಂಬ ಮಾಹಿತಿ ಇಲ್ಲಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಹೀರೋ ಮೋಟೊಕಾರ್ಪ್ ಮಾರುಕಟ್ಟೆಯಲ್ಲಿ ಲೀಡರ್ ಆಗಿ ಹೊರಹೊಮ್ಮಿದೆ. FADA ವರದಿಯ ಪ್ರಕಾರ, ಕಳೆದ ತಿಂಗಳು ನವೆಂಬರ್ 2024 ರಲ್ಲಿ ಒಟ್ಟು 9,15,468 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮಾರಾಟ 8,04,498 ಯುನಿಟ್ ಆಗಿತ್ತು. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನವೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾಗಿರುವುದು ಕಂಡು ಬಂದಿದೆ.
ಹೀರೋ ಬೈಕ್ ನಂತರ ಹೋಂಡಾ ಮೋಟಾರ್ ಸೈಕಲ್ ಎರಡನೇ ಸ್ಥಾನದಲ್ಲಿದೆ. ಜಪಾನಿನ ಆಟೋಮೊಬೈಲ್ ತಯಾರಕರು ನವೆಂಬರ್ 2024 ರಲ್ಲಿ ಒಟ್ಟು 6,54,564 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದು ಕಳೆದ ವರ್ಷ 5,15,128 ಯುನಿಟ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾರಾಟವಾಗಿದೆ. ಮೂರನೇ ಸ್ಥಾನವನ್ನು ಟಿವಿಎಸ್ ದ್ವಿಚಕ್ರ ವಾಹನದ ಪಾಲಾಗಿದೆ. ಕಂಪನಿಯು ಒಟ್ಟು 4,20,990 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ 2023 ರಲ್ಲಿ ಮಾರಾಟವಾದ 3,66,896 ಯುನಿಟ್‌ಗಳಿಗಿಂತ ಹೆಚ್ಚು.