Yearender 2024:ಪ್ರಸ್ತುತ, ಸ್ಮಾರ್ಟ್‌ಫೋನ್‌ಗಳ ಹಾವಳಿ ಫುಲ್ ಜೋರಾಗಿದೆ. ಕಿರಿಯರು, ಹಿರಿಯರು ಎಂಬ ಭೇದವಿಲ್ಲದೇ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಅದರಲ್ಲಿಯೂ ಯುವಜನತೆ ಬೆಲೆ ಲೆಕ್ಕಿಸದೇ ಪ್ರೀಮಿಯಂ ಫೋನ್ಗಳತ್ತ ವಾಲುತ್ತಿದ್ದಾರೆ. ಇದರೊಂದಿಗೆ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಕಾಲಕಾಲಕ್ಕೆ ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಬಹುತೇಕ ಎಲ್ಲಾ ಬ್ರಾಂಡ್‌ಗಳ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ.
ನೀವು ಕೂಡ ಹೊಸ ವರ್ಷದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ವಿಭಾಗದಲ್ಲಿ ನೀವು ಹತ್ತಾರು ಆಯ್ಕೆಗಳನ್ನು ಕಾಣಬಹುದು. 2024 ರಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿದ ಕೆಲವು ಅತ್ಯುತ್ತಮ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕುರಿತು ಒಂದು ನೋಟ ಇಲ್ಲಿದೆ.
Samsung Galaxy S24 Ultra:
- ಬಿಡುಗಡೆ ದಿನಾಂಕ: 17 ಜನವರಿ 2024
- ಬೆಲೆ: 121,999 ರೂ.
- ಪ್ರೊಸೆಸರ್: 4nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, ಇತರ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ತಮ ದಕ್ಷತೆ ಹೊಂದಿದೆ.
ವೈಶಿಷ್ಟ್ಯಗಳು:
- Galaxy S24 ಅಲ್ಟ್ರಾ Galaxy S23 ಅಲ್ಟ್ರಾದ 6.8-ಇಂಚಿನ ಡಿಸ್ಪ್ಲೇ ಹೊಂದಿದೆ. ಆದರೆ, ಸ್ಕ್ರೀನ್ ಈಗ ಫ್ಲಾಟ್ ಆಗಿದೆ. ಸ್ವಲ್ಪ ಕರ್ವ್ಡ್ ಎಡ್ಜ್ಗಳನ್ನು ಹೊಂದಿದೆ.
- ಹೊಸ ಟೈಟಾನಿಯಂ ವಿನ್ಯಾಸ, Galaxy S24 ಅಲ್ಟ್ರಾಗೆ ಪ್ರತ್ಯೇಕವಾಗಿದೆ.
- ಫ್ರಂಟ್ನಲ್ಲಿ ಹೊಸ ಗೊರಿಲ್ಲಾ ಗ್ಲಾಸ್ ಆರ್ಮರ್ ಹೊಂದಿದೆ. ಇದು ಅತ್ಯಂತ ಕಠಿಣವಾದ ಗೊರಿಲ್ಲಾ ಗ್ಲಾಸ್ ಆಗಿದೆ.
- Qualcomm Snapdragon 8 Gen 3 ಚಿಪ್‌ಸೆಟ್ ಹೊಂದಿದೆ.
- 10X ಪೆರಿಸ್ಕೋಪ್ ಬದಲಿಗೆ ಹೊಸ 5X ಟೆಲಿಫೋಟೋ, 100X ಸ್ಪೇಸ್ ಜೂಮ್ ಒಳಗೊಂಡಿದೆ.
- 4K@120fps ವಿಡಿಯೋ ರೆಕಾರ್ಡಿಂಗ್.
