Cars Under 8 Lakh:ಈಗಿನ ಕಾಲದಲ್ಲಿ ಬಹುತೇಕರು ತಮ್ಮ ಮನೆಯಲ್ಲಿ ಕಾರೊಂದು ಇರಬೇಕು ಎಂಬ ಆಸೆ ಹೊಂದಿದ್ದಾರೆ. ಕಾರು ಖರೀದಿಸುವುದು ಅಂದ್ರೆ ಅದೊಂದು ಸಾಮಾನ್ಯ ಕೆಲಸವಲ್ಲ. ಹೊಸ ಕಾರು ಖರೀದಿಸುವ ಮೊದಲು ನಾವು ಅದರ ವೈಶಿಷ್ಟ್ಯಗಳು, ಕಾರಿನ ಮೈಲೇಜ್, ಔಟ್ ಮತ್ತು ಇನ್ ಲುಕ್ ಸೇರಿದಂತೆ ಇನ್ನಿತರ ಕುರಿತು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ ಇವೆಲ್ಲವನ್ನೂ ಒಳಗೊಂಡಿರುವ ಕಾರು ಕೇವಲ ಕೈಗೆಟುಕುವ ದರದಲ್ಲಿ ನಮಗೆ ಲಭ್ಯವಾಗಬೇಕು ಎಂಬುದು ನಮ್ಮ ಆಲೋಚನೆಯಾಗಿರುತ್ತದೆ. ಅದಕ್ಕಾಗಿ ನಾವು ಸೆಫ್ಟಿ, ಫೀಚರ್ ಮತ್ತು ಮೈಲೇಜ್ ನೀಡುವಂತಹ ಕೆಲ ವಾಹನಗಳ ಲಿಸ್ಟ್ ಕೊಟ್ಟಿದ್ದೇವೆ. ಈ ಕಾರುಗಳು ಕೇವಲ 8 ಲಕ್ಷ ರೂಪಾಯಿಗಳೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಈ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಟಾಟಾ ನೆಕ್ಸಾನ್:ಟಾಟಾ ನೆಕ್ಸಾನ್ 5500 ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್ ಜೊತೆ ಈ ಕಾರು 88.2 ಪಿಎಸ್ ಪವರ್ ನೀಡುತ್ತದೆ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 382 ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ. ಈ ಟಾಟಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ. ಈ ವಾಹನವು 17 ರಿಂದ 24 kmpl ಮೈಲೇಜ್ ನೀಡುತ್ತದೆ.
ಈ ಟಾಟಾ ಕಾರಿಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಕಾರು 5 - ಸ್ಟಾರ್ ಸುರಕ್ಷತಾ ರೇಟಿಂಗ್ ಸಹ ಪಡೆದುಕೊಂಡಿದೆ. ಈ ಕಾರು ಎಲೆಕ್ಟ್ರಿಕ್ ಸನ್‌ರೂಫ್ ಸಹ ಹೊಂದಿದೆ. ಟಾಟಾ ನೆಕ್ಸಾನ್‌ನ ಎಕ್ಸ್ ಶೋ ರೂಂ ಬೆಲೆ ರೂ 7.99 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಹೀಂದ್ರ XUV 3XO: ಮಹೀಂದ್ರಾ XUV 3XO ಸಹ ಬಜೆಟ್ ಸ್ನೇಹಿ ಕಾರು. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಡೀಸೆಲ್ ಎಂಜಿನ್ 86 kW ಪವರ್ ಮತ್ತು 300 Nm ಟಾರ್ಕ್ ಉತ್ಪಾದಿಸುತ್ತದೆ. ಆದರೆ, ಪೆಟ್ರೋಲ್ ಎಂಜಿನ್‌ನಿಂದ ಈ ಕಾರು 96 kW ಪವರ್ ನೀಡುತ್ತದೆ ಮತ್ತು 230 Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 18 ರಿಂದ 21 kmpl ಮೈಲೇಜ್ವರೆಗೆ ನೀಡುತ್ತದೆ.