ಕರ್ನಾಟಕ

karnataka

ETV Bharat / technology

ಆಹಾ! ಬಿಎಸ್​ಎನ್​ಎಲ್ ವಾರ್ಷಿಕ ಮೂರು ಪ್ಲಾನ್​ ಸೂಪರ್; ಕೈಗೆಟುಕುವ ದರದಲ್ಲಿ ಡೇಟಾ, ಕಾಲಿಂಗ್ ಸೇರಿ ಏನೆಲ್ಲಾ​ ಸೌಲಭ್ಯ!! - BSNL ANNUAL DATA PLANS

BSNL Annual Data Plans: ರಿಚಾರ್ಜ್​ ಪ್ಲಾನ್​ ವಿಷಯದಲ್ಲಿ ಜಿಯೋ, ಏರ್​ಟೆಲ್​ ಮತ್ತು ವೋಡಾಫೋನ್​-ಐಡಿಯಾಗಿಂತ ಬಿಎಸ್​ಎನ್​ಎಲ್​ ಸೂಪರ್​ ಎಂದು ಹೇಳಬಹುದು. ಬಿಎಸ್​ಎನ್​ಎಲ್​ ಕೈಗೆಟುಕುವ ದರದಲ್ಲಿ ಅನೇಕ ಸೌಲಭ್ಯಗಳು ನೀಡುವ ಮೂರು ಪ್ಲಾನ್​ಗಳ ವಿವರ ಇಲ್ಲಿದೆ.

AFFORDABLE RECHARGE PLAN  BSNL YEARLY PLAN  RECHARGE PLANS 2025  TRAI RULES
ಬಿಎಸ್​ಎನ್​ಎಲ್ ಮೂರು ವಾರ್ಷಿಕ ಪ್ಲಾನ್​ ಸೂಪರ್ (Photo Credit : IANS)

By ETV Bharat Tech Team

Published : Jan 28, 2025, 5:47 PM IST

BSNL Annual Data Plans: ಟ್ರಾಯ್​ ಆದೇಶದ ಬಳಿಕ ಎಲ್ಲ ಟೆಲಿಕಾಂ ಕಂಪನಿಗಳು ಬರೀ ಕಾಲಿಂಗ್​ ಮತ್ತು ಎಸ್​ಎಮ್​ಎಸ್​ ಪ್ಯಾಕ್​ಗಳನ್ನು ಘೋಷಿಸಿದವು. ಆದ್ರೆ ಎಲ್ಲ ಟೆಲಿಕಾಂ ಕಂಪನಿಗಳು ವಾರ್ಷಿಕ ಪ್ಲಾನ್ ಮೊತ್ತವನ್ನು ಗಗನಕ್ಕೇರಿಸಿ ಕೇವಲ ಎಸ್​ಎಮ್​ಎಸ್​ ಮತ್ತು ಕಾಲಿಂಗ್​ ಸೌಲಭ್ಯವನ್ನು ಮಾತ್ರ ಪರಿಚಯಿಸಿವೆ. ಆದ್ರೆ ಬಿಎಸ್​ಎನ್​​ಎಲ್​ನ ಈ ವಾರ್ಷಿಕ ಪ್ಲಾನ್​ ಎಲ್ಲ ಟೆಲಿಕಾಂ ಕಂಪನಿಗಳಿಗೆ ಠಕ್ಕರ್​ ನೀಡುವಂತಿದೆ. ಅದರ ಕುರಿತಾದ ಮಾಹಿತಿ ಇಲ್ಲಿದೆ.

ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್​ಗಿಂತ ಬಿಎಸ್​ಎನ್​ಎಲ್​ ಕಡಿಮೆ ಚಂದಾದಾರರನ್ನು ಹೊಂದಿದೆ. ಸರ್ಕಾರಿ ಕಂಪನಿಯಾದ ಬಿಎಸ್​ಎನ್​ಎಲ್​ ತನ್ನ ಅಗ್ಗದ ಮತ್ತು ಕೈಗೆಟುಕುವ ಪ್ಲಾನ್​ ಆಧಾರದ ಮೇಲೆ ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಬಿಎಸ್ಎನ್ಎಲ್ ತನ್ನ ಅಗ್ಗದ ಪ್ಲಾನ್​ನಿಂದ ಕಳೆದ ಕೆಲವು ತಿಂಗಳುಗಳಲ್ಲಿ ಲಕ್ಷಾಂತರ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ. ಬಿಎಸ್ಎನ್ಎಲ್​ನಲ್ಲಿ ಕೈಗೆಟುಕುವ ದರದಲ್ಲಿ ವಾರ್ಷಿಕ ಯೋಜನೆವೊಂದಿದ್ದು, ಇದು ಮತ್ತೊಮ್ಮೆ ಟೆಲಿಕಾಂ ಕಂಪನಿಗಳ ಹಾರ್ಟ್​ ಬೀಟ್​ ಹೆಚ್ಚಿಸುವಂತೆ ಮಾಡುತ್ತಿದೆ.