- 2,600 ನಿಟ್ಸ್ ಬ್ರೈಟ್ನೆಸ್ ಡಿಸ್ಪ್ಲೇ
- ಎಐ ವೈಶಿಷ್ಟ್ಯಗಳು ಮತ್ತು ಕಾರ್ಯಚಟುವಟಿಕೆಗಳು Galaxy S24 Ultra ನಲ್ಲಿ ಲೈವ್ ಟ್ರಾನ್ಸ್‌ಲೇಟ್, ಸರ್ಕಲ್ ಟು ಸರ್ಚ್ ಸೇರಿದಂತೆ ಅನೇಕ ಹೊಸ ವಿಷಯಗಳನ್ನು ಕಾಣಬಹುದಾಗಿದೆ.
- ಏಳು ವರ್ಷಗಳ ಪ್ರಮುಖ OS ಅಪ್ಡೇಟ್ ಮತ್ತು ಭದ್ರತಾ ಸೌಲಭ್ಯಗಳು ಹೊಂದಿವೆ.
Samsung Galaxy Z Fold 6:
- ಬಿಡುಗಡೆ ದಿನಾಂಕ: ಜುಲೈ 24, 2024
- ಬೆಲೆ: ರೂ. 1,44,999
- ಪ್ರೊಸೆಸರ್: 4nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, ಇತರ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ತಮ ದಕ್ಷತೆ ಹೊಂದಿದೆ.
ವೈಶಿಷ್ಟ್ಯಗಳು:
- ಸೀರಿಸ್ ಸಿಗ್ನೇಚರ್ ವೈಶಿಷ್ಟ್ಯ, ಓಪನ್ ಮಾಡಿದಾಗ ದೊಡ್ಡ ಟ್ಯಾಬ್ಲೆಟ್ ತರಹದ ಅನುಭವ ಮತ್ತು ಕ್ಲೋಸ್ ಮಾಡಿದಾಗ ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ಫಾರ್ಮ್ ಫ್ಯಾಕ್ಟರ್ ಅನುಭವ ನೀಡುತ್ತದೆ.
- Galaxy Z Fold 6 IP48 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಹೊಂದಿರುವ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದೆ.
- ಈ ಫೋನ್ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ.
- ಫೋನ್ 7.6 ಫ್ಲೆಕ್ಸಿಬಲ್ AMOLED ಸ್ಕ್ರೀನ್ ಹೊಂದಿದೆ.
- ದೊಡ್ಡ ಡಿಸ್ಪ್ಲೇಯನ್ನು ಸೆಕೆಂಡರಿ ಡಿಸ್ಪ್ಲೇ ಆಗಿ ಬಳಸಬಹುದು. ಕೆಲವರು ಚಿತ್ರೀಕರಣ ಮಾಡುವಾಗ ಇದು ಸಹಾಯಕವಾಗಿದೆ ಎಂದು ಹೇಳುತ್ತಾರೆ.
- ಫೋನ್ ತೆಳುವಾಗಿ ಮತ್ತು ಹಗುರವಾಗಿದ್ದು, 239 ಗ್ರಾಂ ತೂಕ ಮತ್ತು 5.6 ಮಿಮೀ ದಪ್ಪ ಹೊಂದಿದೆ.
Xiaomi 14 Ultra :
- ಬಿಡುಗಡೆ ದಿನಾಂಕ: 22ನೇ ಫೆಬ್ರವರಿ 2024
- ಬೆಲೆ: ರೂ. 99,998.
- ಪ್ರೊಸೆಸರ್: 4nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, ಇತರ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ತಮ ದಕ್ಷತೆಯನ್ನು ಪ್ರದರ್ಶಿಸುತ್ತದೆ.
ವೈಶಿಷ್ಟ್ಯಗಳು:
- ಫೋನ್ 120 Hz ರಿಫ್ರೆಶ್ ರೇಟ್ 6.73-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 3200x1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
- ಇದು 16GB RAM ಹೊಂದಿದೆ. Xiaomi 14 ಅಲ್ಟ್ರಾ ಆಂಡ್ರಾಯ್ಡ್ 14 ಪ್ರೊಸೆಸರ್ ಹೊಂದಿದೆ. 5300mAh ಬ್ಯಾಟರಿಯಿಂದ ಚಾಲಿತವಾಗಿದೆ.
