Triumph Speed Twin 900 Price:ಟ್ರಯಂಫ್ ಸ್ಪೀಡ್ ಟ್ವಿನ್ 900 ನ ಅಪ್ಡೇಟ್ ಮಾದರಿಯನ್ನು ಅಕ್ಟೋಬರ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಆಗ ಜನರು ಈ ಬೈಕ್‌ನ ಹೊಸ ಲುಕ್ಗೆ ಆಕರ್ಷಿತರಾದರು. ಈಗ ಹೊಸ ವಿನ್ಯಾಸ ಮತ್ತು ಹೊಸ ಬೆಲೆಯೊಂದಿಗೆ ಈ ಟ್ರಯಂಫ್ ಬೈಕ್ ಮತ್ತೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಮಾದರಿಗೆ ಹೋಲಿಸಿದರೆ ದ್ವಿಚಕ್ರವಾಹನದ ಬೆಲೆಯನ್ನು 40 ಸಾವಿರ ರೂ.ಗಳಷ್ಟು ಹೆಚ್ಚಿಸಲಾಗಿದೆ.
ಟ್ರಯಂಫ್ ಈ ಬೈಕ್‌ನ ವಿಜುವಲ್ಸ್ ಮತ್ತು ಹಾರ್ಡ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಿದೆ. ಆದರೆ, ವಾಹನ ತಯಾರಕರು ಬೈಕ್‌ನ ಎಂಜಿನ್ ಅನ್ನು ಸಂಪೂರ್ಣವಾಗಿ ಮೊದಲಿನಂತೆಯೇ ಇರಿಸಿದ್ದಾರೆ. ಅದರಲ್ಲಿ ಏನನ್ನೂ ಬದಲಾಯಿಸಲಾಗಿಲ್ಲ.
ಮತ್ತಷ್ಟು ದುಬಾರಿಯಾಯ್ತು ಟ್ರಯಂಫ್ ಸ್ಪೀಡ್ ಟ್ವಿನ್ 900 (Photo Credit- Triumph Motorcycle India) Marzocchi USD ಫ್ರಂಟ್ ಫೋರ್ಕ್ ಬಳಕೆ:ಬೈಕ್‌ನ ಹೊಸ ರೂಪದ ಬಗ್ಗೆ ಮಾತನಾಡುವುದಾದರೆ, ಇದು ಹೆಚ್ಚು ಬ್ಲ್ಯಾಕ್-ಔಟ್ ಅಂಶಗಳನ್ನು ಹೊಂದಿದೆ ಮತ್ತು ಇದು ಸ್ಪೀಡ್ ಟ್ವಿನ್ 1200 ನಂತೆ ಕಾಣುತ್ತದೆ. ಈ ಹೊಸ ಬೈಕ್‌ನಲ್ಲಿ ಹೊಂದಾಣಿಕೆ ಮಾಡಲಾಗದ Marzocchi USD ಫ್ರಂಟ್ ಫೋರ್ಕ್ ಬಳಸಲಾಗಿದೆ. ಇದರೊಂದಿಗೆ ಬ್ರಾಂಡೆಡ್ ರೇಡಿಯನ್ ಕ್ಯಾಲಿಪರ್‌ಗಳನ್ನು ಸಹ ಈ ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದೆ.
ಸ್ಪೀಡ್ ಟ್ವಿನ್ 900 ರ ಹಿಂದಿನ ಮಾದರಿಯ ಸೀಟ್ ಎತ್ತರವು 765 ಎಂಎಂ ಆಗಿತ್ತು, ಇದನ್ನು 780 ಎಂಎಂಗೆ ಹೆಚ್ಚಿಸಲಾಗಿದೆ. ಈ ಬೈಕ್ ಸಿಂಗಲ್-ಅನಾಲಾಗ್ ಡಿಸ್ಪ್ಲೇ ಹೊಂದಿದೆ. ಇದನ್ನು ಹಿಂದಿನ ಮಾದರಿಯ TFT ಯುನಿಟ್ನಿಂದ ಬದಲಾಯಿಸಲಾಗಿದೆ. ಇದು ಕಂಪನಿಯ ದೊಡ್ಡ 1200 ಮಾದರಿಗಳಲ್ಲಿ ಇನ್ನೂ ಕಂಡು ಬರುತ್ತದೆ.
ಮತ್ತಷ್ಟು ದುಬಾರಿಯಾಯ್ತು ಟ್ರಯಂಫ್ ಸ್ಪೀಡ್ ಟ್ವಿನ್ 900 (Photo Credit- Triumph Motorcycle India) ರೈನ್ ರೈಡಿಂಗ್ ಮೋಡ್:ಈ ಬೈಕ್‌ನಲ್ಲಿ ರೋಡ್ ಮತ್ತು ರೈನ್ ರೈಡಿಂಗ್ ಮೋಡ್ ಸೇರಿಸಲಾಗಿದೆ. ಈ ಹೊಸ ಮೋಡ್‌ಗಳನ್ನು ಒದಗಿಸುವುದರ ಜೊತೆಗೆ, ಇದು ABS ಮತ್ತು ರೈಡರ್ ಸುರಕ್ಷತೆಗಾಗಿ ಟ್ರಾಕ್ಷನ್ ಕಂಟ್ರೋಲ್ ವೈಶಿಷ್ಟ್ಯಗಳನ್ನೂ ಸಹ ಒಳಗೊಂಡಿದೆ.
ಈ ಟ್ರಯಂಫ್ ಬೈಕ್ 900 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದ್ದು, ಇದು 65 ಎಚ್‌ಪಿ ಪವರ್ ಮತ್ತು 80 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‌ನ ಎಂಜಿನ್‌ಗೆ 5 - ಸ್ಪೀಡ್ ಗೇರ್ ಬಾಕ್ಸ್ ಸಹ ಜೋಡಿಸಲಾಗಿದೆ. ಟ್ರಯಂಫ್ ಸ್ಪೀಡ್ ಟ್ವಿನ್ 900 ನ ಅಪ್ಡೇಟ್ಡ್ ಮಾಡೆಲ್ನ ಎಕ್ಸ್ ಶೋರೂಂ ಬೆಲೆ 8.89 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಕಂಪನಿಯು ಈ ಬೈಕ್ ಅನ್ನು ಜನವರಿ 2025 ರಿಂದ ವಿತರಿಸಲು ಪ್ರಾರಂಭಿಸಬಹುದು.
ಓದಿ:ರಿಲಯನ್ಸ್, ಏರ್ಟೆಲ್, ವೊಡಾಫೋನ್ ಅಲ್ಲ ಬಿಎಸ್ಎನ್ಎಲ್ಗೂ ಬಿಡಲಿಲ್ಲ ಟ್ರಾಯ್, ಭಾರೀ ದಂಡ!