ರಿಚಾರ್ಜ್ ಯೋಜನೆಗಳು ದುಬಾರಿಯಾದಾಗಿನಿಂದ ಮೊಬೈಲ್ ಬಳಕೆದಾರರಲ್ಲಿ ಅಗ್ಗದ ಮತ್ತು ದೀರ್ಘಾವಧಿಯ ಪ್ಲಾನ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಹಲವಾರು ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳನ್ನು ತನ್ನ ಪೋರ್ಟ್​ಫೋಲಿಯೊದಲ್ಲಿ ಸೇರಿಸಿದೆ. ಇಡೀ ದೂರಸಂಪರ್ಕ ವಲಯದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಒಂದು ವರ್ಷದ ಮಾನ್ಯತೆಯನ್ನು ನೀಡುತ್ತಿರುವ ಸರ್ಕಾರಿ ಕಂಪನಿಯ ಪಟ್ಟಿಯಲ್ಲಿ ಇಂತಹದೊಂದು ಯೋಜನೆ ಇದೆ.

ಬಿಎಸ್ಎನ್ಎಲ್ ವಾರ್ಷಿಕ ಪ್ಲಾನ್ ​:ಬಿಎಸ್​ಎನ್​ಎಲ್ ತನ್ನ ಗ್ರಾಹಕರಿಗೆ 1500 ರೂ.ಗಿಂತ ಕಡಿಮೆ ವೆಚ್ಚದಲ್ಲಿ ಸುಮಾರು ಒಂದು ವರ್ಷದ ಮಾನ್ಯತೆಯ ಮೂರು ಪ್ಲಾನ್​ಗಳನ್ನು ಪರಿಚಯಿಸಿದೆ. ವಿಶೇಷವೆಂದರೆ ಇದರಲ್ಲಿ ನಿಮಗೆ ಉಚಿತ ಕರೆ ಜೊತೆಗೆ ಡೇಟಾ ಕೂಡ ಲಭ್ಯವಿದೆ.

1198 ರೂ.ಗಳ ರಿಚಾರ್ಜ್​ ಪ್ಲಾನ್ ​:ಬಿಎಸ್ಎನ್ಎಲ್​ನ ಈ ಪ್ರಿಪೇಯ್ಡ್ ಯೋಜನೆಯ ಬೆಲೆ 1,198 ರೂ. ಆಗಿದೆ. ನೀವು ಲೆಕ್ಕ ಹಾಕಿದರೆ, ದೈನಂದಿನ ಖರ್ಚು ಸರಿ ಸುಮಾರು 3.50 ರೂ. ಆಗುತ್ತದೆ. ಇದು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇನ್ನು ಪ್ರತಿ ತಿಂಗಳು 30 SMS ಕಳುಹಿಸುವ ಸೌಲಭ್ಯವೂ ಇದೆ. ಪ್ರತಿ ತಿಂಗಳು ನೀವು 300 ನಿಮಿಷಗಳಂತಹ ಉಚಿತ ಕರೆಯ ಪ್ರಯೋಜನಗಳು ಸಹ ಇದರಲ್ಲಿ ಲಭ್ಯವಿದೆ. ಇದಲ್ಲದೆ, ಈ ಯೋಜನೆಯು ಉಚಿತ ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತದೆ. ಇದರ ಮತ್ತೊಂದು ಬೆಸ್ಟ್​ ಪ್ರಯೋಜನ ಏನಂದ್ರೆ.. ನಿಮಗೆ ವಿದೇಶದಿಂದ ಒಳಬರುವ ಕರೆಗಳಿಗೆ ಶುಲ್ಕ ಪಾವತಿಸುವ ಅವಶ್ಯಕತೆಯಿಲ್ಲ.