- Xiaomi 14 ಅಲ್ಟ್ರಾ ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
- Xiaomi 14 ಅಲ್ಟ್ರಾ ಸ್ಮಾರ್ಟ್‌ಫೋನ್ ದೊಡ್ಡ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್‌ನಲ್ಲಿ ಶಕ್ತಿಯುತ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಫೋನ್‌ನಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್, 50MP ಪೆರಿಸ್ಕೋಪ್ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಸಹ ಹೊಂದಿದೆ.
- Xiaomi 14 Ultra HyperOS ಅನ್ನು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಫೋನ್ AI ಫೇಸ್ ಅನ್‌ಲಾಕ್‌ನೊಂದಿಗೆ ಬರುತ್ತದೆ.
Realme GT 7 Pro:
- ಬಿಡುಗಡೆ ದಿನಾಂಕ: ನವೆಂಬರ್ 04, 2024
- ಬೆಲೆ: ₹ 59,998.
- ಪ್ರೊಸೆಸರ್: 3nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಪ್ರೊಸೆಸರ್‌ನಿಂದ ರನ್ ಆಗುತ್ತದೆ.
ವೈಶಿಷ್ಟ್ಯಗಳು:
- ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಒಳಗೊಂಡಿರುವ ಸಾಧನವು ದೇಶದಲ್ಲಿ ಮೊದಲನೆಯದು, ಕ್ವಾಲ್‌ಕಾಮ್‌ನ ಸುಧಾರಿತ 3nm TSMC ಪ್ರಕ್ರಿಯೆಯನ್ನು ಬಳಸಿದ ಮೊದಲನೆಯದು, ಪ್ರಭಾವಶಾಲಿ 2+6 ಓರಿಯನ್ ಆರ್ಕಿಟೆಕ್ಚರ್ ಒಳಗೊಂಡಿದೆ.
- Realme GT 7 Pro ಪವರ್ಫುಲ್ ಪ್ರೊಸೆಸರ್ ಅನ್ನು ಹೊಂದಿದೆ. 5,800 mAh ಬ್ಯಾಟರಿ ಪವರ್ ಮತ್ತು ಮೆಟಲ್ ಮತ್ತು ಗ್ಲಾಸ್ನಿಂದ ಮಾಡಲಾದ IP69-ರೇಟೆಡ್ ಡಿಸೈನ್ ಹೊಂದಿದೆ. ಫ್ರಂಟ್ ಮತ್ತು ರಿಯರ್ ಸೇರಿದಂತೆ ಎರಡೂ ಬದಿ ಗ್ಲಾಸ್ ಪೆನೆಲ್ಗಳನ್ನು ಹೊಂದಿದೆ. ಅಷ್ಟೇ ಅಲ್ಲ ಎಲ್ಲಾ ನಾಲ್ಕು ಬದಿಗಳಲ್ಲಿ 3D-ಕರ್ವ್ಡ್ ಎಡ್ಜ್ಗಳನ್ನು ಹೊಂದಿವೆ.
- ಇದು ಆಸಕ್ತಿದಾಯಕ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. ಇದು SONY IMX906 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, SONY IMX882 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು SONY IMX355 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ಇದು 16-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
- Realme GT 7 Pro ನಾವು ಕಂಡಿರುವ ಫೋನ್‌ನಲ್ಲಿನ ಅತ್ಯಂತ ಪವರ್ ಫುಲ್ ಬ್ಯಾಟರಿ ಪ್ಯಾಕ್‌ಗಳಿಂದ ಚಾಲಿತವಾಗಿದೆ.
iQOO 13:
- ಬೆಲೆ: ₹ 54,999
- ಬಿಡುಗಡೆ ದಿನಾಂಕ: 3ನೇ ಡಿಸೆಂಬರ್ 2024
- ಪ್ರೊಸೆಸರ್: ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