ಈ ಪ್ಲಾನ್​ನಲ್ಲಿ ಸೀಮಿತ ಡೇಟಾ ಲಭ್ಯ : ಬಿಎಸ್ಎನ್ಎಲ್​ನ ಈ ಪ್ರಿಪೇಯ್ಡ್ ಯೋಜನೆಯಲ್ಲಿಯೂ ಸಹ ಗ್ರಾಹಕರು ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಆದರೆ ಇದು ಸಾಕಷ್ಟು ಸೀಮಿತವಾಗಿದೆ. ಈ ಯೋಜನೆಯಲ್ಲಿ, ನಿಮಗೆ ಒಂದು ತಿಂಗಳಿಗೆ ಕೇವಲ 3GB ಡೇಟಾವನ್ನು ಮಾತ್ರ ನೀಡಲಾಗುತ್ತದೆ. ಈ ರೀತಿಯಾಗಿ ನೀವು 12 ತಿಂಗಳಲ್ಲಿ ಕೇವಲ 36GB ಡೇಟಾವನ್ನು ಮಾತ್ರ ಬಳಸಲು ಸಾಧ್ಯವಾಗುತ್ತದೆ.

1199 ರೂ.ಗಳ ಪ್ಲಾನ್​ ವಿಶೇಷತೆವೇನು? :ಬಿಎಸ್ಎನ್ಎಲ್ ನ 1,199 ರೂ. ಯೋಜನೆಯು 336 ದಿನಗಳ ಮಾನ್ಯತೆಯನ್ನು ಹೊಂದಿರುವ ಪ್ರಿಪೇಯ್ಡ್ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ನೀವು ಅನ್​ಲಿಮಿಟೆಡ್​ ಕಾಲಿಂಗ್​, 24 ಜಿಬಿ ಡೇಟಾ, ಪ್ರತಿದಿನ 100 ಎಸ್​ಎಮ್​ಎಸ್​ ಪಡೆಯಲಿದ್ದೀರಿ. ಆದ್ರೆ ಈ ಪ್ಲಾನ್​ ಜಿಪಿ2 ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಈ ಪ್ಲಾನ್​ ರಿಚಾರ್ಜ್ ಮಾಡುವ ಮೊದಲು ನೀವು ಕಸ್ಟಮರ್​ ಕೇರ್​ಗೆ ಕಾಲ್​ ಮಾಡುವುದು ಒಳಿತು..

1499 ರೂ. ಪ್ಲಾನ್ ​:ಬಿಎಸ್ಎನ್ಎಲ್ ನ 1,499 ರೂ. ಯೋಜನೆಯು 336 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ನೀವು ಅನ್​ಲಿಮಿಟೆಡ್​ ಕಾಲಿಂಗ್​ ಸೌಲಭ್ಯ​, 24 ಜಿಬಿ ಡೇಟಾ, ಪ್ರತಿದಿನ 100 ಎಸ್​ಎಮ್​ಎಸ್​ ಪಡೆಯಲಿದ್ದೀರಿ. ಅಷ್ಟೇ ಅಲ್ಲ, ನೀವು ಈ ಪ್ಲಾನ್​ನಲ್ಲಿ ಉಚಿತ ರಾಷ್ಟ್ರೀಯ ರೋಮಿಂಗ್ ಅನ್ನು ಪಡೆಯಲಿದ್ದೀರಿ.. ಹೆಚ್ಚಿನ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಅಥವಾ ಬಿಎಸ್ಎನ್ಎಲ್ ಸಿಮ್ ಅನ್ನು ಸೆಕೆಂಡರಿ ಸಿಮ್ ಆಗಿ ಇಟ್ಟುಕೊಳ್ಳಲು ಬಯಸುವ ಗ್ರಾಹಕರಿಗೆ ಈ ಮೇಲಿನ ಯೋಜನೆಗಳು ಉತ್ತಮ ಆಯ್ಕೆಯಾಗಿವೆ.

ಓದಿ:ಟೆಲಿಕಾಂ ಕಂಪನಿಗಳಿಗೆ ಚಾಟಿ ಬೀಸಿದ ಟ್ರಾಯ್​: ರಿಚಾರ್ಜ್​ ಪ್ಲಾನ್​ಗಳ ಬೆಲೆಯಲ್ಲಿ ಭಾರಿ ಬದಲಾವಣೆ, 210 ರೂ. ಕಡಿತ!

ABOUT THE AUTHOR

...view details